ಏರ್ ಏಷ್ಯಾದಿಂದ ಬಂಪರ್‌ ಆಫರ್‌ ಕೇವಲ 1499 ರೂ.ಗೆ ಟಿಕೆಟ್‌ ಬುಕ್‌ ಮಾಡಿ!

ಏರ್ ಏಷ್ಯಾ ಇಂಡಿಯಾ ಅಗ್ಗದ ವಿಮಾನ ಪ್ರಯಾಣದ ಆಫರ್ ನೀಡಿದೆ. ಕೈಗೆಟಕುವ ದರದಲ್ಲಿ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಲು ಏರ್‌ಏಷ್ಯಾ ಇಂಡಿಯಾ ಮುಂದಾಗಿದೆ. ನೀವು ಏರ್‌ ಏಷ್ಯಾ ಇಂಡಿಯಾದ #PayDaySale ಅಡಿಯಲ್ಲಿ ಏರ್ ಟಿಕೆಟ್‌ಗಳನ್ನು 1,499 ರೂ.ಗಳಿಂದ ಬುಕ್ ಮಾಡಬಹುದು. ಏರ್ ಏಷ್ಯಾ ಇಂಡಿಯಾ ತನ್ನ ಪೇ ಡೇ ಸೇಲ್ ಆರಂಭಿಸುವುದಾಗಿ ಘೋಷಿಸಿದೆ.  

Written by - Bhavishya Shetty | Last Updated : Jul 29, 2022, 03:11 PM IST
  • ಏರ್ ಏಷ್ಯಾ ಇಂಡಿಯಾ ಅಗ್ಗದ ವಿಮಾನ ಪ್ರಯಾಣದ ಆಫರ್ ನೀಡಿದೆ
  • ಕೈಗೆಟಕುವ ದರದಲ್ಲಿ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಿ
  • ಏರ್‌ ಏಷ್ಯಾ ಇಂಡಿಯಾದ #PayDaySale ಅಡಿಯಲ್ಲಿ ಏರ್ ಟಿಕೆಟ್‌ಗಳನ್ನು ಬುಕ್ ಮಾಡಬಹುದು
ಏರ್ ಏಷ್ಯಾದಿಂದ ಬಂಪರ್‌ ಆಫರ್‌ ಕೇವಲ 1499 ರೂ.ಗೆ ಟಿಕೆಟ್‌ ಬುಕ್‌ ಮಾಡಿ! title=
AirAsia Book

ಮುಂಬರುವ ಕೆಲವು ತಿಂಗಳುಗಳಲ್ಲಿ ನೀವು ವಿಮಾನದಲ್ಲಿ ಎಲ್ಲಿಗಾದರೂ ಪ್ರಯಾಣ ಬೆಳಸುವ ಯೋಜನೆಯನ್ನು ಹೊಂದಿದ್ದರೆ, ಈಗಲೇ ನಿಮ್ಮ ಟಿಕೆಟ್ ಅನ್ನು ಬುಕ್ ಮಾಡಿ. ಆದರೆ ಅದಕ್ಕೂ ಮುನ್ನ ಈ ಸುದ್ದಿ ಓದಿ. ಏಕೆಂದರೆ ನಿಮಗೆ ಒಂದೊಳ್ಳೆ ಆಫರ್‌ ಬಗ್ಗೆ ಮಾಹಿತಿಯನ್ನು ನೀಡಿಲಿದ್ದೇವೆ. 

ಇದನ್ನೂ ಓದಿ: Arecanut Price: ರಾಜ್ಯದ ಇಂದಿನ ಅಡಿಕೆ ಮಾರುಕಟ್ಟೆಯ ಧಾರಣೆ ಹೀಗಿದೆ ನೋಡಿ

ಏರ್ ಏಷ್ಯಾ ಇಂಡಿಯಾ ಅಗ್ಗದ ವಿಮಾನ ಪ್ರಯಾಣದ ಆಫರ್ ನೀಡಿದೆ. ಕೈಗೆಟಕುವ ದರದಲ್ಲಿ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಲು ಏರ್‌ಏಷ್ಯಾ ಇಂಡಿಯಾ ಮುಂದಾಗಿದೆ. ನೀವು ಏರ್‌ ಏಷ್ಯಾ ಇಂಡಿಯಾದ #PayDaySale ಅಡಿಯಲ್ಲಿ ಏರ್ ಟಿಕೆಟ್‌ಗಳನ್ನು 1,499 ರೂ.ಗಳಿಂದ ಬುಕ್ ಮಾಡಬಹುದು. ಏರ್ ಏಷ್ಯಾ ಇಂಡಿಯಾ ತನ್ನ ಪೇ ಡೇ ಸೇಲ್ ಆರಂಭಿಸುವುದಾಗಿ ಘೋಷಿಸಿದೆ.

