Dr Randeep Guleria: ಅಪಾಯಕಾರಿ ರೀತಿಯಲ್ಲಿ ಹರಡುತ್ತಿದೆ SARS-Cov-2 : ಇಲ್ಲಿದೆ ಅದರ ಲಕ್ಷಣಗಳು!

ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನಿರ್ದೇಶಕ ಡಾ. ರಂದೀಪ್ ಗುಲೇರಿಯಾ

Last Updated : Apr 12, 2021, 04:53 PM IST
  • ದೇಶದಲ್ಲಿ ಕರೋನಾ ಸಾಂಕ್ರಾಮಿಕ ರೋಗವು ಅತೀ ವೇಗದಲ್ಲಿ ಹರಡಲು SARS-Cov-2 ಕಾರಣವಾಗಿದೆ.
  • ಕರೋನಾ ಸಾಂಕ್ರಾಮಿಕ ರೋಗ ಹರಡುವ SARS-Cov-2 ನ ಹಲವು ರೂಪಾಂತರಗಳು ವಿಶ್ವಾದ್ಯಂತ ಕಂಡುಬರುತ್ತಿವೆ
  • ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನಿರ್ದೇಶಕ ಡಾ. ರಂದೀಪ್ ಗುಲೇರಿಯಾ
Dr Randeep Guleria: ಅಪಾಯಕಾರಿ ರೀತಿಯಲ್ಲಿ ಹರಡುತ್ತಿದೆ SARS-Cov-2 : ಇಲ್ಲಿದೆ ಅದರ ಲಕ್ಷಣಗಳು! title=

ನವದೆಹಲಿ: ದೇಶದಲ್ಲಿ ಕರೋನಾ ಸಾಂಕ್ರಾಮಿಕ ರೋಗವು ಅತೀ ವೇಗದಲ್ಲಿ ಹರಡಲು SARS-Cov-2 ಕಾರಣವಾಗಿದೆ. ಈಗ ಮೊದಲಿಗಿಂತ ಹೆಚ್ಚು ಜನರನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಿದೆ. ನೀವು ಉಸಿರಾಡಲು ತೊಂದರೆ ಅನುಭವಿಸುತ್ತಿದ್ದರೆ, ನೀವು ಕೋವಿಡ್ ಹಿಡಿತದಲ್ಲಿದ್ದೀರಿ ಎಂದರ್ಥ.

ಕರೋನಾ ಸಾಂಕ್ರಾಮಿಕ ರೋಗ ಹರಡುವ SARS-Cov-2 ನ ಹಲವು ರೂಪಾಂತರಗಳು ವಿಶ್ವಾದ್ಯಂತ ಕಂಡುಬರುತ್ತಿವೆ ಎಂದು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ನಿರ್ದೇಶಕ ಡಾ. ರಂದೀಪ್ ಗುಲೇರಿಯಾ ಹೇಳಿದ್ದಾರೆ. ಅವುಗಳಲ್ಲಿ, ಯುಕೆ, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ನಲ್ಲಿ ರೂಪಾಂತರಗಳು ಹೆಚ್ಚು ಅಪಾಯಕಾರಿಯಾಗಿದೆ. ದೆಹಲಿಯಲ್ಲಿ ಯುಕೆ ಮತ್ತು ದಕ್ಷಿಣ ಆಫ್ರಿಕಾದ ರೂಪಾಂತರಗಳು ಮಾತ್ರ ಕಂಡುಬಂದಿವೆ. ಪಂಜಾಬ್ ನಲ್ಲಿಯೂ ಸಹ, ಹೆಚ್ಚಿನ ಪ್ರಕರಣಗಳು ಯುಕೆ ರೂಪಾಂತರಗಳಾಗಿವೆ.

ಇದನ್ನೂ ಓದಿ : PAN-Aadhaar ಲಿಂಕ್ ಆಗಿಲ್ಲವಾದರೆ ತಕ್ಷಣ ಮಾಡಿಕೊಳ್ಳಿ.. ಇಲ್ಲವಾದರೆ ಬೀಳಲಿದೆ ದಂಡ..!

ಒಬ್ಬ ಕರೋನಾ ರೋಗಿ ಸಂಪರ್ಕಕ್ಕೆ ಬಂದರೆ ಅದು 30 ರಿಂದ 40 ಜನರಿಗೆ ಸೋಂಕು ತಗಲುವ ಸಾಧ್ಯತೆ ಇದೆ ಎಂದು ಡಾ. ರಂದೀಪ್ ಗುಲೇರಿಯಾ(Dr Randeep Guleria) ಹೇಳಿದ್ದಾರೆ. ಈ ಅಂಕಿ-ಅಂಶವು 80 ರಿಂದ 90 ಪ್ರತಿಶತ ತಲುಪಿದೆ. ಅಂದರೆ, ಸೋಂಕಿತ ವ್ಯಕ್ತಿ ಜೊತೆ ಸಂಪರ್ಕಕ್ಕೆ ಬಂದರೆ 100 ಜನರಲ್ಲಿ 60-70 ಜನರು ಸೋಂಕಿಗೆ ಒಳಗಾ ಗುತ್ತಿರಲಿಲ್ಲ. ಆದರೆ ಈಗ ಕೇವಲ 10-20 ಜನರು ಮಾತ್ರ ಬದುಕಲು ಸಮರ್ಥರಾಗಿದ್ದಾರೆ. ಅನೇಕ ಮನೆಗಳಲ್ಲಿ, ಇಡೀ ಕುಟುಂಬಕ್ಕೆ ಮಾತ್ರ ಸೋಂಕು ತಗುಲಿತು.

