ಡಿ.ಕೆ.ಶಿವಕುಮಾರ್ ವಿರುದ್ಧ ಆಧಾರ ರಹಿತ ಸುದ್ದಿ ಪ್ರಕಟಣೆಗೆ ತಡೆ ನೀಡಿದ ಕೋರ್ಟ್

    

Last Updated : Jun 24, 2018, 01:51 PM IST
ಡಿ.ಕೆ.ಶಿವಕುಮಾರ್ ವಿರುದ್ಧ ಆಧಾರ ರಹಿತ ಸುದ್ದಿ ಪ್ರಕಟಣೆಗೆ ತಡೆ ನೀಡಿದ ಕೋರ್ಟ್  title=
file photo

ಬೆಂಗಳೂರು: ಕಾಂಗ್ರೆಸ್ ನ ಹಿರಿಯ ನಾಯಕ ಹಾಗೂ ವೈಧ್ಯಕೀಯ ಮತ್ತು ಜಲಸಂಪನ್ಮೂಲ ಸಚಿವರಾಗಿರುವ ಡಿ.ಕೆ ಶಿವಕುಮಾರ ಅವರ ವಿರುದ್ಧ ಯಾವುದೇ ರೀತಿಯ ಆಧಾರ ರಹಿತ ಸುದ್ದಿಯನ್ನು ಬಿತ್ತರಿಸದು ಅಥವಾ ಪ್ರಕಟಿಸಕೂಡದು ಎಂದು ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ತಿಳಿಸಿದೆ.

ಇದಕ್ಕೆ  ತಾತ್ಕಾಲಿಕ ತಡೆಯನ್ನು ಕೂಡ ನೀಡಬೇಕೆಂದು ಅದು ತನ್ನ ತೀರ್ಪಿನಲ್ಲಿ ತಿಳಿಸಿದೆ. ಇನ್ನು ಅಧಾರ ರಹಿತ ಸುದ್ದಿಯನ್ನು ಈಗಾಗಾಲೇ ಪ್ರಕಟಿಸಿರುವ ಅಥವಾ ಬಿತ್ತರಿಸಿರುವ ಸುದ್ದಿವಾಹಿನಿ ಮತ್ತು ಪತ್ರಿಕೆಗಳಿಗೆ ನೋಟಿಸ್ ನ್ನು ನೀಡಲಾಗಿದೆ.ಇದೇ ಜುಲೈ 2 ರ ಒಳಗಾಗಿ  ಕೋರ್ಟ್ ಎದುರು ಹಾಜರಾಗಿ ಸ್ಪಷ್ಟನೆ ನೀಡಬೇಕೆಂದು ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.  

Trending News