ಉತ್ತರಾಖಂಡ್: ಇತ್ತೀಚೆಗೆ ಭೂಕುಸಿತದಿಂದಾಗಿ ದೊಡ್ಡ ಅನಾಹುತಗಳೇ ನೆಡಯುತ್ತಿವೆ. ವರುಣನ ಆರ್ಭಟಕ್ಕೆ ಭಾರೀ ಭೂಕುಸಿತ ಸಂಭವಿಸಿ ಅಪಾರ ಸಾವು-ನೋವು ಉಂಟಾಗಿರುವ ಘಟನೆಗಳು ನಡೆದಿವೆ. ಅನೇಕ ವಿಡಿಯೋಗಳು ಸೋಷಿಯಲ್ ಮೀಡಿಯಾ(Social Media)ಗಳಲ್ಲಿ ವೈರಲ್ ಆಗಿವೆ. ಇದೀಗ ಅದೇ ರೀತಿಯ ಮತ್ತೊಂದು ಭಯಾನಕ ವಿಡಿಯೋ ವೈರಲ್ ಆಗುತ್ತಿದೆ.
ಉತ್ತರಾಖಂಡ್ ರಾಜ್ಯದ ನೈನಿತಾಲ್(Nainital)ನಲ್ಲಿ ರಸ್ತೆ ಮೇಲೆಯೇ ಭಾರೀ ಪ್ರಮಾಣದಲ್ಲಿ ಭೂಕುಸಿತ(Landslide)ವಾಗಿದೆ. ನೋಡನೋಡುತ್ತಿದ್ದಂತೆ ಭೂಕುಸಿತ ಸಂಭವಿಸಿ ರಸ್ತೆಯೇ ಬಂದ್ ಆಗಿದೆ. ಈ ವೇಳೆ 14 ಮಂದಿ ಪ್ರಯಾಣಿಕರಿದ್ದ ಖಾಸಗಿ ಬಸ್ ವೊಂದು ಕೂದಲೆಳೆಯ ಅಂತರದಲ್ಲಿ ಪಾರಾಗಿದೆ. ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
ಇದನ್ನೂ ಓದಿ: Jan Ashirwad Yatra : ಮುಂಬೈನಲ್ಲಿ ಬಿಜೆಪಿ ವಿರುದ್ಧ 17 ಹೊಸ FIR ದಾಖಲು!
ಈ ಭಯಾನಕ ದೃಶ್ಯ(Horrible Scene)ವನ್ನು ಮೊಬೈಲ್ ನಲ್ಲಿ ಸೆರೆಹಿಡಿಯಲಾಗಿದ್ದು, ನೋಡುಗರ ಎದೆ ಝಲ್ಲೆನ್ನುವಂತಿದೆ. ರಸ್ತೆಯಲ್ಲಿ ಸಾಗುತ್ತಿದ್ದ ಬಸ್ ಮುಂದೆಯೇ ಬೃಹತ್ ಗಾತ್ರದ ಗುಡ್ಡವು ನೋಡನೋಡುತ್ತಿದ್ದಂತೆಯೇ ಕುಸಿದಿದೆ. ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಗುಡ್ಡದ ಮೇಲಿಂದ ಅಪಾರ ಪ್ರಮಾಣದ ಮಣ್ಣು ಕುಸಿಯಲು ಪ್ರಾರಂಭಿಸಿದೆ. ಈ ವೇಳೆ ಬಸ್ ಚಾಲಕ ಇದ್ದಕ್ಕಿದ್ದಂತೆಯೇ ವಾಹನಕ್ಕೆ ಬ್ರೇಕ್ ಹಾಕಿ ಹಿಂದಕ್ಕೆ ತೆಗೆದುಕೊಂಡಿದ್ದಾನೆ. ಈ ವೇಳೆ ಪ್ರಯಾಣಿಕರು ಒಬ್ಬೊಬ್ಬರಾಗಿ ಇಳಿದು ಓಡಿಹೋಗಿದ್ದಾರೆ.
#WATCH | Uttarakhand: A bus carrying 14 passengers narrowly escaped a landslide in Nainital on Friday. No casualties have been reported. pic.twitter.com/eyj1pBQmNw
— ANI (@ANI) August 21, 2021
ಭೂಕುಸಿತ(Nainital Landslide) ಪರಿಣಾಮ ಗುಡ್ಡದಿಂದ ಭಾರೀ ಪ್ರಮಾಣದ ಮಣ್ಣು ರಸ್ತೆ ಮೇಲೆ ಬಿದ್ದಿದೆ. ಈ ವೇಳೆ ಪ್ರಾಣ ಉಳಿಸಿಕೊಳ್ಳುವ ಧಾವಂತದಲ್ಲಿ ಬಸ್ನಲ್ಲಿದ್ದ ಪ್ರಯಾಣಿಕರು ಕಿಟಕಿ ಮತ್ತು ಬಾಗಿಲಿನ ಮೂಲಕ ಬಸ್ನಿಂದ ಹೊರಗಿಳಿದು ಓಡಿ ಹೋಗಿರುವ ದೃಶ್ಯವನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಬಸ್ ಚಾಲಕ ಕೂಡ ಸಮಯಪ್ರಜ್ಞೆ ಮೆರೆದು ಬಸ್ ಅನ್ನು ಹಿಂದಕ್ಕೆ ತೆಗೆದುಕೊಂಡಿದ್ದರಿಂದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.
ಇದನ್ನೂ ಓದಿ: ಸಾಮಾಜಿಕ ಮಾಧ್ಯಮಗಳಲ್ಲಿ ತಾಲಿಬಾನ್ ಬೆಂಬಲಿಸಿದ 14 ಜನರ ಬಂಧನ
ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ, ಎಲ್ಲರೂ ಪ್ರಣಾಪಾಯದಿಂದ ಪಾರಾಗಿದ್ದಾರೆ ಅಂತಾ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಪರಿಣಾಮ ಅಲ್ಲಲ್ಲಿ ಭೂಕುಸಿತ(Landslide) ಸಂಭವಿಸುತ್ತಿದೆ. ಪ್ರವಾಸಿಗರು, ಬಸ್ ಚಾಲಕರು ಎಚ್ಚರಿಕೆಯಿಂದ ಸಂಚರಿಸುವಂತೆ ಸಲಹೆ ನೀಡಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