ಛತ್ತಿಸ್ಗಡ್: ಸುಕುಮಾ ಜಿಲ್ಲೆಯಲ್ಲಿ ಪೊಲೀಸರು ಹಾಗೂ ನಕ್ಸಲರ ಮಧ್ಯೆ ಎನ್ಕೌಂಟರ್ ಸಂಭವಿಸಿದ್ದು, ಇದರಲ್ಲಿ 17 ಜವಾನರು ಹುತಾತ್ಮರಾಗಿದ್ದಾರೆ ಎನ್ನಲಾಗಿದೆ. ಈ ಎಲ್ಲ ಪೇದೆಗಳು STF, DRG ಹಾಗೂ ಕೋಬ್ರಾ ಬಟಾಲಿಯನ್ ಗೆ ಸೇರಿದವರಾಗಿದ್ದರು ಎನ್ನಲಾಗಿದೆ.
ಶನಿವಾರ ತಡ ರಾತ್ರಿ ಈ ಕುರಿತು ಮಾಹಿತಿ ನೀಡಿದ್ದ ಪೊಲೀಸ ವರಿಷ್ಠ ಅಧಿಕಾರಿಗಳು ಮೂವರು ಜವಾನರು ಹುತಾತ್ಮರಾಗಿರುವುದನ್ನು ಪುಷ್ಟಿಕರಿಸಿದ್ದರು. ಆದರೆ, ಬಳಿಕ ಈ ಹುತಾತ್ಮರಾಗಿರುವ ಜವಾನರಲ್ಲಿ 8 DRG ಬುರ್ಕಾಪಾಲ್ ಹಾಗೂ ಐವರು STF ಬುರ್ಕಾಪಾಲ್ ಜವಾನರೂ ಕೂಡ ಶಾಮೀಲಾಗಿದ್ದಾರೆ ಎನ್ನಲಾಗಿದೆ. ಈ ದಾಳಿಯ ವೇಳೆ ನಕ್ಸಲರು 12 AK 47 ಸಮೇತ 15 ಶಸ್ತ್ರಾಸ್ತ್ರಗಳನ್ನು ಸಹ ಲೂಟಿ ಮಾಡಿದ್ದಾರೆ. ಸುಕ್ಮಾ SP ಶಲಭ್ ಸಿನ್ಹಾ ಇದನ್ನು ದೃಢಪಡಿಸಿದ್ದಾರೆ. ಅಷ್ಟೇ ಅಲ್ಲ ಗಾಯಗೊಂಡ ಜವಾನರಲ್ಲಿ ಐವರು DRG ಬುರ್ಕಾಪಾಲ್, ನಾಲ್ವರು STF ಬುರ್ಕಾಪಾಲ್, ಇಬ್ಬರು ಚಿಂತಾಗುಫಾ ಹಾಗೂ ಮೂವರು ಸೇನಾ ಜವಾನರೂ ಕೂಡ ಶಾಮೀಲಾಗಿದ್ದಾರೆ ಎಂಬ ಮಾಹಿತ ಅವರು ನೀಡಿದ್ದಾರೆ.
ಇನ್ನೊಂದೆಡೆ ಈ ಎನ್ಕೌಂಟರ್ ನಲ್ಲಿ ಹಲವು ನಕ್ಸಲಿಯರನ್ನೂ ಕೂಡ ಹತ್ಯೆಗೈಯಲಾಗಿದೆ. ದಾಳಿಯಲ್ಲಿ ಗಾಯಗೊಂಡ 15 ಜವಾನರನ್ನು ಏರ್ ಲಿಫ್ಟ್ ಮೂಲಕ ರಾಯಪುರ್ ಗೆ ಸಾಗಿಸಲಾಗಿದೆ. ಶುಕ್ರವಾರ ರಾತ್ರಿ ಎಲಮಾಗುಂಡಾ ಜಿಲ್ಲೆಯ ಚಿಂತಾಗುಫಾ ಬಳಿ DRG, STF ಬುರ್ಕಾಪಾಲ್ ಹಾಗೂ ಕೋಬ್ರಾ ಬಟಾಲಿಯನ್ ತಂಡಗಳು ರಾತ್ರಿ ಸುಮಾರು 1.30ರ ಸುಮಾರಿಗೆ ಈ ಆಪರೇಷನ್ ನಡೆಸಿದ್ದವು. ಈ ಆಪರೇಶನ್ ನಿಂದ ಹಿಂತಿರುಗುತ್ತಿದ್ದ ವೇಳೆ ಶನಿವಾರ ಮಧ್ಯಾಹ್ನ ಮತ್ತೆ ನಕ್ಸಲೀಯರ ಜೊತೆ ಎನ್ಕೌಂಟರ್ ಸಂಭವಿಸಿದೆ. ಈ ಎನ್ಕೌಂಟರ್ ನಲ್ಲಿ ಹಲವು ದೊಡ್ಡ ನಕ್ಸಲಿಯರನ್ನು ಹತ್ಯೆಗೈಯಲಾಗಿದ್ದು, ಕೆಲ ನಕ್ಸಲೀಯರು ಗಾಯಗೊಂಡಿದ್ದಾರೆ ಎನ್ನಲಾಗಿದೆ.