ಇದನ್ನೂ ಓದಿ : Maharashtra: ಕೊರೊನಾ ಹೆಚ್ಚಳದ ಹಿನ್ನಲೆ 10,12 ನೇ ತರಗತಿ ಬೋರ್ಡ್ ಪರೀಕ್ಷೆ ಮುಂದೂಡಿಕೆ

ದೆಹಲಿಯಲ್ಲಿ ಕರೋನಾ(Corona) ವೇಗವಾಗಿ ಹರಡಲು ಹಿಂದಿನ ದೊಡ್ಡ ಕಾರಣವೆಂದರೆ ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರ ಅನುಸರಿಸದಿರುವುದು. ಆಗಾಗ ಕೈ ಸ್ಯಾನಿಟೈಸಜರ್ ಮಾಡದಿರುವುದು ಮುಂತಾದ ನಿರ್ಲಕ್ಷ್ಯಗಳು ಕಾರಣವಾಗಿವೆ. ಕರೋನಾದ ಪ್ರಥಮ ಅಲೆಯಲ್ಲಿ  ಜನರು ಸುರಕ್ಷಿತಾ ಕ್ರಮಗಳನ್ನು ಅನುಸರಿಸುತ್ತಿದ್ದರು. ಆದರೆ ಈಗ ಜನರು ಹೆಚ್ಚು  ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Public Provident Fund: ಪಿಪಿಎಫ್‌ನಲ್ಲಿ ತಿಂಗಳಿಗೆ 1000 ರೂಪಾಯಿ ಹೂಡಿಕೆ ಮಾಡಿ, 26 ಲಕ್ಷ ರೂ. ಗಳಿಸಿ

ಪರಿಸ್ಥಿತಿ ಈಗ ಕೈ ಮೀರುತ್ತಿದೆ ಎಂದು ಡಾ.ರಂದೀಪ್ ಗುಲೇರಿಯಾ ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಸರ್ಕಾರ ಆಸ್ಪತ್ರೆಗಳಲ್ಲಿ ಕೋವಿಡ್(COVID-19) ಸ್ಪೆಷಲ್ ಬೆಡ್ ಗಳನ್ನ ಹೆಚ್ಚಿಸಬೇಕಾಗುತ್ತದೆ ಮತ್ತು ಕೆಲವು ಹೋಟೆಲ್‌ಗಳನ್ನು ಆಸ್ಪತ್ರೆಗಳೊಂದಿಗೆ ಸಂಪರ್ಕಿಸಬೇಕಾಗುತ್ತದೆ. ಆದ್ದರಿಂದ ಸಾಮಾನ್ಯ ರೋಗಲಕ್ಷಣಗಳನ್ನು ಹೊಂದಿರುವ ಕರೋನಾ ರೋಗಿಗಳನ್ನು ಅಲ್ಲಿ ಪ್ರತ್ಯೇಕಿಸಬಹುದು. ಈ ಬಾರಿ ದೇಶಕ್ಕೆ ಕಡಿಮೆ ಸಮಯವಿದೆ, ಆದ್ದರಿಂದ ನಾವು ಅತ್ಯಂತ ವೇಗವಾಗಿ ಕ್ರಮ ಕೈಗೊಳ್ಳಬೇಕಾಗಿದೆ. ಇದರಿಂದ ಪರಿಸ್ಥಿತಿ ಹದಗೆಡದಂತೆ ತಡೆಯಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ : SBI  ಖಾತೆದಾರರಿಗೆ ಬಿಗ್ ಶಾಕ್: ಡಿಜಿಟಲ್ ಹಣ ವ್ಯವಹಾರಕ್ಕೆ  ಶುಲ್ಕ ವಿದಿಸುತ್ತಿದೆ ಬ್ಯಾಂಕ್!

ನಿಮ್ಮ ಬಾಯಿಯಲ್ಲಿ ರುಚಿ ಬದಲಾಗುವುದು, ಆಹಾರ ಮತ್ತು ಪಾನೀಯಗಳ ಸುವಾಸನೆ ಬರದಿರುವುದು. ದೇಹದ ಉಷ್ಣತೆಯು 99-103 ಡಿಗ್ರಿ ಸೆಲ್ಸಿಯಸ್ ಇರುವುದು. ಬೆನ್ನು ಅಥವಾ ಎದೆಯ ಮೇಲೆ ಬಿಸಿಯಾಗುವುದು ಈ ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದರೆ ಯಾವುದೇ ಕಾರಣಕ್ಕೂ  ನಿರ್ಲಕ್ಷಿಸಬೇಡಿ. ಇದರರ್ಥ ನೀವು ಕರೋನಾ ಸೋಂಕಿಗೆ ಒಳಗಾಗಿದ್ದೀರಿ ಎಂದರ್ಥ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News