close

News WrapGet Handpicked Stories from our editors directly to your mailbox

ದೇವೇಗೌಡರ ಶಿಷ್ಯನಿಗೆ ಉತ್ತರ ಪ್ರದೇಶದಲ್ಲಿ ಒಲಿದ ವಿಜಯ!

ಎರಡು ದಶಕಗಳ ಕಾಲ ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರ ಶಿಷ್ಯ ಉತ್ತರ ಪ್ರದೇಶದಲ್ಲಿ ಗೆದ್ದಿರುವುದು ವಿಶೇಷ.

Updated: May 24, 2019 , 03:05 PM IST
ದೇವೇಗೌಡರ ಶಿಷ್ಯನಿಗೆ ಉತ್ತರ ಪ್ರದೇಶದಲ್ಲಿ ಒಲಿದ ವಿಜಯ!
File Image

ಅಮ್ರೋಹ: ಎರಡು ದಶಕಗಳ ಕಾಲ ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರ ಶಿಷ್ಯ ಡ್ಯಾನಿಶ್‌ ಅಲಿ ಉತ್ತರ ಪ್ರದೇಶದ ಅಮ್ರೋಹಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.

ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಸೀಟು ಹಂಚಿಕೆ ಪ್ರಕಟವಾದ ಬೆನ್ನಲ್ಲೇ ಬಿಎಸ್​ಪಿ ಸೇರ್ಪಡೆಗೊಂಡಿದ್ದ ಡ್ಯಾನಿಶ್ ಅಲಿ, ಈ ಬಾರಿಯ ಚುನಾವಣೆಯಲ್ಲಿ ಅಮ್ರೋಹಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಗುರು(ದೇವೇಗೌಡ) ಕಲ್ಪತರು ನಾಡಲ್ಲಿ ಸೋತಿದ್ದರೆ, ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೂ ಜೆಡಿಎಸ್ ನಲ್ಲೇ ಇದ್ದ ದೇವೇಗೌಡರ ಶಿಷ್ಯ  ಅಚ್ಚರಿಯ ಗೆಲುವು ಸಾಧಿಸಿದ ಡ್ಯಾನಿಶ್ ಅಲಿ ಕೊನೆ ಘಳಿಗೆಯಲ್ಲಿ ಬಿಎಸ್​ಪಿಗೆ ಸೇರ್ಪಡೆಗೊಂಡು ಉತ್ತರ ಪ್ರದೇಶದಲ್ಲಿ ಗೆಲುವು ಸಾಧಿಸಿರುವುದು ವಿಶೇಷವಾಗಿದೆ.

ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಆಶೀರ್ವಾದ ಹಾಗೂ ಅನುಮತಿ ಪಡೆದೇ ಬಿಎಸ್​ಪಿಗೆ ಸೇರ್ಪಡೆಯಾಗಿರುವುದಾಗಿ ತಿಳಿಸಿದ್ದ ಡ್ಯಾನಿಶ್ ಅಲಿ, ನನ್ನ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ನನ್ನ ಜನ್ಮಭೂಮಿಯಲ್ಲಿ, ಕರ್ಮಭೂಮಿಯಲ್ಲಿ ಜೆಡಿಎಸ್ ಪಕ್ಷವನ್ನು ಬೆಳೆಸಲು ಸಾಧ್ಯವಾಗಲಿಲ್ಲ. ಇಂದಿನ ಪರಿಸ್ಥಿತಿಯಲ್ಲಿ ನಮ್ಮ ಶಕ್ತಿಯನ್ನು ಬಲವಾದ ನಾಯಕತ್ವದಲ್ಲಿ ಬಳಸುವ ಅಗತ್ಯವಿದೆ ಎಂದು ಹೇಳಿದ್ದರು.