Viral Video: ಫ್ಯಾನ್ ಆಫ್ ಮಾಡಿದ್ದನ್ನು ಪ್ರಶ್ನಿಸಿದ ವ್ಯಕ್ತಿಗೆ ಚಪ್ಪಲಿಯಿಂದ ಪಟ ಪಟ ಅಂತಾ ಏಟು ಕೊಟ್ಟ ಮಹಿಳೆ!!

ವೈದ್ಯಕೀಯ ಕಾಲೇಜಿನ ಒಪಿಡಿಯಲ್ಲಿ ಆರಾಮವಾಗಿ ಮಲಗಿದ್ದ ವ್ಯಕ್ತಿಯೊಬ್ಬ ಮಹಿಳೆ ಕೂಲರ್ ಆಫ್ ಮಾಡಿದ ಬಳಿಕ ನಿದ್ರೆಯಿಂದ ಎದ್ದಿದ್ದಾನೆ. ಬಳಿಕ ಆಕೆಯ ಬಳಿ, ಏಕೆ ಕೂಲರ್ ಬಂದಿ ಮಾಡಿದಿರಿ ಎಂದು ಪ್ರಶ್ನಿಸಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದಿದ್ದು, ಬಳಿಕ ಕೋಪಗೊಂಡ ಆಕೆ ಚಪ್ಪಲಿಯಿಂದ ಥಳಿಸಿದ್ದಾಳೆ.

Written by - Bhavishya Shetty | Last Updated : Oct 23, 2022, 05:06 PM IST
    • ಏರ್ ಕೂಲರ್ ಏಕೆ ಆಫ್ ಮಾಡಿದ್ದೀರಿ ಎಂದು ಕೇಳಿದ್ದಕ್ಕೆ ಕೋಪ

    • ವ್ಯಕ್ತಿ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿ ಥಳಿಸಿದ ಮಹಿಳೆ

    • ಛತ್ತೀಸ್‌ಗಢದ ಅಂಬಿಕಾಪುರ ವೈದ್ಯಕೀಯ ಕಾಲೇಜಿನಲ್ಲಿ ಘಟನೆ

Viral Video: ಫ್ಯಾನ್ ಆಫ್ ಮಾಡಿದ್ದನ್ನು ಪ್ರಶ್ನಿಸಿದ ವ್ಯಕ್ತಿಗೆ ಚಪ್ಪಲಿಯಿಂದ ಪಟ ಪಟ ಅಂತಾ ಏಟು ಕೊಟ್ಟ ಮಹಿಳೆ!! title=
Ambikapur Medical college

ಏರ್ ಕೂಲರ್ ಏಕೆ ಆಫ್ ಮಾಡಿದ್ದೀರಿ ಎಂದು ಕೇಳಿದ್ದಕ್ಕೆ ಕೋಪಗೊಂಡ ಮಹಿಳೆ, ವ್ಯಕ್ತಿ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿ, ಆತನಿಗೆ ಥಳಿಸಿದ ಘಟನೆ ಛತ್ತೀಸ್‌ಗಢದ ಅಂಬಿಕಾಪುರ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ.

ಇದನ್ನೂ ಓದಿ: Viral Video: ಸಿಂಹವನ್ನು ಫುಟ್ ಬಾಲ್ ನಂತೆ ಒದ್ದು ಆಟವಾಡಿದ ಎಮ್ಮೆಗಳ ಗುಂಪು!

ವೈದ್ಯಕೀಯ ಕಾಲೇಜಿನ ಒಪಿಡಿಯಲ್ಲಿ ಆರಾಮವಾಗಿ ಮಲಗಿದ್ದ ವ್ಯಕ್ತಿಯೊಬ್ಬ ಮಹಿಳೆ ಕೂಲರ್ ಆಫ್ ಮಾಡಿದ ಬಳಿಕ ನಿದ್ರೆಯಿಂದ ಎದ್ದಿದ್ದಾನೆ. ಬಳಿಕ ಆಕೆಯ ಬಳಿ, ಏಕೆ ಕೂಲರ್ ಬಂದ್ ಮಾಡಿದಿರಿ ಎಂದು ಪ್ರಶ್ನಿಸಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದಿದ್ದು, ಬಳಿಕ ಕೋಪಗೊಂಡ ಆಕೆ ಚಪ್ಪಲಿಯಿಂದ ಥಳಿಸಿದ್ದಾಳೆ.

