ಭಾರತಕ್ಕೂ ಕಾಲಿಟ್ಟಿತೇ 10 ಪಟ್ಟು ವೇಗವಾಗಿ ಹರಡುವ ಕರೋನಾದ XE ರೂಪಾಂತರ.! ಲಕ್ಷಣಗಳೇನು ತಿಳಿಯಿರಿ

ಕೋವಿಡ್ -19 ರ ನಾಲ್ಕನೇ ಅಲೆಯ ಬಗ್ಗೆ ಈಗಾಗಲೇ ತಜ್ಞರು ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಈ ಮಧ್ಯೆ, ವೇಗವಾಗಿ ಹರಡುವ ಕರೋನಾ ವೈರಸ್‌ನ XE ರೂಪಾಂತರವು ಕಳವಳವನ್ನು ಹೆಚ್ಚಿಸಿದೆ. 

Written by - Ranjitha R K | Last Updated : Apr 8, 2022, 10:18 AM IST
  • ಕರೋನಾ XE ರೂಪಾಂತರವು 10 ಪಟ್ಟು ವೇಗವಾಗಿ ಹರಡುತ್ತದೆ
  • ಕಳವಳ ಹೆಚ್ಚಿಸಿದೆ ಕರೋನಾದ XE ರೂಪಾಂತರ
  • XE ಅನ್ನು ಒಮಿಕ್ರಾನ್‌ನ ಸಬ್‌ವೇರಿಯಂಟ್‌ ಎನ್ನಲಾಗುತ್ತಿದೆ
ಭಾರತಕ್ಕೂ ಕಾಲಿಟ್ಟಿತೇ 10 ಪಟ್ಟು ವೇಗವಾಗಿ ಹರಡುವ ಕರೋನಾದ XE ರೂಪಾಂತರ.!  ಲಕ್ಷಣಗಳೇನು ತಿಳಿಯಿರಿ title=
Coronavirus XE Variant (file photo)

ನವದೆಹಲಿ : ಕಳೆದ ಕೆಲವು ವಾರಗಳಿಂದ ಭಾರತದಲ್ಲಿ ಕೊರೊನಾವೈರಸ್‌ನ ಹೊಸ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ. ಪ್ರಕರಣಗಳಲ್ಲಿ ಇಳಿಕೆ ಕಂಡು ಬಂದಿದೆ ನಿಜ ಆದರೆ ಅದರ ಅಪಾಯ ಇನ್ನೂ ಮುಗಿದಿಲ್ಲ. ಕೋವಿಡ್ -19 ರ ನಾಲ್ಕನೇ ಅಲೆಯ ಬಗ್ಗೆ ಈಗಾಗಲೇ (Coronavirus XE Variant)ತಜ್ಞರು ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಈ ಮಧ್ಯೆ, ವೇಗವಾಗಿ ಹರಡುವ ಕರೋನಾ ವೈರಸ್‌ನ  XE ರೂಪಾಂತರವು ಕಳವಳವನ್ನು ಹೆಚ್ಚಿಸಿದೆ. ಇದು ಕರೋನಾದ ಇತರ ರೂಪಾಂತರಗಳಿಗಿಂತ 10 ಪಟ್ಟು ವೇಗವಾಗಿ ಹರಡುತ್ತದೆ ಎನ್ನಲಾಗಿದೆ. 

ಭಾರತ ತಲುಪಿತಾ  10 ಪಟ್ಟು  ವೇಗವಾಗಿ ಹರಡುವ XE ರೂಪಾಂತರ ? 
ಕರೋನಾ ವೈರಸ್‌ನ ಎಕ್ಸ್‌ಇ ರೂಪಾಂತರದ (Coronavirus XE Variant)  ಮೊದಲ ಪ್ರಕರಣ ಮುಂಬೈಯಲ್ಲಿ ಕಂಡು ಬಂದಿದೆ ಎಂದು ಬಿಎಂಸಿ ಬುಧವಾರ ಹೇಳಿತ್ತು. ಆದರೆ, ಎಕ್ಸ್‌ಇ ರೂಪಾಂತರದ ಯಾವುದೇ ಪ್ರಕರಣವನ್ನು ಕೇಂದ್ರ ಸರ್ಕಾರ ಇನ್ನು ಖಚಿತಪಡಿಸಿಲ್ಲ. ಇದೀಗ ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ಅವರು XE ರೂಪಾಂತರದ ಶಂಕಿತ ರೋಗಿಯ ಸ್ಥಿತಿ ಉತ್ತಮವಾಗಿದೆ ಮತ್ತು ಅವರೊಂದಿಗೆ ಸಂಪರ್ಕಕ್ಕೆ ಬಂದಿದ್ದ ಎಲ್ಲರೂ  ಕರೋನಾ ನೆಗೆಟಿವ್ ಆಗಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Harassment:ಪತ್ರಕರ್ತರು ಸೇರಿ 8 ಮಂದಿ ಬಂಧನ: ಅರೆನಗ್ನಗೊಳಿಸಿ ಕಿರುಕುಳ ನೀಡಿದ ಪೊಲೀಸರು!

