CBSE class 12 Results: CBSE 12ನೇ ತರಗತಿ ಫಲಿತಾಂಶ ಪ್ರಕಟ, ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ಕ ಮಾಡಿ

CBSE 12ನೇ ತರಗತಿಯ ಫಲಿತಾಂಶಗಳು ಪ್ರಕಟಗೊಂಡಿವೆ. ಈ ಬಾರಿ 12 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು CBSE 12 ನೇ ತರಗತಿಯ ಪರೀಕ್ಷೆಗೆ ಹಾಜರಾಗಿದ್ದರು.

Last Updated : Jul 13, 2020, 01:47 PM IST
CBSE class 12 Results: CBSE 12ನೇ ತರಗತಿ ಫಲಿತಾಂಶ ಪ್ರಕಟ, ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ಕ ಮಾಡಿ title=

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) 12 ನೇ ತರಗತಿ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಈ ಬಾರಿ 12 ಲಕ್ಷ ವಿದ್ಯಾರ್ಥಿಗಳು 12 ನೇ ತರಗತಿಗೆ ಪರೀಕ್ಷೆ ಬರೆದಿದ್ದು ಇದನು ಅವರ ಫಲಿತಾಂಶಗಳನ್ನು ಘೋಷಿಸಲಾಗಿದೆ. ಸಿಬಿಎಸ್‌ಇ 12 ನೇ ತರಗತಿ ಪರೀಕ್ಷೆ 2020ರ ಫಲಿತಾಂಶಗಳನ್ನು ಪರಿಶೀಲಿಸಲು ವಿದ್ಯಾರ್ಥಿಗಳು CBSE ಯ ಅಧಿಕೃತ ವೆಬ್ ಸೈಟ್ ಆಗಿರುವ cbseresults.nic.in, cbse.nic.in ಮತ್ತು results.nic.in ಗೆ ಭೇಟಿ ನೀಡಬಹುದು. 

ಕೇಂದ್ರ ಮಾನವಸಂಪನ್ಮೂಲ ಖಾತೆ ಸಚಿವ ಡಾ. ರಮೇಶ್ ಪೋಖರಿಯಾಲ್ ನಿಶಾಂಕ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಈ ಮಾಹಿತಿ ನೀಡಿದ್ದಾರೆ. ಇದಕ್ಕೂ ಮೊದಲು ಸುಪ್ರೀಂ ಕೋರ್ಟ್ ನಲ್ಲಿ ಹೇಳಿಕೆ ನೀಡಿದ್ದ CBSEಮಂಡಳಿ ಜುಲೈ 15ರವರೆಗೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ಹೇಳಿತ್ತು. ಆದರೆ, ಫಲಿತಾಂಶಗಳನ್ನು ಎರಡು ದಿನ ಮುಂಚಿತವಾಗಿಯೇ ಪ್ರಕಟಿಸಲಾಗಿದೆ.

ಈ ಬಾರಿಯ ವಿಶೇಷತೆ ಎಂದರೆ ಈ ಬಾರಿ 12 ತರಗತಿಯ ಫಲಿತಾಂಶಗಳಿಗೆ ಮೆರಿಟ್ ಲಿಸ್ಟ್ ಬಿಡುಗಡೆಗೊಲಿಸಲಾಗಿಲ್ಲ ಎನ್ನಲಾಗಿದೆ. ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ಈ ಪರೀಕ್ಷೆಗಳನ್ನು ನಡೆಸಲಾಗಿದ್ದು. ಇದೆ ಹಿನ್ನೆಲೆ ಮೆರಿಟ್ ಲಿಸ್ಟ್ ಪ್ರಕಟಿಸಸಲಾಗುತ್ತಿಲ್ಲ ಎನ್ನಲಾಗಿದೆ. ಮುಂಬರುವ 48 ಗಂಟೆಗಳಲ್ಲಿ ವಿದ್ಯಾರ್ಥಿಗಳು CBSE ಅಧಿಕೃತ ವೆಬ್ಸೈಟ್ ಹಾಗೂ UMANG ಆಪ್ ಗೆ ಭೇಟಿ ನೀಡುವ ಮೂಲಕ ತಮ್ಮ ರಿಸಲ್ಟ್ಡಿ ನ ಜಿಟಲ್ ಮಾರ್ಕ್ ಶೀಟ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. 

Trending News