ರಾಮಮಂದಿರ ನಿರ್ಮಾಣ ಕಾರ್ಯ 2019ರ ಚುನಾವಣೆಗೂ ಮೊದಲೇ ಪ್ರಾರಂಭ- ಬಿಜೆಪಿ ನಾಯಕ ರಾಮ್ ವಿಲಾಸ ವೇದಾಂತಿ

2019 ರ ಲೋಕಸಭೆ ಚುನಾವಣೆಗೆ ಮೊದಲು ರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಆರಂಭವಾಗಲಿದೆ ಎಂದು ಬಿಜೆಪಿ ಮಾಜಿ ಸಂಸದ ಮತ್ತು ರಾಮ ಜನ್ಮಭೂಮಿ ನ್ಯಾಯಾಸ್ ಅಧ್ಯಕ್ಷ ರಾಮ್ ವಿಲಾಸ್ ವೇದಾಂತಿ ತಿಳಿಸಿದ್ದಾರೆ.

Last Updated : Sep 16, 2018, 04:57 PM IST
ರಾಮಮಂದಿರ ನಿರ್ಮಾಣ ಕಾರ್ಯ 2019ರ ಚುನಾವಣೆಗೂ ಮೊದಲೇ ಪ್ರಾರಂಭ- ಬಿಜೆಪಿ ನಾಯಕ  ರಾಮ್ ವಿಲಾಸ ವೇದಾಂತಿ  title=
ಸಾಂದರ್ಭಿಕ ಚಿತ್ರ

ನವದೆಹಲಿ: 2019 ರ ಲೋಕಸಭೆ ಚುನಾವಣೆಗೆ ಮೊದಲು ರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಆರಂಭವಾಗಲಿದೆ ಎಂದು ಬಿಜೆಪಿ ಮಾಜಿ ಸಂಸದ ಮತ್ತು ರಾಮ ಜನ್ಮಭೂಮಿ ನ್ಯಾಯಾಸ್ ಅಧ್ಯಕ್ಷ ರಾಮ್ ವಿಲಾಸ್ ವೇದಾಂತಿ ತಿಳಿಸಿದ್ದಾರೆ.

ಭಾನುವಾರದಂದು ಅಲಹಾಬಾದ್ ನಲ್ಲಿ ಎಎನ್ಐ ಸುದ್ದಿ ಸಂಸ್ಥೆಗೆ ಮಾತನಾಡುತ್ತಾ ತಿಳಿಸಿದ ವೇದಾಂತಿ"ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಲು ಬಿಜೆಪಿ ನಿರ್ಧರಿಸಿದೆ, 2019 ರ ಚುನಾವಣೆಗೂ ಮೊದಲು ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ" ಎಂದು ವೇದಾಂತಿ ಘೋಷಿಸಿದರು.

ಆ ಮೂಲಕ ಬಿಜೆಪಿ ಮುಖಂಡರಾದ ಅಮಿತ್ ಷಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್  ಕೂಡ ರಾಮಮಂದಿರ ನಿರ್ಮಾಣದ ವಿಚಾರವಾಗಿ ಭರವಸೆ ನೀಡಿದವರ ಪಟ್ಟಿಗೆ ಇವರು ಸೇರಿದ್ದಾರೆ. ಯೋಗಿ ಆದಿತ್ಯನಾಥ್ ಅವರು ಹಲವು ಬಾರಿ ಸಾರ್ವಜನಿಕ  ವೇದಿಕೆಗಳಲ್ಲಿ ರಾಮಮಂದಿರದ ಬಗ್ಗೆ  ಹೇಳಿದ್ದರೆ, ಜುಲೈನಲ್ಲಿ ತೆಲಂಗಾಣದಲ್ಲಿ ಪಕ್ಷದ ನಾಯಕರ ಸಭೆಯಲ್ಲಿ  ಅಮಿತ್ ಶಾ ಅವರು ಭರವಸೆ ನೀಡಿದ್ದರು.

ಈಗ ನಾಶವಾಗಿರುವ ಬಾಬ್ರಿ ಮಸೀದಿ ಸ್ಥಳದಲ್ಲಿ ಅಯೋಧ್ಯಾದ ರಾಮ ಮಂದಿರ ನಿರ್ಮಾಣವು ಬಿಜೆಪಿಯ ಪ್ರಮುಖ ಚುನಾವಣೆ ಘೋಷಣೆಯಾಗಿದೆ. ಆದ್ದರಿಂದ ಈ ವಿಚಾರ ಬಿಜೆಪಿಗೆ ಹಿಂದಿ ರಾಜ್ಯಗಳಲ್ಲಿ ಮತಗಳಿಸುವ ಸುಲಭ ಮಾರ್ಗವಾಗಿದೆ. ಈ ತರಹದ ಹೇಳಿಕೆಗಳು ಪ್ರಧಾನಿ ನರೇಂದ್ರ ಮೋದಿಯವರನ್ನು ಮರು ಆಯ್ಕೆ ಮಾಡುವ ನಿಟ್ಟಿನಲ್ಲಿ ನೀಡಲಾಗುತ್ತಿದೆ ಎಂದು ಪ್ರತಿಪಕ್ಷಗಳು ಆಪಾದಿಸಿವೆ. 

ಈಗ ರಾಮಮಂದಿರ ನಿರ್ಮಾಣದ ವಿಚಾರ ಸುಪ್ರೀಂಕೋರ್ಟ್ ನಲ್ಲಿ ಇರುವುದರಿಂದ ಈ ವಿಷಯಕ್ಕೆ ಇನ್ನು ಸರ್ವೋಚ್ಚ ನ್ಯಾಯಾಲಯ ಅಂತಿಮ ತೀರ್ಪು ನೀಡಬೇಕಾಗಿದೆ.

Trending News