ನೋ ಪಾರ್ಕಿಂಗ್ ನಲ್ಲಿ ಕಾರ್ ನಿಲ್ಲಿಸಿದ್ರೆ ತೆರಬೇಕಾದೀತು 10 ಸಾವಿರ ರೂ. ದಂಡ!

ಬೃಹತ್ ಬೆಂಗಳೂರು ಮುನಿಸಿಪಲ್ ಕಾರ್ಪೋರೇಶನ್ ನೋ ಪಾರ್ಕಿಂಗ್ ಸ್ಥಳದಲ್ಲಿ ಕಾರೂಗಳನ್ನು ನಿಲ್ಲಿಸುವವರಿಗೆ ಬರೋಬ್ಬರಿ 10,000 ರೂ. ದಂಡ ಹಾಕುವ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ. 

Last Updated : Jun 20, 2019, 10:17 AM IST

Trending Photos

ನೋ ಪಾರ್ಕಿಂಗ್ ನಲ್ಲಿ ಕಾರ್ ನಿಲ್ಲಿಸಿದ್ರೆ ತೆರಬೇಕಾದೀತು 10 ಸಾವಿರ ರೂ. ದಂಡ! title=
Pic Courtesy: DNA

ಮುಂಬೈ: ನೀವು ಕಾರಿಗೆ ಹೇಗೆ ದುಬಾರಿ ಬೆಲೆ ಕೊಟ್ಟು ಕೊಳ್ಳುತ್ತೀರೋ ಹಾಗೇ ಈಗ ನೋ ಪಾರ್ಕಿಂಗ್ ನಲ್ಲಿ ಕಾರ್ ಪಾರ್ಕ್ ಮಾಡಿದ್ರೆ ದುಬಾರಿ ದಂಡವನ್ನೇ ರೆರಬೇಕಾದ ಸಂದರ್ಭ ಎದುರಾಗಿದೆ. ಇಂತಹ ಒಂದು ನಿಯಮ ಜಾರಿಗೆ ಬಂದಿರುವುದು ಮುಂಬೈನಲ್ಲಿ!

ಬೃಹತ್ ಬೆಂಗಳೂರು ಮುನಿಸಿಪಲ್ ಕಾರ್ಪೋರೇಶನ್ ನೋ ಪಾರ್ಕಿಂಗ್ ಸ್ಥಳದಲ್ಲಿ ಕಾರೂಗಳನ್ನು ನಿಲ್ಲಿಸುವವರಿಗೆ ಬರೋಬ್ಬರಿ 10,000 ರೂ. ದಂಡ ಹಾಕುವ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ. ಈ ನಿಯಮ ಜುಲೈ 7 ರಿಂದ ಜಾರಿಗೆ ಬರಲಿದ್ದು, ಇ-ಚಲನ್ ಮೂಲಕ ಬಿಎಂಸಿ ದಂಡ ವಸೂಲಿ ಮಾಡಲಿದೆ.

ಮುಂಬೈನಲ್ಲಿ ಹಣ ನೀಡಿ ವಾಹನ ನಿಲುಗಡೆ(Paid parking)ಗೆ ಅವಕಾಶ ನೀಡಿದ್ದರೂ ಸಹ, ಜನರು ಅಲ್ಲಿ ವಾಹನ ನಿಲ್ಲಿಸದೆ ಇತರ ಸ್ಥಳಗಳಲ್ಲಿ ವಾಹನ ನಿಲ್ಲಿಸುವುದು ಸಾಮಾನ್ಯವಾಗಿದೆ. ಇದರಿಂದಾಗಿ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಮುಂಬೈನ 146 ಸ್ಥಳಗಳಲ್ಲಿ ಪಾರ್ಕಿಂಗ್ ಸೌಲಭ್ಯ ಲಭ್ಯವಿದೆ. ಆದಾಗ್ಯೂ ಜನರು ನೋ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನ ನಿಲ್ಲಿಸುತ್ತಿದ್ದಾರೆ. ಹಾಗಾಗಿ ವಾಹನ ನಿಲುಗಡೆಗೆ ಸೌಲಭ್ಯ ಇರುವ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ನೋ ಪಾರ್ಕಿಂಗ್ ಸ್ಥಳದಲ್ಲಿ ಯಾವುದೇ ವಾಹನ ನಿಲುಗಡೆ ಮಾಡಿದರೂ ಆ ವಾಹನಕ್ಕೆ 10,000 ರೂ. ದಂಡ ವಿಧಿಸಲಾಗುವುದು ಎಂದು ಬಿಎಂಸಿ ಆಯುಕ್ತ ಪ್ರವೀಣ್ ಪರದೇಸಿ ಆದೇಶಿಸಿದ್ದಾರೆ.

Trending News