Coronavirus Third Wave: ಕೊರೊನಾ ವೈರಸ್ 3ನೇ ಅಲೆಯ ಪೀಕ್ ಯಾವಾಗ? ಎಷ್ಟು ಅಪಾಯಕಾರಿಯಾಗಿರಲಿದೆ?

Coronavirus Third Wave - ಸರ್ಕಾರಿ ಪ್ಯಾನೆಲ್ (Government Panel On Covid-19) ನ ವಿಜ್ಞಾನಿ ಮಣೀಂದ್ರ ಅಗರವಾಲ್ ಕೊರೊನಾ ವೈರಸ್ ನ ಮೂರನೇ ಅಲೆಯ ಕುರಿತು ಎಚ್ಚರಿಕೆ ನೀಡಿದ್ದಾರೆ. ಕೊರೊನಾದಿಂದ ರಕ್ಷಣೆಗಾಗಿ ಇರುವ ನಿಯಮಗಳನ್ನು ಸರಿಯಾಗಿ ಪಾಲಿಸದೆ ಹೋದಲ್ಲಿ ಅಕ್ಟೋಬರ್ -ನವೆಂಬರ್ ತಿಂಗಳಿನಲ್ಲಿ ಮೂರನೇ ಅಲೆ ತನ್ನ ಗರಿಷ್ಟಮಟ್ಟಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. 

Written by - Nitin Tabib | Last Updated : Jul 4, 2021, 01:55 PM IST
  • ಸೂಕ್ತ ಕೊವಿಡ್ 19 ನಡುವಳಿಕೆ ಅನುಸರಿಸಿ.
  • ಇಲ್ಲದೆ ಹೋದರೆ, ಅಕ್ಟೋಬರ್-ನವೆಂಬರ್ ನಲ್ಲಿ ಅಲೆ ಗರಿಷ್ಠ ಮಟ್ಟಕ್ಕೆ ತಲುಪಲಿದೆ.
  • ಸರ್ಕಾರಿ ಪ್ಯಾನಲ್ ವಿಜ್ಞಾನಿ ಪ್ರೊ.ಮಣಿಂದರ್ ಅಗರವಾಲ್ ಹೇಳಿದ್ದೇನು?
Coronavirus Third Wave: ಕೊರೊನಾ ವೈರಸ್ 3ನೇ ಅಲೆಯ ಪೀಕ್ ಯಾವಾಗ? ಎಷ್ಟು ಅಪಾಯಕಾರಿಯಾಗಿರಲಿದೆ? title=
Coronavirus Third Wave (File Photo)

ನವದೆಹಲಿ: Coronavirus Third Wave - ಕೊರೊನಾ ಮಹಾಮಾರಿಗೆ ಸಂಬಂಧಿಸಿದಂತೆ ರಚಿಸಲಾಗಿರುವ ಪ್ಯಾನಲ್ ನಲ್ಲಿ ಶಾಮೀಲಾಗಿರುವ ವಿಜ್ಞಾನಿ ಪ್ರೊ. ಮಣೀಂದ್ರ ಅಗರ್ವಾಲ್ (Prof. Maninder Agarwal) ಅವರು, ಕೊವಿಡ್ ಗೆ ಸೂಕ್ತ ನಡುವಳಿಕೆಯನ್ನು ಅನುಸರಿಸದಿದ್ದರೆ, ಕೊರೊನಾ ವೈರಸ್ ನ ಮೂರನೇ ಅಲೆ  (Covid-19 Third Wave) ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ತನ್ನ ಗರಿಷ್ಠ ಮಟ್ಟವನ್ನು ತಲುಪುವ ಸಾಧ್ಯತೆ ಇದೆ ಎಂದು ಹೇಳಿದ್ದರೆ. ಸರ್ಕಾರದ ಈ ಪ್ಯಾನೆಲ್ ಗೆ ಕೊವಿಡ್-19ನ ಮಾಡಲಿಂಗ್ ಮಾಡುವ ಕಾರ್ಯವನ್ನು ವಹಿಸಲಾಗಿದೆ. 

ಪ್ರೊ. ಅಗರವಾಲ್ ಅವರಿಗೆ ಸೂತ್ರ ಮಾಡೆಲ್ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಕೊವಿಡ್-19 ಪ್ರಕರಣಗಳ ಲೆಕ್ಕಾಚಾರದ ಅಂದಾಜು ವ್ಯಕ್ತಪಡಿಸಲಾಗುತ್ತದೆ. ಕೊರೊನಾ ಎರಡನೇ ಅಲೆಯ ವೇಳೆ ನಿತ್ಯ ಬೆಳಕಿಗೆ ಬಂದ ಪ್ರಕರಣಗಳ ಹೋಲಿಕೆಯಲ್ಲಿ ಮೂರನೇ ಅಲೆಯ ವೇಳೆ ನಿತ್ಯ ಅದರ ಅರ್ಧದಷ್ಟು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಆದರೆ, ಒಂದು ವೇಳೆ ಹೊಸ ರೂಪಾಂತರಿ (Covid-19 New Variant) ಬಂದರೆ, ಮೂರನೇ ಅಲೆಯ ವೇಳೆ ಸೋಂಕು ವೇಗವಾಗಿ ಹರಡುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.

