ಜೈಪುರ: ರಾಜಸ್ತಾನದ ಸ್ಥಳೀಯ ಸಂಸ್ಥೆಗಳಾದ ಜಿಲ್ಲಾ ಪರಿಷತ್, ಪಂಚಾಯತ್ ಸಮಿತಿ ಮತ್ತು ನಗರ್ ಪಾಲಿಕಾ /ನಗರ್ ಪರಿಷತ್ ಗಳಿಗಾಗಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಭರ್ಜರಿ ಜಯ ಗಳಿಸಿದೆ.
ಜಿಲ್ಲಾ ಪರಿಷತ್ ನಲ್ಲಿ 6 ಸ್ಥಾನಗಳಲ್ಲಿ ಕಾಂಗ್ರೆಸ್ 4 ಸ್ಥಾನ ಗಳಿಸಿದರೆ, ಬಿಜೆಪಿ ಮತ್ತು ಸ್ವತಂತ್ರ ಅಭ್ಯರ್ಥಿಗಳು ತಲಾ ಒಂದು ಸ್ಥಾನವನ್ನು ಗೆದ್ದಿದ್ದಾರೆ. ಪಂಚಾಯತ್ ಸಮಿತಿಯಲ್ಲಿ 21ರಲ್ಲಿ ಕಾಂಗ್ರೆಸ್ ಗೆ 12, ಬಿಜೆಪಿಗೆ 8, ಸ್ವತಂತ್ರ ಅಭ್ಯರ್ಥಿಗೆ 1 ಸ್ಥಾನ ಲಭಿಸಿದೆ. ನಗರಸಭೆಯಲ್ಲಿ ಕಾಂಗ್ರೆಸ್ ಗೆ 4 ,ಬಿಜೆಪಿಗೆ 2 ಸ್ಥಾನ ಲಭಿಸಿದೆ.
After winning the recent MP&MLA by elections,cong has today comprehensively routed BJP in the local body by elections held in 21 dists in Rajasthan!
Final seat tally-
Zila Parishad 6: cong 4, BJP 1, IND 1
Panchayat Samiti 21: cong 12, BJP 8, IND 1
Municipalities 6: cong 4,BJP 2— Sachin Pilot (@SachinPilot) March 7, 2018
ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷವು ಇತ್ತೀಚಿಗೆ ಎರಡು ಲೋಕಸಭೆ ಮತ್ತು ಒಂದು ವಿಧಾನಸಭಾ ಕ್ಷೇತ್ರಗಳಿಗಾಗಿ ನಡೆದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು. ಈಗ ಮತ್ತೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು ಮುಂಬರುವ ರಾಜಸ್ತಾನದ ವಿಧಾನಸಭೆಯಲ್ಲಿ ಅಧಿಕಾರಕ್ಕೆ ಬರುವ ಸೂಚನೆಯನ್ನು ಈ ಎಲ್ಲ ಫಲಿತಾಂಶವು ನೀಡುತ್ತಿದೆ ಎಂದು ಹೇಳಲಾಗಿದೆ.