Corona Third Wave: ಈ ರಾಜ್ಯದಲ್ಲಿ ಮತ್ತೆ ಆತಂಕ ಹೆಚ್ಚಿಸಿದ ಕೊರೊನಾ, ಸುಮಾರು 2 ಲಕ್ಷ ಆಕ್ಟಿವ್ ಕೇಸಸ್

ಭಾರತದಲ್ಲಿ ಕೊರೊನಾವೈರಸ್‌ನ ಮೂರನೇ ತರಂಗದ ಭಯದ ನಡುವೆ, ಕೇರಳದಲ್ಲಿ ಹೆಚ್ಚುತ್ತಿರುವ ಸೋಂಕಿನ ಒತ್ತಡವು ಆತಂಕವನ್ನು ಹೆಚ್ಚಿಸಿದೆ ಮತ್ತು ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ.

Written by - Yashaswini V | Last Updated : Aug 27, 2021, 10:25 AM IST
  • ದೇಶಾದ್ಯಂತ 24 ಗಂಟೆಗಳಲ್ಲಿ 44658 ಹೊಸ ಪ್ರಕರಣಗಳು ವರದಿ
  • 67 ಪ್ರತಿಶತ ಪ್ರಕರಣಗಳು ಕೇರಳದಲ್ಲಿ ಬಂದಿವೆ
  • ಕೇರಳದಲ್ಲಿ ಸುಮಾರು 2 ಲಕ್ಷದಷ್ಟು ಸಕ್ರಿಯ ಪ್ರಕರಣಗಳು
Corona Third Wave: ಈ ರಾಜ್ಯದಲ್ಲಿ ಮತ್ತೆ ಆತಂಕ ಹೆಚ್ಚಿಸಿದ ಕೊರೊನಾ, ಸುಮಾರು 2 ಲಕ್ಷ  ಆಕ್ಟಿವ್ ಕೇಸಸ್ title=
Corona Third Wave

ನವದೆಹಲಿ: ಭಾರತದಲ್ಲಿ ಕೊರೊನಾವೈರಸ್ ಮೂರನೇ ತರಂಗದ  ಭೀತಿಯ ನಡುವೆ, ಮತ್ತೊಮ್ಮೆ ಹೊಸ ಪ್ರಕರಣಗಳ ಸಂಖ್ಯೆ ಆತಂಕ ಸೃಷ್ಟಿಸಿದೆ. ಏತನ್ಮಧ್ಯೆ, ಕೇರಳದಲ್ಲಿ ಕೋವಿಡ್ -19 ರ ಹೊಸ ಪ್ರಕರಣಗಳು ನಿರಂತರವಾಗಿ ಹೆಚ್ಚಾಗುತ್ತಿದ್ದು ಉದ್ವಿಗ್ನತೆಯನ್ನು ಹೆಚ್ಚಿಸುತ್ತಿವೆ, ಏಕೆಂದರೆ ಕಳೆದ 2 ದಿನಗಳಿಂದ ಕೇರಳದಲ್ಲಿ 30 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದು ರಾಜ್ಯದಲ್ಲಿ ಸಕ್ರಿಯ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ 2 ಲಕ್ಷಕ್ಕೆ ಹೆಚ್ಚಾಗಿದೆ. 

ದೇಶಾದ್ಯಂತ 24 ಗಂಟೆಗಳಲ್ಲಿ 44,658 ಹೊಸ ಪ್ರಕರಣಗಳು:
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 44,658 ಹೊಸ ಕೊರೊನಾವೈರಸ್ (Coronavirus) ಪ್ರಕರಣಗಳು ವರದಿಯಾಗಿದ್ದು, ಈ ಅವಧಿಯಲ್ಲಿ 496 ಜನರು ಸಾವನ್ನಪ್ಪಿದ್ದಾರೆ. ಇದರ ನಂತರ, ದೇಶದಲ್ಲಿ ಸಾಂಕ್ರಾಮಿಕ ರೋಗಕ್ಕೆ ತುತ್ತಾದವರ ಸಂಖ್ಯೆ 3 ಕೋಟಿ 26 ಲಕ್ಷದ 3 ಸಾವಿರದ 188 ಕ್ಕೆ ಏರಿಕೆಯಾಗಿದೆ. ಇದಲ್ಲದೆ 4 ಲಕ್ಷ 36 ಸಾವಿರದ 861 ಜನರು ಕರೋನಾ ಮಹಾಮಾರಿಯಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. 

