Coronavirusನಿಂದ ಬಿಗಡಾಯಿಸುತ್ತಿರುವ ಪರಿಸ್ಥಿತಿ, ಪ್ರಧಾನಿ ಮೋದಿಯಿಂದ ಮಹತ್ವದ ಸಭೆ

Coronavirus In India - ಕರೋನಾ ವೈರಸ್ ಸೋಂಕಿನಿಂದ ಹದಗೆಡುತ್ತಿರುವ ಪರಿಸ್ಥಿತಿಗೆ ಸಂಬಂಧಿಸಿದಂತೆ ಪಿಎಂ ಮೋದಿ ಇಂದು ಪ್ರಮುಖ ಸಭೆ ನಡೆಸುತ್ತಿದ್ದಾರೆ. ಸಭೆಯ ನಂತರ, ಪ್ರಧಾನಿ ಮೋದಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ.

Written by - Nitin Tabib | Last Updated : May 2, 2021, 03:09 PM IST
  • ಹೆಚ್ಚಾಗುತ್ತಿರುವ ಕೊರೊನಾ ಪ್ರಕೋಪದ ನಡುವೆ ಪ್ರಧಾನಿ ಮೋದಿ ಮಹತ್ವದ ಸಭೆ.
  • ಸಭೆಯ ಬಳಿಕ ಪ್ರಧಾನಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ.
  • ಸಭೆಯಲ್ಲಿ ದೇಶಾದ್ಯಂತ ಇರುವ ಪರಿಸ್ಥಿತಿಯ ಕುರಿತು ಪ್ರಧಾನಿ ಅವಲೋಕನ.
Coronavirusನಿಂದ ಬಿಗಡಾಯಿಸುತ್ತಿರುವ ಪರಿಸ್ಥಿತಿ, ಪ್ರಧಾನಿ ಮೋದಿಯಿಂದ ಮಹತ್ವದ  ಸಭೆ  title=
PM Narendra Modi hold high level meeting (File Photo)

ನವದೆಹಲಿ: Coronavirus In India - ಕರೋನಾ ವೈರಸ್ ಸೋಂಕಿನಿಂದ ಹದಗೆಡುತ್ತಿರುವ ಪರಿಸ್ಥಿತಿಗೆ ಸಂಬಂಧಿಸಿದಂತೆ ಪಿಎಂ ಮೋದಿ (PM Narendra Modi) ಇಂದು ಪ್ರಮುಖ ಸಭೆ ನಡೆಸುತ್ತಿದ್ದಾರೆ. ಸಭೆಯ ನಂತರ, ಪ್ರಧಾನಿ ಮೋದಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ. ಈ ಸಭೆಯಲ್ಲಿ ಸಂಕಷ್ಟದ ಪರಿಸ್ಥಿತಿಯನ್ನು ಹತೋಟಿಗೆ ತರಲು ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳ ಕುರಿತು ಪ್ರಧಾನಿ ಚರ್ಚಿಸುತ್ತಿದ್ದಾರೆ ಎನ್ನಲಾಗಿದೆ. ಸುದ್ದಿ ಸಂಸ್ಥೆ ANI ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ , ಪಿಎಂ ಮೋದಿಯವರ ಇಂದಿನ ಸಭೆ ಬೆಳಗ್ಗೆ 9: 30 ರಿಂದ ಪ್ರಾರಂಭವಾಗಿದೆ. ಈ ಸಭೆಯಲ್ಲಿ ಪಿಎಂ ಮೋದಿ ಅವರು ಕರೋನಾದ ಭೀತಿ ಹುಟ್ಟಿಸುವ ಪರಿಸ್ಥಿತಿಯ ಬಗ್ಗೆ ತಜ್ಞರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಮಾಹಿತಿಯ ಪ್ರಕಾರ, ದೇಶಾದ್ಯಂತ ಆಮ್ಲಜನಕ ಮತ್ತು ಔಷಧಿಗಳ  ಲಭ್ಯತೆಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ತಜ್ಞರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

