ಸಂಸತ್ತಿನ ರಕ್ಷಣಾ ಸಮಿತಿ ಸಭೆಯಿಂದ ರಾಹುಲ್ ಗಾಂಧಿ ಹೊರನಡೆದದ್ದೇಕೆ...?

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಇತರ ಇಬ್ಬರು ಕಾಂಗ್ರೆಸ್ ಸದಸ್ಯರಾದ ರಾಜೀವ್ ಸಾತವ್ ಮತ್ತು ರೇವಂತ್ ರೆಡ್ಡಿ ಅವರು ಬುಧವಾರ ರಕ್ಷಣಾ ಸಂಸತ್ತಿನ ಸಮಿತಿ ಸಭೆಯಿಂದ ಹೊರನಡೆದಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

Last Updated : Dec 16, 2020, 07:23 PM IST
ಸಂಸತ್ತಿನ ರಕ್ಷಣಾ ಸಮಿತಿ ಸಭೆಯಿಂದ ರಾಹುಲ್ ಗಾಂಧಿ ಹೊರನಡೆದದ್ದೇಕೆ...? title=
ಸಾಂದರ್ಭಿಕ ಚಿತ್ರ

ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಇತರ ಇಬ್ಬರು ಕಾಂಗ್ರೆಸ್ ಸದಸ್ಯರಾದ ರಾಜೀವ್ ಸಾತವ್ ಮತ್ತು ರೇವಂತ್ ರೆಡ್ಡಿ ಅವರು ಬುಧವಾರ ರಕ್ಷಣಾ ಸಂಸತ್ತಿನ ಸಮಿತಿ ಸಭೆಯಿಂದ ಹೊರನಡೆದಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಪ್ರಧಾನಿ ಮೋದಿಜಿ ನೀವು ಭಯಪಡದೆ ದೇಶಕ್ಕೆ ಸತ್ಯವನ್ನು ಹೇಳಿ ,ಇಡೀ ದೇಶ ನಿಮ್ಮ ಜೊತೆಗಿದೆ - ರಾಹುಲ್ ಗಾಂಧಿ

ಸಭೆಯಲ್ಲಿ ಸೈನಿಕರನ್ನು ಹೇಗೆ ಉತ್ತಮವಾಗಿ ಸಜ್ಜುಗೊಳಿಸಬೇಕು ಎಂಬುದರ ಕುರಿತು ಚರ್ಚಿಸುವ ಬದಲು, ಸಶಸ್ತ್ರ ಪಡೆಗಳ ಸಮವಸ್ತ್ರವನ್ನು ಚರ್ಚಿಸಲು ಸಮಿತಿಯು ಸಮಯವನ್ನು ವ್ಯರ್ಥ ಮಾಡಿತು ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದರು.

ಸಶಸ್ತ್ರ ಪಡೆಗಳ ಸಮವಸ್ತ್ರದ ಬಗ್ಗೆ ಸಮಿತಿ ಚರ್ಚಿಸುತ್ತಿದ್ದ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ರಾಹುಲ್ ಗಾಂಧಿ ಇದನ್ನು ಸಶಸ್ತ್ರ ಪಡೆಗಳ ಹಿರಿಯ ರಕ್ಷಣಾ ಅಧಿಕಾರಿಗಳು ನಿರ್ಧರಿಸಬಹುದು ಎಂದರು.ಸಭೆಯಲ್ಲಿ ಹಾಜರಿದ್ದ ಬಿಜೆಪಿ ಸಂಸದರು ಸೈನ್ಯ, ನೌಕಾಪಡೆ, ವಾಯುಸೇನೆಯಲ್ಲಿ ಏಕ ಸಮವಸ್ತ್ರದ ಪರವಾಗಿ ಬೆಂಬಲ ವ್ಯಕ್ತಪಡಿಸಿದರು.

ಲಡಾಖ್‌ನಲ್ಲಿ ಚೀನಾದ ಉದ್ದೇಶಗಳನ್ನು ಎದುರಿಸಲು ಮೋದಿ ಸರ್ಕಾರ ಹೆದರುತ್ತಿದೆ-ರಾಹುಲ್ ಗಾಂಧಿ

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಹುಲ್ ಗಾಂಧಿ ಈ ಮೂರು ದಳಗಳ ಸಮವಸ್ತ್ರಗಳು ಇತಿಹಾಸವನ್ನು ಹೊಂದಿವೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಬಿಜೆಪಿ ಸಂಸದ ಜುವಾಲ್ ಓರಂ ಅವರು ರಾಹುಲ್ ಗಾಂಧಿಗೆ ಮಾತನಾಡಲು ಅನುಮತಿಸಲು ನಿರಾಕರಿಸಿದರು.ಲೈನ್ ಆಫ್ ಆಕ್ಚುಯಲ್ ಕಂಟ್ರೋಲ್ ನಲ್ಲಿರುವ ಭಾರತೀಯ ಸೈನಿಕರ ವಿಷಯವನ್ನು ರಾಹುಲ್ ಗಾಂಧಿ ಎತ್ತಲು ಬಯಸಿದ್ದರು.

ರಾಷ್ಟ್ರೀಯ ಭದ್ರತೆಯ ವಿಷಯಗಳು ಮತ್ತು ಲಡಾಖ್‌ನಲ್ಲಿ ಚೀನಿಯರ ವಿರುದ್ಧ ಹೋರಾಡುತ್ತಿರುವ ಪಡೆಗಳನ್ನು ಹೇಗೆ ಬಲಪಡಿಸುವುದು ಎಂಬುದರ ಕುರಿತು ಚರ್ಚಿಸಬೇಕು ಎಂದು ರಾಹುಲ್ ಗಾಂಧಿ ಹೇಳಿದರು, ಆದರೆ ಅವರಿಗೆ ಮುಂದುವರಿಯಲು ಅವಕಾಶ ನೀಡಲಿಲ್ಲ ಎನ್ನಲಾಗಿದೆ.

ಪ್ರತಿ ವರ್ಷ 2 ಕೋಟಿ ಜನರಿಗೆ ಉದ್ಯೋಗ ಭರವಸೆ ಈಡೇರಿಸುವಲ್ಲಿ ಮೋದಿ ಸರ್ಕಾರ ವಿಫಲ-ರಾಹುಲ್ ಗಾಂಧಿ

ಇದಕ್ಕೂ ಮೊದಲು ಹಲವಾರು ಸಂದರ್ಭಗಳಲ್ಲಿ ರಾಹುಲ್ ಗಾಂಧಿ ಗಡಿ ಪ್ರದೇಶದಲ್ಲಿ ಸೈನಿಕರ ದುಃಸ್ಥಿತಿಗೆ ಸಂಬಂಧಿಸಿದಂತೆ ಹಲವಾರು ಬಾರಿ ಪ್ರಶ್ನೆಗಳನ್ನು ಎತ್ತಿದ್ದನ್ನು ನಾವು ಕಾಣಬಹುದಾಗಿದೆ.
 

Trending News