'ಚುನಾವಣಾ ಪ್ರಚಾರಕ್ಕಾಗಿ ಎಲ್ಲಾ ಫ್ಲೈಟ್, ಹೆಲಿಕಾಫ್ಟರ್'ಗಳನ್ನು ಬಿಜೆಪಿ ಬುಕ್ ಮಾಡಿದೆ'

"ಬಿಜೆಪಿಯು ಚುನಾವಣೆಗಾಗಿ ಬಹುತೇಕ ಚಾರ್ಟರ್ಡ್ ವಿಮಾನಗಳು ಮತ್ತು ಹೆಲಿಕಾಪ್ಟರ್ಗಳನ್ನು ಬುಕ್ ಮಾಡಿದೆ"- ಕಾಂಗ್ರೆಸ್ ನಾಯಕ ಆನಂದ್ ಶರ್ಮಾ 

Updated: Jan 23, 2019 , 12:20 PM IST
'ಚುನಾವಣಾ ಪ್ರಚಾರಕ್ಕಾಗಿ ಎಲ್ಲಾ ಫ್ಲೈಟ್, ಹೆಲಿಕಾಫ್ಟರ್'ಗಳನ್ನು ಬಿಜೆಪಿ ಬುಕ್ ಮಾಡಿದೆ'

ನವದೆಹಲಿ: "ಮುಂಬರುವ ಲೋಕಸಭಾ ಚುನಾವಣೆಯ ಪ್ರಚಾರಕ್ಕಾಗಿ ಬಿಜೆಪಿ ಬಹುತೇಕ ಎಲ್ಲ ಖಾಸಗಿ  ಚಾರ್ಟರ್ಡ್ ವಿಮಾನಗಳು ಮತ್ತು ಹೆಲಿಕಾಪ್ಟರ್ಗಳನ್ನು ಬುಕ್ ಮಾಡಿದೆ" ಎಂದು ಹಿರಿಯ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಆರೋಪಿಸಿದ್ದಾರೆ. 

ಚುನಾವಣಾ ಸಂಪನ್ಮೂಲಗಳ ವಿಷಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಯಾವುದೇ ಹೋಲಿಕೆ ಇಲ್ಲ. ಆದರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಲಿದೆ ಎಂದು ಆನಂದ್ ಶರ್ಮಾ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಆನಂದ್ ಶರ್ಮಾ, "ಚುನಾವಣೆಗೆ ಸಂಬಂಧಿಸಿದಂತೆ ಎಲ್ಲಾ ಚಾರ್ಟರ್ಡ್ ವಿಮಾನಗಳು ಮತ್ತು ಹೆಲಿಕಾಪ್ಟರ್ಗಳನ್ನು ಬಿಜೆಪಿ ಬುಕ್ ಮಾಡಿದೆ. ಕಾಂಗ್ರೆಸ್ ಅವರಿಗೆ ಹೋರಾಟ ಮಾಡುತ್ತಿದೆ. ' ಚುನಾವಣಾ ಸಂಪನ್ಮೂಲಗಳ ವಿಷಯದಲ್ಲಿ ನಾವು ಬಿಜೆಪಿಗೆ ಯಾವುದೇ ಹೊಂದಾಣಿಕೆ ಇಲ್ಲದಿದ್ದರೂ, ಲೋಕಸಭಾ ಚುನಾವಣೆಯಲ್ಲಿ ಅವರನ್ನು ಸೋಲಿಸಲು ನಮಗೆ ಸಾಧ್ಯವಿದೆ" ಎಂದು ಹೇಳಿದರು.

ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪ್ರಚಾರದ ಸಂಪೂರ್ಣ ರೂಪುರೇಷೆ ಫೆಬ್ರವರಿ ಅಂತ್ಯದೊಳಗೆ ಹೊರಹೊಮ್ಮಲಿದೆ ಎಂದು ಆನಂದ್ ಶರ್ಮಾ ಹೇಳಿದ್ದಾರೆ. ಚುನಾವಣಾ ಪ್ರಣಾಳಿಕೆಯಲ್ಲಿ, ಕಾಂಗ್ರೆಸ್ ದೇಶಕ್ಕೆ ಹೊಸ ದಿಕ್ಕನ್ನು ನೀಡಲಿದೆ ಮತ್ತು ಸಮಸ್ಯೆಗಳಿಗೆ ಪರಿಹಾರ ನೀಡಲಿದೆ ಎಂದು ಅವರು ಹೇಳಿದರು.