ಕೆರೆ ಸುತ್ತ ಬಫರ್ ವಲಯ: ಎನ್ ಜಿ ಟಿ ಆದೇಶ ರದ್ದು ಪಡಿಸಿದ ಸುಪ್ರೀಂಕೋರ್ಟ್

ಸುಪ್ರೀಂಕೋರ್ಟ್ ಮಂಗಳವಾರದಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಮೇ 4 2016 ರಂದು ಕೆರೆ ಹಾಗೂ ನೀರಿನ ಸುತ್ತಲಿನ ಬಫರ್ ವಲಯಗಳನ್ನು ವಿಸ್ತ್ರರಿಸಬೇಕೆಂದು ನೀಡಿದ್ದ ತೀರ್ಪನ್ನು ವಜಾಗೊಳಿಸಬೇಕೆಂದು ಸಲ್ಲಿಸಿದ್ದ ಕರ್ನಾಟಕದ ಮನವಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿದೆ.

Last Updated : Mar 5, 2019, 07:09 PM IST
ಕೆರೆ ಸುತ್ತ ಬಫರ್ ವಲಯ: ಎನ್ ಜಿ ಟಿ ಆದೇಶ ರದ್ದು ಪಡಿಸಿದ ಸುಪ್ರೀಂಕೋರ್ಟ್  title=

ನವದೆಹಲಿ: ಸುಪ್ರೀಂಕೋರ್ಟ್ ಮಂಗಳವಾರದಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಮೇ 4 2016 ರಂದು ಕೆರೆ ಹಾಗೂ ನೀರಿನ ಸುತ್ತಲಿನ ಬಫರ್ ವಲಯಗಳನ್ನು ವಿಸ್ತ್ರರಿಸಬೇಕೆಂದು ನೀಡಿದ್ದ ತೀರ್ಪನ್ನು ವಜಾಗೊಳಿಸಬೇಕೆಂದು ಸಲ್ಲಿಸಿದ್ದ ಕರ್ನಾಟಕದ ಮನವಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿದೆ.

ಈ ವಿಚಾರವಾಗಿ ನ್ಯಾಯಮೂರ್ತಿ ಎ.ಕೆ.ಸಿಕ್ರಿ, ಎಸ್ ಅಬ್ದುಲ್ ನಜೀರ್ ಮತ್ತು ಎಂ.ಆರ್ ಷಾ ರನ್ನು ಒಳಗೊಂಡ ಪೀಠವು ವಿಚಾರಣೆ ನಡೆಸಿ ತೀರ್ಪನ್ನು ನೀಡಿದೆ.ರಿಯಲ್ ಎಸ್ಟೇಟ್ ಮಾಲೀಕರು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ನೀಡಿರುವ ತೀರ್ಪನ್ನು ವಿರೋಧಿಸಿ ಸುಪ್ರೀಂಗೆ ಮೊರೆ ಹೋಗಿದ್ದರು,ಈ ಹಿನ್ನಲೆಯಲ್ಲಿ ಇದೇ ಜನವರಿ 24 ರಂದು ಸುಪ್ರೀಂ ತೀರ್ಪನ್ನು ಕಾಯ್ದಿರಿಸಿತ್ತು.

ಈ ಹಿಂದೆ ಕೆರೆ ಹಾಗೂ ನೀರಿನ ಮೂಲಗಳ ಸುತ್ತ ಬಫರ್ ವಲಯವನ್ನು ಸೃಷ್ಟಿಸಲು ಕೋರಿ ಫಾರ್ವರ್ಡ್ ಫೌಂಡೆಶನ್ ಎನ್ ಜಿ ಟಿಯಲ್ಲಿ ಅರ್ಜಿ ಸಲ್ಲಿಸಿತ್ತು, ಈ ವಿಚಾರವಾಗಿ ಅದು ಮೇ 4, 2016 ರಂದು ತೀರ್ಪನ್ನು ನೀಡಿತ್ತು. ಈ ಹಿನ್ನಲೆಯಲ್ಲಿ ಸರ್ಕಾರದ ಪರವಾಗಿ ವಾದಿಸಿದ ಅಡ್ವೋಕೇಟ್ ಜನರಲ್ ಉದಯ್ ಹೊಳ್ಳ, ಇದರಿಂದ ಶೇ 95 ರಷ್ಟು ಕಟ್ಟಡಗಳನ್ನು ನಾಶ ಮಾಡಬೇಕಾಗುತ್ತದೆ, ಅಲ್ಲದೆ ಅದಕ್ಕೆ 3 ಲಕ್ಷ ಕೋಟಿ ಪರಿಹಾರವನ್ನು ನೀಡಬೇಕಾಗುತ್ತದೆ ಎಂದು ವಾದಿಸಿದರು. ಕರ್ನಾಟಕದ ವಾದವನ್ನು ಪುರಸ್ಕರಿಸಿದ ಸುಪ್ರೀಂಕೋರ್ಟ್ ಎನ್ ಜಿ ಟಿ ಆದೇಶವನ್ನು ರದ್ದುಪಡಿಸಬೇಕೆಂದು ತೀರ್ಪು ನೀಡಿತು. 

 

 

Trending News