Watch: ಮೋದಿ ಮೋದಿ ಎಂದು ಕೂಗುತ್ತಿದ್ದವರಿಗೆ ಕಾರ್ ನಿಲ್ಲಿಸಿ ಪ್ರಿಯಾಂಕಾ ಗಾಂಧಿ ಹೇಳಿದ್ದೇನು?

ಸೋಮವಾರದಂದು ಮಧ್ಯಪ್ರದೇಶದಲ್ಲಿ ಪ್ರಚಾರ ನಡೆಸುತ್ತಿದ್ದ ಪ್ರಿಯಾಂಕಾ ಗಾಂಧಿ ತಮ್ಮ ಬೆಂಗಾವಲು ಗಾಡಿಗಳೊಂದಿಗೆ ಕಾರ್ ನಲ್ಲಿ ಸಾಗುತ್ತಿದ್ದಾಗ ಏಕಾಏಕಿ ನಿಲ್ಲಿಸಿದ ಘಟನೆ ನಡೆದಿದೆ.

Updated: May 14, 2019 , 02:11 PM IST
 Watch: ಮೋದಿ ಮೋದಿ ಎಂದು ಕೂಗುತ್ತಿದ್ದವರಿಗೆ ಕಾರ್ ನಿಲ್ಲಿಸಿ ಪ್ರಿಯಾಂಕಾ ಗಾಂಧಿ ಹೇಳಿದ್ದೇನು?

ನವದೆಹಲಿ: ಸೋಮವಾರದಂದು ಮಧ್ಯಪ್ರದೇಶದಲ್ಲಿ ಪ್ರಚಾರ ನಡೆಸುತ್ತಿದ್ದ ಪ್ರಿಯಾಂಕಾ ಗಾಂಧಿ ತಮ್ಮ ಬೆಂಗಾವಲು ಗಾಡಿಗಳೊಂದಿಗೆ ಕಾರ್ ನಲ್ಲಿ ಸಾಗುತ್ತಿದ್ದಾಗ ಏಕಾಏಕಿ ನಿಲ್ಲಿಸಿದ ಘಟನೆ ನಡೆದಿದೆ.

ಮೋದಿ ಮೋದಿ ಎಂದು ಘೋಷಣೆ ಕೂಗುತ್ತಿದ್ದ ಬಿಜೆಪಿ ಬೆಂಬಲಿಗರತ್ತ ತೆರಳಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ " ತಾವು ತಮ್ಮ ಜಗದಲ್ಲಿದ್ದಿರಿ ನಾನು ನಿಮ್ಮ ಜಗದಲ್ಲಿದ್ದೇನೆ. ಒಳ್ಳೆಯದಾಗಲಿ" ಎಂದು ಉತ್ತರಿಸಿದ್ದಾರೆ.ಇದಕ್ಕೆ ಬಿಜೆಪಿ ಕಾರ್ಯಕರ್ತರು ಅವರಿಗೆ ಆಲ್ ದಿ ಬೆಸ್ಟ್  ಹೇಳಿದ್ದಾರೆ.

ಇದಕ್ಕೂ ಮೊದಲು ಪ್ರಿಯಾಂಕಾ ಗಾಂಧಿ ಪ್ರೋಟೋಕಾಲ್ ನನ್ನು ಮುರಿದು ಜನರನ್ನು ಭೇಟಿ ಮಾಡಲು ಬ್ಯಾರಿಕೆಡ್ ನ್ನು ದಾಟಿ  ಕಾರ್ಯಕರ್ತರನ್ನು ಭೇಟಿ ಮಾಡಿ ಸೇಲ್ಪಿ ತೆಗೆಸಿಕೊಂಡರು.