Covid-19 Self-Testing Kit CoviSelf : ಮನೆಯಲ್ಲಿ ಮಾಡಿಕೊಳ್ಳಿ ಬರೀ 250 ರೂ.ಗೆ ಕೊರೋನಾ ಟೆಸ್ಟ್!

ಈ ಆರ್​ಎಟಿ ಕಿಟ್​ಗಳ ಬಳಕೆಯು ಮೊಬೈಲ್ ಆ್ಯಪ್​ ಮೂಲಕ ಕೆಲಸ ಮಾಡಲಿದೆ, ಈ ಪರೀಕ್ಷೆಯನ್ನು ಯಾರು ಮತ್ತು ಹೇಗೆ ಮಾಡಬೇಕೆಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್​(ಐಸಿಎಂಆರ್) ವಿವರವಾದ ನಿಯಮಗಳನ್ನು ಜಾರಿಗೊಳಿಸಿದೆ

Last Updated : May 20, 2021, 01:38 PM IST
  • ಮನೆಯಲ್ಲೇ ಕೊರೋನಾ ಟೆಸ್ಟ್ ನಡೆಸುವ ರಾಪಿಡ್​ ಆಯಂಟಿಜನ್​ ಟೆಸ್ಟ್​ ಕಿಟ್
  • ಈ ಆರ್​ಎಟಿ ಕಿಟ್​ಗಳ ಬಳಕೆಯು ಮೊಬೈಲ್ ಆ್ಯಪ್​ ಮೂಲಕ ಕೆಲಸ ಮಾಡಲಿದೆ
  • ಈ ಟೆಸ್ಟ್​ ಕಿಟ್​ನ ಬೆಲೆ ಕೇವಲ 250 ರೂಪಾಯಿ ಎನ್ನಲಾಗಿದೆ
Covid-19 Self-Testing Kit CoviSelf : ಮನೆಯಲ್ಲಿ ಮಾಡಿಕೊಳ್ಳಿ ಬರೀ 250 ರೂ.ಗೆ ಕೊರೋನಾ ಟೆಸ್ಟ್! title=

ನವದೆಹಲಿ : ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹಿನ್ನೆಲೆಯಲ್ಲಿ ಕೊರೋನಾ ಟೆಸ್ಟ್ ನಡೆಸುವ ಲ್ಯಾಬರೇಟರಿ ಗಳ ಮೇಲೂ ಸಾಕಷ್ಟು ಒತ್ತಡವಿದೆ. ಇದನ್ನು ತಪ್ಪಿಸಲು ಇದೀಗ ಮನೆಯಲ್ಲೇ ಕೊರೋನಾ ಟೆಸ್ಟ್ ನಡೆಸುವ ರಾಪಿಡ್​ ಆಯಂಟಿಜನ್​ ಟೆಸ್ಟ್​ (RAT)ಕಿಟ್​ಗಳ ಬಳಕೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಶೀಘ್ರವಾಗಿ ರಿಸಲ್ಟ್ ನೀಡುವ ಈ ಟೆಸ್ಟ್​ನ ಬಳಕೆಯಿಂದ ಕೊರೋನಾ ರೋಗಿಗಳು ಸಕಾಲಿಕ ಚಿಕಿತ್ಸೆ ನೀಡಲು ಸಹಾಯವಾಗಲಿದೆ ಎನ್ನಲಾಗಿದೆ.

ಈ ಆರ್​ಎಟಿ ಕಿಟ್​ಗಳ ಬಳಕೆಯು ಮೊಬೈಲ್ ಆ್ಯಪ್​ ಮೂಲಕ ಕೆಲಸ ಮಾಡಲಿದೆ, ಈ ಪರೀಕ್ಷೆಯನ್ನು ಯಾರು ಮತ್ತು ಹೇಗೆ ಮಾಡಬೇಕೆಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್​(ICMR) ವಿವರವಾದ ನಿಯಮಗಳನ್ನು ಜಾರಿಗೊಳಿಸಿದೆ. ಕೇವಲ ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿರುವವರು ಮತ್ತು ಲ್ಯಾಬ್​ ಟೆಸ್ಟ್​ನಲ್ಲಿ ರಿಪೋರ್ಟ್ ಪಾಸಿಟೀವ್ ಬಂದಿರುವವರ ಸಂಪರ್ಕಕ್ಕೆ ಒಳಗಾಗಿರುವವರು ಈ ಹೋಮ್ ಟೆಸ್ಟ್ ​​ಅನ್ನು ಮಾಡಿಕೊಳ್ಳಬೇಕು. ಯಾರು ಬೇಕಾದರೂ  ಈ ಟೆಸ್ಟ್​ ಮಾಡಿಕೊಳ್ಳಬಾರದು ಎಂದು ಐಸಿಎಂಆರ್​ ತಿಳಿಸಿದೆ.

