ನವದೆಹಲಿ: ಹಿರಿಯ ಬಿಜೆಪಿ ಮುಖಂಡ ಮುರಳಿ ಮನೋಹರ್ ಜೋಶಿ ಅವರು ಗುರುವಾರ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿದ್ದಾರೆ.
ಈಗ ತಮ್ಮ ತಮ್ಮ ಟ್ವೀಟ್ ಮೂಲಕ ಜೆಎನ್ಯು ಉಪಕುಲಪತಿ ವಿರುದ್ಧ ಟ್ವೀಟ್ ಮಾಡಿರುವ ಮನೋಹರ್ ಬಿಜೆಪಿ ಹಿರಿಯ ನಾಯಕ ಮನೋಹರ್ ಜೋಷಿ 'ವರದಿಗಳು ಹೇಳುವಂತೆ ಈ ಹಿಂದೆ ಎರಡು ಬಾರಿ ಮಾನವ ಅಭಿವೃದ್ದಿ ಸಚಿವಾಲಯ ಶುಲ್ಕ ಹೆಚ್ಚಳ ವಿಚಾರವಾಗಿ ಸೂಕ್ತ ಸೂತ್ರದೊಂದಿಗೆ ಬರಲು ಹೇಳಿತ್ತು, ಅಲ್ಲದೆ ಅವರಿಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಮಾತುಕತೆ ನಡೆಸಲು ಕೂಡ ಹೇಳಿತ್ತು. ಆದರೆ ಅಚ್ಚರಿ ಎನ್ನುವಂತೆ ಉಪ ಕುಲಪತಿ ಇದ್ಯಾವ ಪ್ರಸ್ತಾವವನ್ನು ಕೂಡ ಈಡೇರಿಸಿಲ್ಲ.ಆದ್ದರಿಂದ ಈ ನಡವಳಿಕೆ ಸರಿಯಲ್ಲ. ನನ್ನ ಪ್ರಕಾರ ಈ ಉಪ ಕುಲಪತಿ ಅಧಿಕಾರದಲ್ಲಿ ಮುಂದುವರೆಯುವುದು ಸರಿಯಲ್ಲ' ಎಂದು ಟ್ವೀಟ್ ಮಾಡಿದ್ದಾರೆ.
— Murli Manohar Joshi (@drmmjoshibjp) January 9, 2020
ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಜೋಶಿ, ವರ್ಧಿತ ಶುಲ್ಕದ ಸಮಸ್ಯೆಯನ್ನು ಪರಿಹರಿಸಲು ಕಾರ್ಯ ಸೂತ್ರವನ್ನು ತಲುಪಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಶಿಕ್ಷಣ ಸಚಿವಾಲಯವು ಉಪಕುಲಪತಿಗೆ ಎರಡು ಬಾರಿ ಸಲಹೆ ನೀಡಿದೆ ಎಂಬ ವರದಿಗಳನ್ನು ಉಲ್ಲೇಖಿಸಿದೆ.