Maharashtra Politics: ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೆ ಬಿರುಗಾಳಿಯ ಸಂಕೇತ, ರಾಜೀನಾಮೆಗೆ ಮುಂದಾದ ಸಿಎಂ ಪುತ್ರ ಶ್ರೀಕಾಂತ್ ಸಿಂಧೆ!

Maharashtra Politics: ಪ್ರಸ್ತುತ ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ-ಬಿಜೆಪಿ ಮೈತ್ರಿಯ ಸರ್ಕಾರ ಅಸ್ತಿತ್ವದಲ್ಲಿದೆ. ಆದರೆ, ಇದೀಗ ಈ ಮೈತ್ರಿಯಲ್ಲಿ ಬಿರುಕು ಕಾಣಿಸಿರುವ ಸಂಕೇತಗಳು ಲಭ್ಯವಾಗುತ್ತಿವೆ. 

Written by - Nitin Tabib | Last Updated : Jun 9, 2023, 09:06 PM IST
  • ಶಿವಸೇನೆ ಸ್ಪರ್ಧಿಸುವ ಸ್ಥಾನಗಳಲ್ಲಿ ಬಿಜೆಪಿ ಚುನಾವಣಾ ಮುಖ್ಯಸ್ಥರು ಶಿವಸೇನೆ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
  • ಕೇಂದ್ರ ಸಚಿವ ಅಮಿತ್ ಶಾ ಅವರು ಜೂನ್ 10 ರಂದು ಮಧ್ಯ ಮಹಾರಾಷ್ಟ್ರದ ನಾಂದೇಡ್‌ನಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ
  • ಮತ್ತು ಪಕ್ಷವು ರಾಜ್ಯದಲ್ಲಿ ಮೋದಿಯವರ ರ್ಯಾಲಿಯನ್ನು ಸಹ ಆಯೋಜಿಸಲಿದೆ ಎಂದು ಅವರು ಹೇಳಿದ್ದಾರೆ.
Maharashtra Politics: ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೆ ಬಿರುಗಾಳಿಯ ಸಂಕೇತ, ರಾಜೀನಾಮೆಗೆ ಮುಂದಾದ ಸಿಎಂ ಪುತ್ರ ಶ್ರೀಕಾಂತ್ ಸಿಂಧೆ! title=

Maharashtra Politics: ಮಹಾರಾಷ್ಟ್ರದ ರಾಜಕೀಯದಲ್ಲಿ ಮತ್ತೊಮ್ಮೆ ಬಿರುಗಾಳಿ ಸೃಷ್ಟಿಯಾಗುವ ಸಂಕೇತಗಳು ಗೋಚರಿಸತೊಡಗಿವೆ. ಈ ಹಿನ್ನೆಲೆ ರಾಜ್ಯದ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಬಿಜೆಪಿ ನಡುವೆ ಬಿರುಕು ಮೂಡುವ ಸೂಚನೆಗಳು ಗೋಚರಿಸಿವೆ. ಸಿಎಂ ಏಕನಾಥ್ ಶಿಂಧೆ ಪುತ್ರ ಹಾಗೂ ಸಂಸದ ಶ್ರೀಕಾಂತ್ ಶಿಂಧೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಹಲವು ವಿಚಾರಗಳಲ್ಲಿ ಅವರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

ಗುರುವಾರ ಡೊಂಬಿವಿಲಿಯಲ್ಲಿ ನಡೆದ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಶಿವಸೇನೆಯನ್ನು ಬಹಿಷ್ಕರಿಸಲು ನಿರ್ಧರಿಸಲಾಗಿದೆ ಎನ್ನಲಾಗಿದ್ದು. ಇದರಿಂದ ಶ್ರೀಕಾಂತ್ ಶಿಂಧೆ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

