ಸುಪ್ರೀಂ‌ ಕೋರ್ಟಿನಲ್ಲಿ ಇಂದು ಸಿಬಿಐ V/s ಸಿಬಿಐ ಕೇಸ್ ವಿಚಾರಣೆ

ಅಲೋಕ್ ವರ್ಮಾ ರಫೇಲ್ ಡೀಲ್ ವಿಚಾರಣೆಗೆ ಮುಂದಾಗಿದ್ದರಿಂದಲೇ ಅವರನ್ನು ರಾತ್ರೋರಾತ್ರಿ ವರ್ಗಾ ಮಾಡಲಾಗಿದೆ. ಆದುದರಿಂದ ಸಿಬಿಐ ಸಂಸ್ಥೆಯೊಳಗಿನ ಬೆಳವಣಿಗೆಗಳನ್ನು ವಿಶೇಷ ತನಿಖಾ ತಂಡದಿಂದ ತನಿಖೆ ಮಾಡಿಸಬೇಕೆಂದು ಕಾಮನ್ ಕಾಸ್ ಎಂಬ ಎನ್ ಜಿ ಓ ಪ್ರತ್ಯೇಕ ಅರ್ಜಿ ಸಲ್ಲಿಸಿತ್ತು.

Last Updated : Nov 29, 2018, 07:34 AM IST
ಸುಪ್ರೀಂ‌ ಕೋರ್ಟಿನಲ್ಲಿ ಇಂದು ಸಿಬಿಐ V/s ಸಿಬಿಐ ಕೇಸ್ ವಿಚಾರಣೆ title=

ನವದೆಹಲಿ: ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಾದ ಸಿಬಿಐನಲ್ಲಿ ರಾತ್ರೋರಾತ್ರಿ ನಿರ್ದೇಶಕರನ್ನು ವರ್ಗಮಾಡಿದ ಮತ್ತು ಇಬ್ಬರು ಸಿಬಿಐ ನಿರ್ದೇಶಕರ ನಡುವಿನ ಅತಃಕಲಹದ ಬಗ್ಗೆ ಇಂದು ದೇಶದ ಸರ್ವೋಚ್ಛ ನ್ಯಾಯಾಲಯ ವಿಚಾರಣೆ ನಡೆಸಲಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ನೇತೃತ್ವದ ಪೀಠದಲ್ಲಿ ವಿಚಾರಣೆ ನಡೆಯಲಿದೆ.

ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ತಮ್ಮನ್ನು ರಾತ್ರೋರಾತ್ರಿ ವರ್ಗ ಮಾಡಿದ್ದನ್ನು ಪ್ರಶ್ನಿಸಿ ಸುಪ್ರೀಂ‌ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.‌  ಇನ್ನೊಬ್ಬ ನಿರ್ದೇಶಕ ರಾಕೇಶ್ ಅಸ್ತಾನಾ ಕೂಟ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಅಲೋಕ್ ವರ್ಮಾ ರಫೇಲ್ ಡೀಲ್ ವಿಚಾರಣೆಗೆ ಮುಂದಾಗಿದ್ದರಿಂದಲೇ ಅವರನ್ನು ರಾತ್ರೋರಾತ್ರಿ ವರ್ಗಾ ಮಾಡಲಾಗಿದೆ. ಆದುದರಿಂದ ಸಿಬಿಐ ಸಂಸ್ಥೆಯೊಳಗಿನ ಬೆಳವಣಿಗೆಗಳನ್ನು ವಿಶೇಷ ತನಿಖಾ ತಂಡದಿಂದ ತನಿಖೆ ಮಾಡಿಸಬೇಕೆಂದು ಕಾಮನ್ ಕಾಸ್ ಎಂಬ ಎನ್ ಜಿ ಓ ಪ್ರತ್ಯೇಕ ಅರ್ಜಿ ಸಲ್ಲಿಸಿತ್ತು. 

ಈ ಎಲ್ಲಾ ಅರ್ಜಿಗಳನ್ನು ಒಟ್ಟುಗೂಡಿಸಿ ವಿಚಾರಣೆ ಆರಂಭಿಸಿದ್ದ ಸುಪ್ರೀಂ ಕೋರ್ಟ್, ಪ್ರಕರಣದ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಮೇಲ್ವಿಚಾರಣೆಯಲ್ಲಿ ತನಿಖೆ  ನಡೆಸಿ ವರದಿ ನೀಡುವಂತೆ ಸಿವಿಸಿಗೆ ಆದೇಶಿಸಿತ್ತು. ಸಿವಿಸಿ ಹೆಚ್ಚಿನ‌ ಕಾಲವಕಾಶ ಕೇಳಿತ್ತು. ಜೊತೆಗೆ ಅಲೋಕ್ ವರ್ಮಾ ಮತ್ತು ಹಾಲಿ ಉಸ್ತುವಾರಿ ನಿರ್ದೇಶಕ ನಾಗೇಶ್ವರ ರಾವ್ ಅವರಿಗೆ ಪ್ರತಿಕ್ರಿಯೆ ಸಲ್ಲಿಸಲು ಸೂಚಿಸಿತ್ತು. 

ಈಗ ಇಬ್ಬರೂ‌ ಮುಚ್ಚಿದ ಲಕೋಟೆಯಲ್ಲಿ ಪ್ರತಿಕ್ರಿಯೆ ಸಲ್ಲಿಸಿದ್ದಾರೆ. ಆದರೆ ವರ್ಮಾ ಸಲ್ಲಿಸಿದ್ದ ಪ್ರತಿಕ್ರಿಯೆ ಮಾಧ್ಯಮಗಳಿಗೆ ಸೋರಿಕೆಯಾಗಿದೆ. ಈ ಬಗ್ಗೆ ಹಿಂದಿನ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಕಿಡಿಕಾರಿತ್ತು.‌ ಇವತ್ತು ಮತ್ತೆ ವಿಚಾರಣೆ ಕೈಗೆತ್ತಿಕೊಳ್ಳಲಿದೆ.

Trending News