COVID-19 ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆ ಮಾನವ ಸಂಪನ್ಮೂಲಗಳ ಸ್ಥಿತಿಗತಿಗಳ  ಕುರಿತು ಕೂಡ ಚರ್ಚಿಸುತ್ತಿರುವ ಪ್ರಧಾನಿ ಮೋದಿ ಅದು ಹೇಗೆ ಬೆಳೆಸಬಹುದು ಎಂಬುದರ ಪರಿಶೀಲನೆಯಲ್ಲಿ ಪ್ರಧಾನಿ ತೊಡಗಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಬಹುಶಃ ಈ ಸಭೆಯ ನಂತರ ಪ್ರಧಾನಿ ಮೋದಿ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ದೇಶದಲ್ಲಿ ಹೆಚ್ಚುತ್ತಿರುವ ಕರೋನಾ ಸೋಂಕಿನ ಪ್ರಕರಣಗಳು ಎಲ್ಲರನ್ನೂ ಆತಂಕಕ್ಕೀಡು ಮಾಡುತ್ತಿವೆ . ಇಂದಿನ ಅಂಕಿ-ಸಂಖ್ಯೆ ಗಳ ಪ್ರಕಾರ, ಬಗ್ಗೆ ಮಾತನಾಡುವುದಾದರೆ, ಭಾನುವಾರ 24 ಗಂಟೆಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗಿವೆ. ಇದಕ್ಕೂ ಮುನ್ನ ಶನಿವಾರ 4 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು. ಇದು ಒಂದೇ ದಿನದಲ್ಲಿ ದಾಖಲಾದ ಅತಿ ಹೆಚ್ಚು ಪ್ರಕರಣಗಳಾಗಿವೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,92,488 ಕರೋನಾ ವೈರಸ್ ಪ್ರಕರಣಗಳು ದಾಖಲಾಗಿವೆ ಮತ್ತು ಈ ಅವಧಿಯಲ್ಲಿ 3689 ಜನರು ಸಾವನ್ನಪ್ಪಿದ್ದಾರೆ, ಇದು ಒಂದೇ ದಿನದಲ್ಲಿ ಸಾವಿನ ಅತಿ ದೊಡ್ಡ ಸಂಖೆಯಾಗಿದೆ . ಕೊರೊನಾ ಕಾರಣ  ಇದುವರೆಗೆ ಸೋಂಕಿತರ ಸಂಖ್ಯೆ 1,95,57,457 ಕ್ಕೆ ತಲುಪಿದೆ. ಆದರೆ, ಈ  ಸಾಂಕ್ರಾಮಿಕ  ರೋಗದ ಕಾರಣ ಮೃತಪಟ್ಟವರ  ಸಂಖ್ಯೆ   2,15,542 ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ- Coronavirus: ಭೂಸೇನೆ, ವಾಯುಸೇನೆ ಬಳಿಕ ಅಖಾಡಕ್ಕಿಳಿದ ನೌಕಾದಳ : ಆಪರೇಶನ್ Samudra Setu II ಆರಂಭ

ಪ್ರಸ್ತುತ, ದೇಶಾದ್ಯಂತ ಸಕ್ರಿಯ (Coronavirus Latest Update) ಪ್ರಕರಣಗಳ ಸಂಖ್ಯೆ 33,49,644,ರಷ್ಟು ಇದೆ ಇದು ಒಟ್ಟು ಸಕ್ರಿಯ ಪ್ರಕರಣಗಳಲ್ಲಿ 17.13% ಆಗಿದೆ. ಇದೆ ವೇಳೆ, ಕರೋನಾದಿಂದ ಚೆತರಿಸಿಕೊಂದವರ ಪ್ರಮಾಣ ಕೂಡ ಶೇ. 81.84 ರಷ್ಟಿದೆ ಹಾಗೂ ಸಾವಿನ ಪ್ರಮಾಣವು 1.10 ಶೇಕಡಾಕ್ಕೆ ಇಳಿಕೆಯಾಗಿದೆ. ಅಂದಹಾಗೆ, 1,59,92,271 ಜನರು ಕೂಡ ಈ ಕಾಯಿಲೆಯಿಂದ ಗುಣಮುಖರಾಗಿದ್ದಾರೆ.

ಇದನ್ನೂ ಓದಿ- ಕೊರೊನಾದಿಂದ ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 412 ಜನರು ಸಾವು

ದೆಹಲಿಯ ಸರ್ದಾರ್ ಪಟೇಲ್ ಕೊವಿಡ್ (Covid-19 In India) ಆರೈಕೆ ಕೇಂದ್ರಕ್ಕೆ 150 ವೆಂಟಿಲೇಟರ್‌ಗಳನ್ನು ಒದಗಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರ ಸಲಹೆಗಾರ ಭಾಸ್ಕರ್ ಖುಲ್ಬೆ ಶನಿವಾರ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ) ಎಸ್‌ಎಸ್ ದೇಸ್ವಾಲ್ ಅವರ ಕೋರಿಕೆಯ ಮೇರೆಗೆ ಪಿಎಂ-ಕೇರ್ಸ್ ನಿಧಿಯಡಿ ಕೋವಿಡ್ ಕೇರ್ ಕೇಂದ್ರಕ್ಕೆ ವೆಂಟಿಲೇಟರ್‌ಗಳನ್ನು ಒದಗಿಸಲಾಗುತ್ತಿದೆ.

ಇದನ್ನೂ ಓದಿ- Madras HC ಕಟು ಟಿಪ್ಪಣಿ ಪ್ರಶ್ನಿಸಿ SC ತಲುಪಿದ Election Commission ಕಾರಣ ಇಲ್ಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News