ಕಲ್ಲಿದ್ದಲು ಹಗರಣ: ಕೇಂದ್ರದ ಮಾಜಿ ಸಚಿವ ದಿಲೀಪ್ ರೇ ಮತ್ತು ಇತರರಿಗೆ ಮೂರು ವರ್ಷ ಶಿಕ್ಷೆ

21 ವರ್ಷದ ಕಲ್ಲಿದ್ದಲು ಹಗರಣ ಪ್ರಕರಣದಲ್ಲಿ ಕೇಂದ್ರದ ಮಾಜಿ ರಾಜ್ಯ ಕಲ್ಲಿದ್ದಲು ಸಚಿವ ದಿಲೀಪ್ ರೇ ಅವರಿಗೆ ಮೂರು ವರ್ಷ ಶಿಕ್ಷೆ ವಿಧಿಸಲಾಗಿದೆ.

Last Updated : Oct 26, 2020, 01:40 PM IST
  • ಕಲ್ಲಿದ್ದಲು ಹಗರಣ ಪ್ರಕರಣದಲ್ಲಿ ನ್ಯಾಯಾಲಯದ ಮಹತ್ವದ ತೀರ್ಪು
  • ಕೇಂದ್ರದ ಮಾಜಿ ಸಚಿವ ದಿಲೀಪ್ ರೇ ಅವರಿಗೆ ಮೂರು ವರ್ಷ ಶಿಕ್ಷೆ ವಿಧಿಸಲಾಗಿದೆ
  • 21 ವರ್ಷ ಹಿಂದಿನ ಕಲ್ಲಿದ್ದಲು ಹಗರಣ ಪ್ರಕರಣದಲ್ಲಿ ಮಾಜಿ ಸಚಿವರಿಗೆ ಶಿಕ್ಷೆ
ಕಲ್ಲಿದ್ದಲು ಹಗರಣ: ಕೇಂದ್ರದ ಮಾಜಿ ಸಚಿವ ದಿಲೀಪ್ ರೇ ಮತ್ತು ಇತರರಿಗೆ ಮೂರು ವರ್ಷ ಶಿಕ್ಷೆ

ನವದೆಹಲಿ: ಕಲ್ಲಿದ್ದಲು ಹಗರಣ (Coal block scam) ಪ್ರಕರಣದಲ್ಲಿ ನ್ಯಾಯಾಲಯದ ಮಹತ್ವದ ತೀರ್ಪು ಹೊರಬಿದ್ದಿದ್ದು ಕೇಂದ್ರ ಮಾಜಿ ಸಚಿವ (Former Central Minister) ದಿಲೀಪ್ ರೇ ಸೇರಿದಂತೆ ಮೂವರು ಅಪರಾಧಿಗಳಿಗೆ 3 ವರ್ಷ ಶಿಕ್ಷೆ ವಿಧಿಸಲಾಗಿದೆ. 

1999ರ ಜಾರ್ಖಂಡ್ (Jarkhand) ಕಲ್ಲಿದ್ದಲು ಬ್ಲಾಕ್‌ನಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ  10 ಲಕ್ಷ ರೂ.ಗಳ ದಂಡ ಸೇರಿದಂತೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಕಲ್ಲಿದ್ದಲು ಪ್ರಕರಣ: ಮಧುಕೋಡಾ ವಿರುದ್ಧದ ಜೈಲು ಶಿಕ್ಷೆ ಆದೇಶಕ್ಕೆ ದೆಹಲಿ ಹೈಕೋರ್ಟ್ ತಡೆ

ಏನಿದು ಹಗರಣ?
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಅಂದಿನ ಎನ್‌ಡಿಎ ಸರ್ಕಾರದ (NDA govt) ಅವಧಿಯಲ್ಲಿ ದಿಲೀಪ್ ರೇ ಅವರು ಕಲ್ಲಿದ್ದಲು ರಾಜ್ಯ ಸಚಿವರಾಗಿದ್ದರು. ಜಾರ್ಖಂಡ್‌ನ ಗಿರಿಡಿಹ್‌ನಲ್ಲಿ 1999ರ ಬ್ರಹ್ಮದಿಹ್ ಕಲ್ಲಿದ್ದಲು ಬ್ಲಾಕ್ ಹಂಚಿಕೆಯಲ್ಲಿ ಅವರ ಹೆಸರು ಕೇಳಿ ಬಂದಿತು. ಅಕ್ಟೋಬರ್ 6 ರಂದು ವಿಶೇಷ ಸಿಬಿಐ ನ್ಯಾಯಾಲಯವು 1999ರಲ್ಲಿ ಜಾರ್ಖಂಡ್ ಕಲ್ಲಿದ್ದಲು ಬ್ಲಾಕ್ ಹಂಚಿಕೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಕಲ್ಲಿದ್ದಲು ಹಗರಣ ಪ್ರಕರಣದಲ್ಲಿ ದಿಲೀಪ್ ರೇ ಅವರನ್ನು ಶಿಕ್ಷೆಗೊಳಪಡಿಸಿತು. ಈಗ ನ್ಯಾಯಾಲಯ ಈ ಪ್ರಕರಣದಲ್ಲಿ ಶಿಕ್ಷೆ ವಿಧಿಸಿದೆ.

ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಕಲ್ಲಿದ್ದಲು ಹಗರಣದ ಆರೋಪಿ

ರೂಸ್ ಅವೆನ್ಯೂ ನ್ಯಾಯಾಲಯವು ಮಾಜಿ ಕೇಂದ್ರ ಸಚಿವರಲ್ಲದೆ ಪ್ರದೀಪ್ ಕುಮಾರ್ ಬ್ಯಾನರ್ಜಿ ಮತ್ತು ನಿತ್ಯಾನಂದ್ ಗೌತಮ್, ಆಗಿನ ಕಲ್ಲಿದ್ದಲು ಸಚಿವಾಲಯದ ಹಿರಿಯ ಅಧಿಕಾರಿಗಳಾದ ಮಹೇಂದ್ರ ಕುಮಾರ್ ಅಗರ್ವಾಲ್, ಕ್ಯಾಸ್ಟ್ರಾನ್ ಟೆಕ್ನಾಲಜೀಸ್ ಲಿಮಿಟೆಡ್ (ಸಿಟಿಎಲ್) ಮತ್ತು ಕ್ಯಾಸ್ಟ್ರಾನ್ ಮೈನಿಂಗ್ ಲಿಮಿಟೆಡ್ (ಸಿಎಮ್ಎಲ್) ನ ಮೇಲೆ ದೋಷಾರೋಪಣೆ ಮಾಡಿದೆ.

More Stories

Trending News