ಜುಲೈ 31ರವರೆಗೆ ಟಿಕೆಟ್ ಬುಕ್ ಮಾಡಬಹುದು: 
ಏರ್ ಏಷ್ಯಾ ಇಂಡಿಯಾದ ಈ ಮಾರಾಟವು ಜುಲೈ 28 ರಿಂದ 31 ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಮಾಡಿದ ಬುಕಿಂಗ್‌ಗಳಿಗೆ ಈ ಕೊಡುಗೆ ಅನ್ವಯಿಸುತ್ತದೆ. ಅಂದರೆ, ನೀವು ಈಗ ಎರಡು ದಿನಗಳಲ್ಲಿ ಟಿಕೆಟ್‌ ಬುಕ್‌ ಮಾಡಬೇಕು. ಈ ಯೋಜನೆಯಡಿಯಲ್ಲಿ ಟಿಕೆಟ್ ಕಾಯ್ದಿರಿಸಿ, ಆಗಸ್ಟ್ 15 ಮತ್ತು ಡಿಸೆಂಬರ್ 31 ರ ನಡುವೆ ಪ್ರಯಾಣಿಸಬಹುದು. ಸೀಮಿತ ದಾಸ್ತಾನುಗಳಿಗಾಗಿ ಏರ್‌ಲೈನ್‌ನಿಂದ ಈ ಕೊಡುಗೆಯನ್ನು ನೀಡಲಾಗಿದೆ. ಮೊದಲು ಬಂದವರಿಗೆ ಮೊದಲ ಸೇವೆಯ ಆಧಾರದ ಮೇಲೆ ಅನ್ವಯವಾಗುವ ಈ ಆಫರ್‌ಗೆ ಸಂಬಂಧಿಸಿದಂತೆ, ನಿರ್ದಿಷ್ಟ ಮಾರ್ಗದಲ್ಲಿ ಈ ಯೋಜನೆಯಡಿ ನಿಗದಿಪಡಿಸಿದ ಸೀಟುಗಳನ್ನು ಮಾರಾಟ ಮಾಡಿದ ನಂತರ ನಿಯಮಿತ ಬೆಲೆಗಳು ಅನ್ವಯವಾಗುತ್ತವೆ ಎಂದು ಏರ್‌ಲೈನ್ ಹೇಳಿದೆ.

ಇದನ್ನೂ ಓದಿ: ಯುನಿಕಾರ್ನ್ ಕಂಪನಿಗಳಲ್ಲಿ ಭಾರತೀಯರೇ ಮೇಲುಗೈ: ಯುಎಸ್‌ ಸಮೀಕ್ಷೆಯಿಂದ ಬಯಲು

ಟಿಕೆಟ್ ಬುಕ್ ಮಾಡುವುದು ಹೇಗೆ?
#PayDaySale ಅಡಿಯಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಲು, ನೀವು ಮೊದಲು ಏರ್ ಏಷ್ಯಾ ವೆಬ್‌ಸೈಟ್ http://airasia.co.in ಗೆ ಭೇಟಿ ನೀಡಬೇಕು. ಆಫರ್‌ನ ಅಡಿಯಲ್ಲಿ ಬುಕ್ ಮಾಡಿದ ಟಿಕೆಟ್‌ಗಳಲ್ಲಿ ನೀವು 15 ಆಗಸ್ಟ್‌ನಿಂದ 31 ಡಿಸೆಂಬರ್ 2022 ರವರೆಗೆ ಪ್ರಯಾಣಿಸಬಹುದು. ಈ ಹಿಂದೆ ವಿಮಾನಯಾನ ಸಂಸ್ಥೆಯು ಜುಲೈ 7-10 ರ ನಡುವೆ ಬುಕ್ ಮಾಡಿದ ಟಿಕೆಟ್‌ಗಳಿಗಾಗಿ ಆಯ್ದ ದೇಶೀಯ ಮಾರ್ಗಗಳಲ್ಲಿ 1,497 ರೂಪಾಯಿಗಳಿಂದ ಪ್ರಾರಂಭವಾಗುವ ದರಗಳೊಂದಿಗೆ 'ಸ್ಪ್ಲಾಶ್ ಸೇಲ್' ಅನ್ನು ಘೋಷಿಸಿತ್ತು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News