ಇದನ್ನೂ ಓದಿ- ಮುಂಬಯಿಯ ಶಾಲೆಯಲ್ಲಿ 22 ಮಕ್ಕಳಿಗೆ ಕರೋನ ಸೋಂಕು ದೃಢ , ಹನ್ನೆರಡು ವರ್ಷಕ್ಕಿಂತ ಕೆಳಗಿನ ನಾಲ್ಕು ಮಕ್ಕಳು ಪಾಸಿಟಿವ್

ಈ ಮೊದಲು ಗುರುವಾರ (26 ಆಗಸ್ಟ್) ದೇಶಾದ್ಯಂತ 46164 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ, 32988 ಜನರು ಗುಣಮುಖರಾಗಿದ್ದಾರೆ, ನಂತರ ಕರೋನಾದಿಂದ ಚೇತರಿಸಿಕೊಂಡವರ ಸಂಖ್ಯೆ 3 ಕೋಟಿ 18 ಲಕ್ಷ 21 ಸಾವಿರದ 428 ಕ್ಕೆ ಏರಿದೆ ಮತ್ತು 3 ಲಕ್ಷ 44 ಸಾವಿರದ 899 ಸಕ್ರಿಯ ಪ್ರಕರಣಗಳಿವೆ.

67 ಪ್ರತಿಶತದಷ್ಟು ಪ್ರಕರಣಗಳು ಕೇರಳದಿಂದ ವರದಿಯಾಗಿದೆ:
ಕೇರಳದಲ್ಲಿ ಹೆಚ್ಚುತ್ತಿರುವ ಸೋಂಕಿನ ವೇಗವು ಮೂರನೇ ತರಂಗ ಕೊರೊನಾವೈರಸ್‌ನ (Coronavirus 3rd Wave) ಭಯವನ್ನು ಹೆಚ್ಚಿಸಿದೆ ಮತ್ತು ಈ ರಾಜ್ಯದಲ್ಲಿ ಗರಿಷ್ಠ ಸಂಖ್ಯೆಯ ಪ್ರಕರಣಗಳು ವರದಿಯಾಗುತ್ತಿವೆ. ಗುರುವಾರ (ಆಗಸ್ಟ್ 26) ಸಂಜೆ ಕೇರಳ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ರಾಜ್ಯದಲ್ಲಿ 24 ಗಂಟೆಗಳಲ್ಲಿ 30007 ಹೊಸ ಪ್ರಕರಣಗಳು ವರದಿಯಾಗಿವೆ, ಇದು ಒಟ್ಟು ಪ್ರಕರಣಗಳಲ್ಲಿ ಸುಮಾರು 67 ಪ್ರತಿಶತವಾಗಿದೆ. ಬುಧವಾರದಂದು, ರಾಜ್ಯದಲ್ಲಿ 31445 ಪ್ರಕರಣಗಳು ವರದಿಯಾಗಿದ್ದರೆ, ಮಂಗಳವಾರ 24296 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಇದನ್ನೂ ಓದಿ- COVID-19 third wave: ಎರಡನೇ ಅಲೆಗಿಂತಲೂ ಭೀಕರವಾಗುತ್ತಾ ಮೂರನೇ ಅಲೆ?

ಕೇರಳದಲ್ಲಿ ಸುಮಾರು 2 ಲಕ್ಷದಷ್ಟು ಸಕ್ರಿಯ ಪ್ರಕರಣಗಳು:
ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ಕೇರಳದಲ್ಲಿ ಕಳೆದ 24 ಗಂಟೆಗಳಲ್ಲಿ 18997 ಜನರು ಕರೋನಾದಿಂದ ಚೇತರಿಸಿಕೊಂಡಿದ್ದಾರೆ. ಹಾಗೆಯೇ ಕಳೆದ ಒಂದು ದಿನದಲ್ಲಿ ಸಾಂಕ್ರಾಮಿಕ ರೋಗದಿಂದಾಗಿ 162 ಜನರು ಸಾವನ್ನಪ್ಪಿದ್ದಾರೆ. ಪ್ರಸ್ತುತ ಕೇರಳದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1 ಲಕ್ಷ 81 ಸಾವಿರದ 209 ಆಗಿದೆ. ಕೇರಳದಲ್ಲಿ ಕೋವಿಡ್ -19 ನಿಂದಾಗಿ ಇದುವರೆಗೆ 20134 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News