Viral Video: ತಂದೆಯ ಬಳಿ ಹೋಗಿ ಪರಸ್ಪರರ ವಿರುದ್ಧ ದೂರುತ್ತಿರುವ ಅಣ್ಣ-ತಂಗಿಯ ಈ ಕ್ಯೂಟ್ ವಿಡಿಯೋ ನೋಡಿದ್ರಾ?

Viral Video: ಸಾಮಾಜಿಕ ಮಾಧ್ಯಮದ ಮೇಲೆ ಅಣ್ಣ-ತಂಗಿಯ ಒಂದು ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಎರಡೂ ಕ್ಯೂಟ್ ಕಂದಮ್ಮಗಳು ತನ್ನ ತಂದೆಯ ಬಳಿ ಹೋಗಿ ಪರಸ್ಪರರ ವಿರುದ್ಧ ದೂರು ನೀಡುತ್ತಿವೆ. ಇದನ್ನು ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರ ಹೃದಯ ಬೆಣ್ಣೆಯಂತೆ ಕರಗುತ್ತಿದೆ.  

Written by - Nitin Tabib | Last Updated : Oct 23, 2022, 10:53 AM IST
  • ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಅಣ್ಣ-ತಂಗಿ ಇಬ್ಬರು ಪರಸ್ಪರ ಜಗಳವಾಡಿದ್ದಾರೆ
  • ಮತ್ತು ತಂದೆಯ ಬಳಿ ಬಂದು ಪರಸ್ಪರರ ವಿರುದ್ಧ ದೂರುತ್ತಿರುವುದನ್ನು ನೀವು ನೋಡಬಹುದು.
  • ವಿಡಿಯೋದಲ್ಲಿ ಕಂಡು ಬಂದಿರುವ ಪುಟಾಣಿಗಳ ಕ್ಯೂಟ್ನೆಸ್ ನೆಟ್ಟಿಗರ ಹೃದಯ ಗೆದ್ದಿದೆ.
Viral Video: ತಂದೆಯ ಬಳಿ ಹೋಗಿ ಪರಸ್ಪರರ ವಿರುದ್ಧ ದೂರುತ್ತಿರುವ ಅಣ್ಣ-ತಂಗಿಯ ಈ ಕ್ಯೂಟ್ ವಿಡಿಯೋ ನೋಡಿದ್ರಾ? title=
Brother Sister Fight Funny Video

Siblings Fight Cute Viral Video: ಸಹೋದರ-ಸಹೋದರಿಯರ ಸಂಬಂಧ ಅತ್ಯಂತ ಪ್ರೀತಿಯಿಂದ ಕೂಡಿದ ಒಂದು ಸಂಬಂಧವಾಗಿದೆ. ಇಬ್ಬರು ಪರಸ್ಪರ ಜಗಳವಾಡುತ್ತಾರೆ ಮತ್ತು ಅಷ್ಟೇ ಪರಸ್ಪರರ ಬಗ್ಗೆ ಕಾಳಜಿವಹಿಸುತ್ತಾರೆ. ಸಹೋದರ-ಸಹೋದರಿಯರು ಜಗಳವಾಗುವ ಹಲವಾರು ವಿಡಿಯೋಗಳನ್ನು ನೀವು ಸಾಮಾಜಿಕ ಮಾಧ್ಯಮದಲ್ಲಿ ನೋಡಬಹುದು. ಆದರೆ, ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋ ನೋಡಿ ನೀವೂ ಕೂಡ ಹೊಟ್ಟೆ ಹಿಡಿದು ನಗುವುದಂತು ಗ್ಯಾರಂಟಿ.

ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಅಣ್ಣ-ತಂಗಿ ಇಬ್ಬರು ಪರಸ್ಪರ ಜಗಳವಾಡಿದ್ದಾರೆ ಮತ್ತು ತಂದೆಯ ಬಳಿ ಬಂದು ಪರಸ್ಪರರ ವಿರುದ್ಧ ದೂರುತ್ತಿರುವುದನ್ನು ನೀವು ನೋಡಬಹುದು. ವಿಡಿಯೋದಲ್ಲಿ ಕಂಡು ಬಂದಿರುವ ಪುಟಾಣಿಗಳ ಕ್ಯೂಟ್ನೆಸ್ ನೆಟ್ಟಿಗರ ಹೃದಯ ಗೆದ್ದಿದೆ. ಈ ವಿಡಿಯೋ ನೋಡಿದವರೆಲ್ಲರೂ ಕೂಡ ಈ ವಿಡಿಯೋವನ್ನು ತಮ್ಮ ಸಹೋದರ-ಸಹೋದರಿಯರ ಜೊತೆಗೆ ಅದನ್ನು ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ-Viral News: ಆಮೆ ಪದಾರ್ಥ ಸುಟ್ಟಿತೆಂದು ಹೆಂಡತಿಯನ್ನೇ ಕೊಂದುತಿಂದ ಪತಿ!

ತಂದೆಯ ಬಳಿ ಹೋಗಿ ದೂರು ನೀಡುತ್ತಿರುವ ಪುಟಾಣಿಗಳು
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ಕ್ಲಿಪ್ ನಲ್ಲಿ ಪುಟ್ಟ ಬಾಲಕನೋರ್ವ ತನ್ನ ತಂದೆಯ ಬಳಿಗೆ ಹೋಗಿ ಸಹೋದರಿಯ ವಿರುದ್ಧ ದೂರು ನೀಡುತ್ತಿರುವುದನ್ನು ನೀವು ನೋಡಬಹುದು.ಆತ ನೀಡುತ್ತಿರುವ ದೂರಿನ ಕುರಿತು ತಂದೆ ಮಗಳಿಗೆ ಪ್ರಶ್ನಿಸಿದಾಗ 'ಅಣ್ಣ ನನ್ನ ಕೆನ್ನೆಗೆ ಜೋರಾಗಿ ಹೊಡೆದ' ಎಂದು ಹೇಳುತ್ತಿದ್ದಾಳೆ. ಆಕೆಯ ದೂರಿಗೆ ಸ್ಪಷ್ಟೀಕರಣ ನೀಡುತ್ತಿರುವ ಅಣ್ಣ, ಸಿಮ್ರನ್ ಮನೆಯ ಎಲ್ಲಾ ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡುತ್ತಿದ್ದಾಳೆ, ತಿಳಿಹೇಳಿದರೂ ಕೂಡ ಕೇಳುತ್ತಿಲ್ಲ ಎನ್ನುತ್ತಿದ್ದಾನೆ.

ಇದನ್ನೂ ಓದಿ-Viral Video: ಸಿಂಹವನ್ನು ಫುಟ್ ಬಾಲ್ ನಂತೆ ಒದ್ದು ಆಟವಾಡಿದ ಎಮ್ಮೆಗಳ ಗುಂಪು!

ಹೃದಯ ಗೆಲ್ಲುವಂತಿದೆ ಈ ವಿಡಿಯೋ
ಅಣ್ಣ ನೀಡುತ್ತಿರುವ ಎಲ್ಲಾ ದೂರುಗಳಿಗೆ ಸ್ಪಷ್ಟನೆ ನೀಡುತ್ತಿರುವ ಪುಟಾಣಿ ತಂಗಿ ಬಳಿ ಮಾತ್ರ ಒಂದೇ ಕಂಪ್ಲೈಂಟ್ ಇದೆ. ಅದೇನೆಂದರೆ 'ಅಣ್ಣ ನನ್ನ ಕೆನ್ನೆಗೆ ಜೋರಾಗಿ ಹೊಡೆದ'. ಇನ್ನೊಂದೆಡೆ ನಾನು ಮೆಲ್ಲಗೆ ಆಕೆಯ ಕೆನ್ನೆಗೆ ಹೊಡೆದೆ ಎನ್ನುತ್ತಿದ್ದಾನೆ ಅಣ್ಣ. ಅದೇನೇ ಇರಲಿ ಅಣ್ಣ-ತಂಗಿಯ ಈ ಕ್ಯೂಟ್ ಜಗಳದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವುದು ಮಾತ್ರ ನಿಜ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News