ವಿಷಯ ಏನು?
ವಾಸ್ತವದಲ್ಲಿ, ಮಹಿಳೆಗೆ ಕಿರುಕುಳ ನೀಡಿದ ಬಿಜೆಪಿ ಕಾರ್ಯಾಧ್ಯಕ್ಷ ನಂದು ಜೋಶಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಬಗ್ಗೆ ನಂದು ಜೋಶಿ ಹಾಗೂ ಹಲವು ಕಾರ್ಯಕರ್ತರು ಡೊಂಬಿವಿಲಿ ಮಾನ್ಪಾಡ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿರುವುದರ ಹಿಂದೆ ಶಿವಸೇನೆ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

ಮತ್ತೊಂದೆಡೆ, ಬುಧವಾರ ಡೊಂಬಿವಿಲಿಯಲ್ಲಿ ರಾಜ್ಯ ಸಚಿವ ರವೀಂದ್ರ ಚೌಹಾಣ್ ನೇತೃತ್ವದಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆ ನಡೆದಿದ್ದು, ಸಭೆಯಲ್ಲಿ ಶಿವಸೇನೆಯನ್ನು ಬಿಜೆಪಿಯಿಂದ ಪ್ರತ್ಯೇಕಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಇದಲ್ಲದೇ ಲೋಕಸಭೆ ಚುನಾವಣೆಯಲ್ಲಿ 48 ಸ್ಥಾನಗಳಿಗೆ ಗುರುವಾರ ಬಿಜೆಪಿ ಉಸ್ತುವಾರಿಗಳ ಹೆಸರನ್ನು ಪ್ರಕಟಿಸಿದ್ದು ಕೂಡ ಇದಕ್ಕೆ ಎರಡನೇ ಕಾರಣ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ-Maharashtra Politics: 'ಶರದ್ ಪವಾರ್ ಮೊಘಲ್ ದೊರೆ ಔರಂಗಜೇಬನ ಪುನರ್ಜನ್ಮ' ಎಂದು ಕರೆದ ಬಿಜೆಪಿ ಮುಖಂಡ

ಚಂದ್ರಶೇಖರ ಬಾವನಕುಳೆ ಬಿಜೆಪಿಯ ಚುನಾವಣಾ ಮುಖ್ಯಸ್ಥ
ಮಹಾರಾಷ್ಟ್ರದ ಬಿಜೆಪಿ ಘಟಕ ಗುರುವಾರ ರಾಜ್ಯದ 48 ಲೋಕಸಭೆ ಮತ್ತು 288 ವಿಧಾನಸಭಾ ಸ್ಥಾನಗಳಿಗೆ ತನ್ನ ಚುನಾವಣಾ ಮುಖ್ಯಸ್ಥರ ಹೆಸರನ್ನು ಘೋಷಿಸಿದೆ. ಈ ಕುರಿತು ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬಾವನಕುಳೆ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲಾಗುವುದು ಎಂದಿದ್ದಾರೆ.

ಇದನ್ನೂ ಓದಿ-Amarnath Yatra: ಅಮರನಾಥ್ ಯಾತ್ರೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಅಮಿತ್ ಶಾ ಮಹತ್ವದ ಸಭೆ, ಐಬಿ ಮುಖ್ಯಸ್ಥರು ಉಪಸ್ಥಿತ

ಶಿವಸೇನೆ ಸ್ಪರ್ಧಿಸುವ ಸ್ಥಾನಗಳಲ್ಲಿ ಬಿಜೆಪಿ ಚುನಾವಣಾ ಮುಖ್ಯಸ್ಥರು ಶಿವಸೇನೆ ಅಭ್ಯರ್ಥಿಯ ಗೆಲುವಿಗಾಗಿ  ಶ್ರಮಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ. ಕೇಂದ್ರ ಸಚಿವ ಅಮಿತ್ ಶಾ ಅವರು ಜೂನ್ 10 ರಂದು ಮಧ್ಯ ಮಹಾರಾಷ್ಟ್ರದ ನಾಂದೇಡ್‌ನಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಪಕ್ಷವು ರಾಜ್ಯದಲ್ಲಿ ಮೋದಿಯವರ ರ್ಯಾಲಿಯನ್ನು ಸಹ ಆಯೋಜಿಸಲಿದೆ ಎಂದು ಅವರು ಹೇಳಿದ್ದಾರೆ.  

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News