ಇದನ್ನೂ ಓದಿ : ಈ ಬ್ಯಾಂಕಿನ ಗ್ರಾಹಕರಿಗೆ ಸಿಹಿಸುದ್ದಿ; Doorstep Banking ದರ ಇಳಿಸಿದ ಬ್ಯಾಂಕ್

ಪುಣೆಯ ಮೈಲ್ಯಾಬ್​ ಡಿಸ್ಕವರಿ ಸಲ್ಯೂಷನ್ಸ್​​ ಲಿಮಿಟೆಡ್​ ಕಂಪೆನಿ ತಯಾರಿಸಿರುವ ಕೋವಿಸೆಲ್ಫ್​​(CoviSelf) ಟಿಎಂ (ಪ್ಯಾಥೋಕ್ಯಾಚ್) ಕೋವಿಡ್-19 ಒಟಿಸಿ ಆಯಂಟಿಜನ್ ಎಲ್​ಎಫ್​ ಡಿವೈಸ್​ ಎಂಬ ಉಪಕರಣವನ್ನು ಈ ಹೋಂ ಟೆಸ್ಟ್​ಗಾಗಿ ಐಸಿಎಂಆರ್​ ಅನುಮೋದಿಸಿದೆ. ಈ ಟೆಸ್ಟ್​ ಕಿಟ್​ನ ಬೆಲೆ ಕೇವಲ 250 ರೂಪಾಯಿ  ಎನ್ನಲಾಗಿದೆ.

ಇದನ್ನೂ ಓದಿ : White Fungus: ಬ್ಲಾಕ್ ಫಂಗಸ್ ಬಳಿಕ ವೈಟ್ ಫಂಗಸ್, ಅದು ದೇಹದ ಮೇಲೆ ಹೇಗೆ ದಾಳಿ ಮಾಡುತ್ತೆ ಗೊತ್ತಾ

ಇದನ್ನು ಬಳಸಿ ಮನೆಯಲ್ಲೇ ಪರೀಕ್ಷೆ ಒಳಪಡಲಿಚ್ಛಿಸುವವರು, ಗೂಗಲ್​ ಪ್ಲೇ ಸ್ಟೋರ್(Google Play Store) ಮತ್ತು ಆ್ಯಪಲ್ ಸ್ಟೋರ್​ಗಳಲ್ಲಿ ಲಭ್ಯವಿರುವ ಆ್ಯಪ್​ ​ಅನ್ನು ಡೌನ್​ಲೋಡ್​ ಮಾಡಿಕೊಂಡು ಅದರಲ್ಲಿರುವ ನೀಡಿರುವ ಮೂಗಿನ ದ್ರವ ಪಡೆದು ಪರೀಕ್ಷೆ ಮಾಡಿಕೊಳ್ಳಬೇಕು. ಪಾಸಿಟೀವ್ ಅಥವಾ ನೆಗೆಟೀವ್ ರಿಸಲ್ಟ್ ಬಂದ ಮೇಲೆ ಟೆಸ್ಟ್​ ಸ್ಟ್ರಿಪ್​ನ ಫೋಟೋವನ್ನು ಅದೇ ಮೊಬೈಲ್ ಫೋನಿನಲ್ಲಿ ತೆಗೆಯಬೇಕು. ಇದರಿಂದ ಮುಂದಿನ ಕ್ರಮಕ್ಕಾಗಿ ವ್ಯಕ್ತಿಯ ಡೇಟಾ ಐಸಿಎಂಆರ್​ನ ಕೇಂದ್ರೀಯ ಕೋವಿಡ್-19 ಟೆಸ್ಟಿಂಗ್ ಪೋರ್ಟಲ್​ನಲ್ಲಿ ಸಂಗ್ರಹವಾಗುತ್ತದೆ.

ಇದನ್ನೂ ಓದಿ : face book ಡಾಟಾ ಲೀಕ್ ಆಗುವುದನ್ನು ತಡೆಯಲು ಈ setting ಇಟ್ಟುಕೊಳ್ಳಿ..

ಈ ಟೆಸ್ಟ್ ನಲ್ಲಿ ರಿಸಲ್ಟ್ ಪಾಸಿಟಿವ್ ಬಂದರೆ ಅವರನ್ನು ಆರ್​ಟಿಪಿಸಿಆರ್​ ಟೆಸ್ಟ್​(RT-PCR Test)ನಲ್ಲಿ ಪಾಸಿಟಿವ್ ಬಂದವರಂತೆಯೇ ಪರಿಗಣಿಸಬೇಕು. ಮತ್ತೆ ಪರೀಕ್ಷೆ ಮಾಡುವ ಅಗತ್ಯವಿಲ್ಲ ಎಂದು  ಐಸಿಎಂಆರ್ ತಿಳಿಸಿದೆ.​ 

ಇದನ್ನೂ ಓದಿ : Heavy Rainfall : ರಾಷ್ಟ್ರರಾಜಧಾನಿಗೆ ತಟ್ಟಿದ 'ತೌಕ್ತೆ ಸೈಕ್ಲೋನ್' ಬಿಸಿ : ದೆಹಲಿಯಲ್ಲಿ ಭಾರೀ ಮಳೆ..!

ಒಂದು ವೇಳೆ ಗುಣಲಕ್ಷಣಗಳು ಕಂಡು ಬಂದರೆ ಆರ್​ಎಟಿ(RAT)ಯಲ್ಲಿ ನೆಗೆಟೀವ್​ ಬಂದರೆ ತಕ್ಷಣ ಆರ್​ಟಿಪಿಸಿಆರ್​ ಟೆಸ್ಟ್​ ಮಾಡಿಸಬೇಕು. ಏಕೆಂದರೆ ಕೆಲವೊಮ್ಮೆ ವೈರಲ್​ ಲೋಡ್​ ಕಡಿಮೆ ಇದ್ದಲ್ಲಿ ಆರ್​ಎಟಿಯಲ್ಲಿ ಪತ್ತೆಯಾಗುವುದಿಲ್ಲ ಎಂದು ತಿಳಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News