ಆತಂಕ ಸೃಷ್ಟಿಸಿದೆ ಕರೋನಾದ XE ರೂಪಾಂತರ  :
ಕರೋನಾ ವೈರಸ್‌ನ XE ರೂಪಾಂತರವು ಭಾರತ ಸೇರಿದಂತೆ ಪ್ರಪಂಚದಾದ್ಯಂತದ ದೇಶಗಳಲ್ಲಿ ಆತಂಕ ಉಂಟು ಮಾಡಿದೆ. ಈ ಆತಂಕಕ್ಕೆ ಕಾರಣವೂ ಇದೆ. ಇದುವರೆಗಿನ ಎಲ್ಲಾ ರೂಪಾಂತರಗಳಿಗಿಂತ ಇದು ಹೆಚ್ಚು ಸಾಂಕ್ರಾಮಿಕವಾಗಿದೆ ಮತ್ತು ಒಬ್ಬರಿಗಿಂತ ಒಬ್ಬರಿಗೆ 10 ಪಟ್ಟು ವೇಗವಾಗಿ ಹರಡುತ್ತದೆ ಎಂದು ಪ್ರಾಥಮಿಕ ಅಧ್ಯಯನಗಳು ಹೇಳಿವೆ. 

XE ರೂಪಾಂತರದ ಗುಣಲಕ್ಷಣಗಳು ಯಾವುವು? :
ಕೋವಿಡ್ -19 ನ XE ರೂಪಾಂತರವು (XE Variant)  ಎಷ್ಟು ಮಾರಕವಾಗಿದೆ ಮತ್ತು ಅದು ಎಷ್ಟು ಹಾನಿಯನ್ನುಂಟುಮಾಡುತ್ತದೆ ಎಂಬುದರ ಕುರಿತು ಅಧ್ಯಯನ ನಡೆಯುತ್ತಿದೆ. ಇದರ ಬಗ್ಗೆ ಇನ್ನೂ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು WHO ಹೇಳಿದೆ. ಏಕೆಂದರೆ ಅದರ ಬಗ್ಗೆ ಇನ್ನೂ ಸಾಕಷ್ಟು ಪುರಾವೆಗಳು ಕಂಡುಬಂದಿಲ್ಲ. ಇದರೊಂದಿಗೆ, ಅದರ ರೋಗಲಕ್ಷಣಗಳ ಬಗ್ಗೆ ಕೂಡಾ ಇನ್ನೂ ಏನೂ ಸ್ಪಷ್ಟವಾಗಿಲ್ಲ . 

ಇದನ್ನೂ ಓದಿ : ಆಂಧ್ರಪ್ರದೇಶ ಸಚಿವ ಸಂಪುಟ ವಿಸರ್ಜನೆ, 24 ಸಚಿವರ ರಾಜೀನಾಮೆ

ಆದರೆ ಅದರ ರೋಗಲಕ್ಷಣಗಳು ಓಮಿಕ್ರಾನ್‌ನಂತೆಯೇ ಇರಬಹುದು ಎನ್ನಲಾಗಿದೆ . ಜ್ವರ, ಕೆಮ್ಮು, ಉಸಿರಾಟದ ತೊಂದರೆ, ದೇಹದ ನೋವು, ತಲೆನೋವು, ಗಂಟಲು ನೋವು,  ಇದು  XE ರೂಪಾಂತರದ ಲಕ್ಷಣಗಳಾಗಿರಬಹುದು. ಇದರ ಹೊರತಾಗಿ, ಆಯಾಸ, ತಲೆತಿರುಗುವಿಕೆ, ಹೃದಯ ಬಡಿತದಲ್ಲಿ ಹೆಚ್ಚಳ, ವಾಸನೆ ಮತ್ತು ರುಚಿಇಲ್ಲದಿರುವುದು ಈ ರೋಗಲಕ್ಷಣಗಳು ಕಂಡು ಬಂದರೆ ತಕ್ಷಣ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಲಾಗಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News