 

ಘಟನೆಯ ವೀಡಿಯೊದಲ್ಲಿ, ಒಬ್ಬ ವ್ಯಕ್ತಿ ನೆಲದ ಮೇಲೆ ಕುಳಿತಿರುವುದನ್ನು ಕಾಣಬಹುದು, ಮಹಿಳೆ ಅವನನ್ನು ಚಪ್ಪಲಿಯಿಂದ ಹೊಡೆಯಲು ಪ್ರಾರಂಭಿಸಿದ್ದಾಳೆ. ನಿರಂತರವಾಗಿ ಚಪ್ಪಲಿಯಿಂದ ಹೊಡೆಯುತ್ತಿದ್ದಾಳೆ. ಅಷ್ಟೇ ಅಲ್ಲದೆ, ಅವಳ ಪಕ್ಕದಲ್ಲಿ ನಿಂತಿರುವ ಇನ್ನೊಬ್ಬ ವ್ಯಕ್ತಿ ಹಲ್ಲೆಗೊಳಗಾದ ವ್ಯಕ್ತಿಗೆ ಕೋಲಿನಿಂದ ಚುಚ್ಚುತ್ತಾನೆ.

ಕೆಲ ವರದಿಗಳ ಪ್ರಕಾರ, ರೋಗಿಯು ಚಳಿ ಅನುಭವಿಸಿದ ಕಾರಣ ಮಹಿಳೆ ಕೂಲರ್ ಅನ್ನು ಆಫ್ ಮಾಡಿದ್ದಾರೆ. ಆದರೆ ಇದನ್ನು ಪ್ರಶ್ನಿಸಿ ವಾಗ್ವಾದ ಹೆಚ್ಚಾದಾಗ ಸ್ಥಳೀಯ ಪೊಲೀಸರನ್ನು ಆಸ್ಪತ್ರೆಗೆ ಕರೆಸಲಾಯಿತು. ಪೊಲೀಸರು ವಿಚಾರಿಸಿದಾಗ, ತನ್ನ ಸಂಬಂಧಿಕರು ಯಾರೂ ಆಸ್ಪತ್ರೆಗೆ ದಾಖಲಾಗಿಲ್ಲ. ಆದರೆ ತುಂಬಾ ಶಾಖದ ಕಾರಣ ಇಲ್ಲಿಯೇ ಮಲಗಿದ್ದೆ ಎಂದು ಆ ವ್ಯಕ್ತಿ ಪೊಲೀಸರಿಗೆ ಹೇಳಿದರು. ಬಳಿಕ ಆಸ್ಪತ್ರೆ ಆವರಣದಿಂದ ಹೊರಬರುವಂತೆ ಪೊಲೀಸರು ವ್ಯಕ್ತಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: Viral News: ಆಮೆ ಪದಾರ್ಥ ಸುಟ್ಟಿತೆಂದು ಹೆಂಡತಿಯನ್ನೇ ಕೊಂದುತಿಂದ ಪತಿ!

ಈ ಮಧ್ಯೆ, ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಘಟನೆಯಿಂದ ವಿಚಲಿತರಾಗಿದ್ದಾರೆ. ಮಹಿಳೆಯ ನಿರ್ದಯ ವರ್ತನೆಗೆ ನಿಂದಿಸಿದ್ದಾರೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹಲವರು ಅಧಿಕಾರಿಗಳಿಗೆ ಟ್ಯಾಗ್ ಮಾಡಿದ್ದಾರೆ. ಅನೇಕರು ಮಹಿಳೆಯ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಒತ್ತಾಯಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News