ಮೂರನೇ ಅಲೆಯ ಸಂಭಾವ್ಯ ಮೂರು ಸಿನಾರಿಯೋ ರಚಿಸಲಾಗಿದೆ
ಈ ಕುರಿತು ಟ್ವೀಟ್ ಮಾಡಿರುವ ಅವರು "ನಾವು ಮೂರನೇ ಅಲೆಗೆ ಸಂಬಂಧಿಸಿದಂತೆ ಸಂಭವನೀಯ ಮೂರು ಸಿನಾರೋಯೋಗಳನ್ನು (Three Scenarios) ರಚಿಸಿಸಿದ್ದೇವೆ. ಇದರ ಪ್ರಕಾರ ಆಗಸ್ಟ್ ವರೆಗೆ ಜೀವನ ಸಾಮಾನ್ಯವಾಗಿರಲಿದೆ. ಯಾವುದೇ ಹೊಸ ರೂಪಾಂತರಿ ಬರದೆ ಹೋದಲ್ಲಿ ಎರಡನೇ ಸಿನಾರಿಯೋ ಮಧ್ಯವರ್ತಿಯಾಗಲಿದೆ. ಆಶಾವಾದಿ ಸನ್ನಿವೇಶದ ದೃಷ್ಟಿಕ್ಷೇಪಕ್ಕಿಂತ ವ್ಯಾಕ್ಸಿನೆಶನ್ ಶೇ.20 ಕಡಿಮೆ ಪರಿಣಾಮಕಾರಿ ಎಂಬುದನ್ನು ಇದರಲ್ಲಿ ನಾವು ನಂಬುತ್ತೇವೆ" ಎಂದಿದ್ದಾರೆ. 

ಇದನ್ನೂ ಓದಿ-Coronavirus Latest Update - ಇನ್ಮುಂದೆ ಮಾಸ್ಕ್ ಮೂಲಕ Corona Positive ಪತ್ತೆಹಚ್ಚಲಾಗುವುದು

"ಮೂರನೇ ಸಿನಾರಿಯೂ ನಿರಾಶಾವಾದಿ ಸಿನಾರಿಯೋ ಆಗಿದೆ ಮತ್ತು ಇದು ಮಧ್ಯವರ್ತಿ ವಿಭಿನ್ನವಾಗಿದೆ. ಶೇ.25 ರಷ್ಟು ಹೆಚ್ಚು ಸೋಂಕಿತ ರೂಪಾಂತರಿ ಆಗಸ್ಟ್ ನಲ್ಲಿ  ಹರಡಲಿದೆ (ಆದರೆ, ಡೆಲ್ಟಾ ವೇರಿಯಂಟ್ (Delta Variant) ಗಿಂತ ಹೆಚ್ಚು ಅಪಾಯಕಾರಿಯಾಗಿರುವ ಡೆಲ್ಟಾ ಪ್ಲಸ್ (Delta Plus Variant) ಇದಲ್ಲ)". ವೇಗವಾಗಿ ಹರಡುವ ಯಾವುದೇ ರೂಪಾಂತರಿ ಬರಲಿಲ್ಲ ಎಂದಾದರೆ, ಮೂರನೇ ಅಲೆ ಒಂದು ದುರ್ಬಲ ಅಲೆ ಸಾಬೀತಾಗಲಿದೆ. ಒಂದು ವೇಳೆ ವೇಗವಾಗಿ ಹರಡುವ ರೂಪಾಂತರಿಯಾದರೆ, ಇದು ಮೊದಲಿನಗಿಂತ ಹೆಚ್ಚು ಅಪಾಯಕಾರಿಯಾಗಲಿದೆ ಎಂದು ಅಗರವಾಲ್ ಹೇಳಿದ್ದಾರೆ. 

ಇದನ್ನೂ ಓದಿ-Covishield, Covaxin ಲಸಿಕೆ ಪಡೆದವರಿಗೆ ಯುರೋಪ್ ಪ್ರವಾಸಕ್ಕೆ ಅನುಮತಿ ಕೋರಿದ ಭಾರತ

ಎರಡನೇ ಅಲೆಯ ವೇಳೆ ಟೀಕೆಗೆ ಒಳಗಾಗಿತ್ತು ಪ್ಯಾನೆಲ್
ಗಣಿತದ ಮಾದರಿಗಳನ್ನು (Mathematical Model) ಬಳಸಿಕೊಂಡು ಕೊರೊನಾವೈರಸ್ ಪ್ರಕರಣಗಳ ಏರಿಕೆ ಮುನ್ಸೂಚನೆ ನೀಡಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಳೆದ ವರ್ಷ ಸರ್ಕಾರಿ ಸಮಿತಿಯನ್ನು ರಚಿಸಿತ್ತು. ಇದರಲ್ಲಿ ಪ್ರೊ. ಮನೀಂದ್ರ ಅಗರ್ವಾಲ್, ಎಂ ವಿದ್ಯಾಸಾಗರ್, ಲೆಫ್ಟಿನೆಂಟ್ ಜನರಲ್ ಮಾಧುರಿ ಕಾನಿಟ್ಕರ್ ಮುಂತಾದವರು ಈ ಸಮಿತಿಯ ಸದಸ್ಯರಾಗಿದ್ದಾರೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಅಪಾರ ಹಾನಿ ಮಾಡಿದ ಕೋವಿಡ್ -19 ರ ಎರಡನೇ ಅಲೆಯ ಕುರಿತು ನಿಖರವಾಗಿ ಊಹಿಸದ ಕಾರಣ ಸಮಿತಿಯ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು. ಮೇ 7 ರಂದು ದೇಶದಲ್ಲಿ 4,14,188 ಕೋವಿಡ್ -19 ಪ್ರಕರಣಗಳು (Covid-19 Cases In India) ದಾಖಲಾಗಿದ್ದು, ಎರಡನೇ ಅಲೆಯ ಗರಿಷ್ಟ ಮಟ್ಟ ಇದಾಗಿತ್ತು.

ಇದನ್ನೂ ಓದಿ-ಬ್ರೆಜಿಲ್ನಿಂದ ಮುಂಗಡ ಹಣವನ್ನು ಸ್ವೀಕರಿಸಿಲ್ಲ ಎಂದ ಭಾರತ್ ಬಯೋಟೆಕ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News