ಟ್ರೆಂಡ್ ಬದಲಾಯಿಸಿ, ಬಿಜೆಪಿಗೆ ಮತ ಹಾಕಿ ಮತ್ತೆ ಅಧಿಕಾರಕ್ಕೆ ತನ್ನಿ: ಪ್ರಧಾನಿ ಮೋದಿ

3 ದಶಕಗಳಿಂದ ದೆಹಲಿಯಲ್ಲಿ ಅಸ್ಥಿರತೆ ಇತ್ತು, ಸರ್ಕಾರಗಳು ಬಂದವು-ಹೋದವು, ಪದೇ ಪದೇ ನಡೆದ ಚುನಾವಣೆಯಲ್ಲಿ ಸಾವಿರಾರು ಕೋಟಿ ರೂಪಾಯಿ ವ್ಯರ್ಥವಾಯಿತು ಅಂತಾ ವಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

Written by - Puttaraj K Alur | Last Updated : Nov 6, 2022, 07:02 AM IST
  • ಹಿಮಾಚಲ ಪ್ರದೇಶದಲ್ಲಿ 2ನೇ ಅವಧಿಯ ಬಿಜೆಪಿಯ ಪ್ರಚಾರಕ್ಕೆ ಪ್ರಧಾನಿ ಮೋದಿ ಚಾಲನೆ
  • ಬಿಜೆಪಿ ಅಭ್ಯರ್ಥಿಗಳಿಗೆ ಮತ್ತೆ ಮತ ನೀಡುವ ಮೂಲಕ ಹೊಸ ಸಂಪ್ರದಾಯ ಪ್ರಾರಂಭಿಸಲು ಸಲಹೆ
  • ‘ಡಬಲ್ ಇಂಜಿನ್’ ಸರ್ಕಾರದ ಮೂಲಕ ಸ್ಥಿರ ಮತ್ತು ಅಭಿವೃದ್ಧಿಪರ ಆಡಳಿತ ಬೆಂಬಲಿಸುವಂತೆ ಮನವಿ
ಟ್ರೆಂಡ್ ಬದಲಾಯಿಸಿ, ಬಿಜೆಪಿಗೆ ಮತ ಹಾಕಿ ಮತ್ತೆ ಅಧಿಕಾರಕ್ಕೆ ತನ್ನಿ: ಪ್ರಧಾನಿ ಮೋದಿ title=
ವಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಸೋಲನ್/ಸುಂದರ್‌ನಗರ: ಹಿಮಾಚಲ ಪ್ರದೇಶದಲ್ಲಿ 2ನೇ ಅವಧಿಯ ಬಿಜೆಪಿಯ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದ್ದಾರೆ. ಬಿಜೆಪಿಗೆ ಮತ್ತೆ ಮತ ನೀಡುವ ಮೂಲಕ ಹೊಸ ಸಂಪ್ರದಾಯ ಪ್ರಾರಂಭಿಸಲು ಮತ್ತು ‘ಡಬಲ್ ಇಂಜಿನ್’ ಸರ್ಕಾರದ ಮೂಲಕ ಸ್ಥಿರ ಮತ್ತು ಅಭಿವೃದ್ಧಿಪರ ಆಡಳಿತವನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರು.

ಸುಂದರನಗರ ಮತ್ತು ಸೋಲನ್‌ನಲ್ಲಿ ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರವಿದ್ದರೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಬಹುದು. ನವೆಂಬರ್ 12ರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದಲ್ಲಿ ಸ್ಥಿರ ಸರ್ಕಾರವನ್ನು ಅಧಿಕಾರಕ್ಕೆ ತರಬೇಕೆಂದು’ ಮತದಾರರಲ್ಲಿ ಕೇಳಿಕೊಂಡರು. ‘ಇದು ರಾಜ್ಯದ ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿಯ ಪ್ರಯಾಣವನ್ನು ನಿರ್ಧರಿಸುತ್ತದೆ. ನೀವು ಸರ್ಕಾರದಿಂದ ಉತ್ತರದಾಯಿತ್ವ ಮತ್ತು ಉತ್ತರಗಳನ್ನು ಪಡೆಯಲು ಬಯಸಿದರೆ ಮತ್ತೊಮ್ಮೆ ನಮಗೆ ಅವಕಾಶ ನೀಡಬೇಕು. ನಾವು ಒಟ್ಟಾಗಿ ಹಿಮಾಚಲವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇವೆ’ ಅಂತಾ ಭರವಸೆ ನೀಡಿದರು.

ಇದನ್ನೂ ಓದಿ: Gujarat Elections : ಗುಜರಾತ್ ಚುನಾವಣೆಗೂ ಮುನ್ನ ಮಹತ್ವದ ನಿರ್ಧಾರ ಕೈಗೊಂಡ ಮೋದಿ ಸರ್ಕಾರ

ನಾವು ರಾಜ್ಯದಲ್ಲಿ ಹೊಸ ಅಭಿವೃದ್ಧಿ ಕೆಲಸಗಳನ್ನು ಪ್ರಾರಂಭಿಸುತ್ತೇವೆ. ಪದೇ ಪದೇ ಔಷಧಿ ಬದಲಾಯಿಸುವುದರಿಂದ ಕಾಯಿಲೆ ಗುಣಪಡಿಸಲು ಸಾಧ್ಯವಿಲ್ಲ ಅಥವಾ ಇದರಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ. ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಗೆ ಮತ್ತೊಂದು ಅವಧಿಗೆ ಅಧಿಕಾರ ನೀಡಬೇಕು. ಅಭ್ಯರ್ಥಿಯ ಬಗ್ಗೆ ತಲೆಕೆಡಿಸಿಕೊಳ್ಳದೆ ಮತಪತ್ರದಲ್ಲಿ ಕಮಲ ಚಿಹ್ನೆಗೆ ಮತ ಹಾಕುವಂತೆ’ ಇದೇ ವೇಳೆ ಪ್ರಧಾನಿ ಮೋದಿ ಮತದಾರರಲ್ಲಿ ಮನವಿ ಮಾಡಿಕೊಂಡರು.

‘3 ದಶಕಗಳಿಂದ ದೆಹಲಿಯಲ್ಲಿ ಅಸ್ಥಿರತೆ ಇತ್ತು, ಸರ್ಕಾರಗಳು ಬಂದವು-ಹೋದವು, ಪದೇ ಪದೇ ನಡೆದ ಚುನಾವಣೆಯಲ್ಲಿ ಸಾವಿರಾರು ಕೋಟಿ ರೂಪಾಯಿ ವ್ಯರ್ಥವಾಯಿತು. ಸ್ಥಿರ ಸರ್ಕಾರದಿಂದ ಮಾತ್ರ ದೇಶದ ಭವಿಷ್ಯ ಬದಲಾಯಿಸಲು ಸಾಧ್ಯವೆಂದು ಜನರು ನಿರ್ಧರಿಸಿದರು. ಹೀಗಾಗಿ 2014ರಲ್ಲಿ ಜನರು ಸ್ಥಿರ ಸರ್ಕಾರಕ್ಕೆ ಮತ ಹಾಕಿದರು. ಜನರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಹೀಗಾಗಿ ಬಿಜೆಪಿಗೆ ಮತ ನೀಡುವಂತೆ’ ಪ್ರಧಾನಿ ಕೇಳಿಕೊಂಡರು.  

ಇದನ್ನೂ ಓದಿ: ಸ್ವತಂತ್ರ ಭಾರತದ ಮೊದಲ ಮತದಾರ ಶ್ಯಾಮ್ ಸರನ್ ನೇಗಿ ಇನ್ನಿಲ್ಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News