ಡಿಯರ್ ಜಿಂದಗಿ: ಅಂತಹ ಸ್ನೇಹಿತನೊಬ್ಬ ಇರಲೇಬೇಕು....

     

Last Updated : Jun 7, 2018, 04:34 PM IST
ಡಿಯರ್ ಜಿಂದಗಿ: ಅಂತಹ ಸ್ನೇಹಿತನೊಬ್ಬ ಇರಲೇಬೇಕು.... title=

ಹಿಂದಿ ಮೂಲ: ದಯಾಶಂಕರ್ ಮಿಶ್ರಾ

 

ಬಹುತೇಕ ಡಿಯರ್ ಜಿಂದಗಿಯ ಯುವ ಓದುಗರು ಗೆಳೆತನದ ಕುರಿತಾಗಿ ಸಾಕಷ್ಟು ಪ್ರಶ್ನೆಗಳನ್ನು ಎತ್ತುತ್ತಾರೆ, ಈ ಎಲ್ಲ ಪ್ರಶ್ನೆಗಳ ಒಟ್ಟು ಸಾರಾಂಶವಿಷ್ಟೇ ನಂಬಿಕಸ್ತ ಸ್ನೇಹಿತನನ್ನು ಹುಡುಕುವುದು ಹೇಗೆ ಎನ್ನುವುದರ ಬಗ್ಗೆ. ಈಗ ನಮ್ಮ ಜೀವನ ಹಲವು ಇಕ್ಕೆಲಗಳ ಮಧ್ಯಸಾಗುತ್ತಿದೆ. ಈ ಸಂದರ್ಭದಲ್ಲಿ ನಮಗೆ ಇದರ ಮಧ್ಯ ಇಬ್ಬರು ಎಂದಿಗೂ ಕೂಡ ಈ ಇಕ್ಕೆಲಗಳ ನಡುವೆ ಹೋಗಲು ಸಾಧ್ಯವಿಲ್ಲ ಎನ್ನುವಂತಾಗಿದೆ. ಒಂದು ವೇಳೆ ನೀವು ಉದಾರವಾಗಿದ್ದರೆ ಅಥವಾ ನಂಬಿಕಸ್ತರಾಗಿದ್ದಾರೆ ನೀವು ಎಂತಹ ಗಲ್ಲಿಗಳಲ್ಲಿಯೂ ಕೂಡ ಪಾರಾಗಿಬರಬಹುದು.

ಇನ್ನು ಗೆಳೆತನದ ವಿಷಯಕ್ಕೆ ಬರುವುದಾದರೆ ಈ ಕುರಿತಾಗಿ ಹಲವಾರು ಕತೆಗಳಿವೆ, ಆದರೆ ಇದರಲ್ಲಿ ಒಂದನ್ನು  ಕೇವಲ ಮಾತಿನ ಮೂಲಕ ಆರಿಸಿಕೊಳ್ಳುವುದು ನಿಜಕ್ಕೂ ಕಷ್ಟಕರವಾದ ಕೆಲಸ. ಆದರೆ ನನಗೆ  ಕೆಲವು ದಿನಗಳ ಹಿಂದಷ್ಟೇ ಶ್ರೀ ರವಿಯವರ ಸಣ್ಣ ಕಥೆಗಳ ಸಂಗ್ರಹ ದೊರಕಿತು.ಇದರಲ್ಲಿ ಒಂದಕ್ಕಿಂತ ಹೆಚ್ಚು ಸಣ್ಣ ಕಥೆಗಳಿವೆ. ಈ ಸಣ್ಣ ಕಥೆಗಳಲ್ಲಿ ಒಂದನ್ನು ಮಾತ್ರ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಅದರ  ಸಾರಾಂಶವನ್ನು ಮಾತ್ರ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತೇನೆ

ಒಂದು ಗುರುಕುಲದಿಂದ ಮೂವರು  ಪದವಿಯನ್ನು ಪಡೆದರು, ಅದರಲ್ಲಿ ಇಬ್ಬರು ಯುವಕರು, ಒಬ್ಬಳು ಮಹಿಳೆ,  ಇವರ ಮಧ್ಯ ಆತ್ಮೀಯ ಸ್ನೇಹ ಸಂಬಂಧವಿತ್ತು, ಈ ಕಥೆಯ ಕಾಲ ಘಟ್ಟವು ಪ್ರಮುಖವಾಗಿ ಒಬ್ಬ ಹುಡುಗ ಹುಡುಗಿ ಮಧ್ಯದ ಸ್ನೇಹ ಸಂಬಂಧವನ್ನು ಒಪ್ಪದದಂತಹ ಕಾಲ. ಈ ಸಂದರ್ಭದಲ್ಲಿ ಮೂವರು ಪ್ರಮುಖ ನಿರ್ಣಯವೆನೆಂದರೆ ಮದುವೆಯನ್ನೇ ಮಾಡಿಕೊಳ್ಳದಿರುವುದು ಎಂದು ತೀರ್ಮಾನಿದರು, ಈ ಮೂವರಲ್ಲಿ ಒಬ್ಬನು, ಶಿಕ್ಷಕ, ವ್ಯಾಪಾರಿ,ಮತ್ತು ಆ ಮಹಿಳೆ ಕಲೆಯನ್ನು ವೃತ್ತಿಯಾಗಿ ಆಯ್ದುಕೊಂಡರು  

ಆ ಸಂದರ್ಭದಲ್ಲಿ ಎಲ್ಲವು ಸರಿಯಾಗಿ ಸಾಗುತ್ತಿತ್ತು,ಆದರೆ ಆಗ ಈ ಮಹಿಳೆಯು ಯಾರದೋ ಜೊತೆ ಪ್ರೇಮದಲ್ಲಿ ಬಿದ್ದಿರುವ ಸಂಗತಿ ಇಡೀ ನಗರದಲ್ಲಿ ಹಬ್ಬಿತ್ತು, ಆದ್ದರಿಂದ ಆಗಿನ ಕಾಲದಲ್ಲಿ ಇದನ್ನುಅತಿ ದೊಡ್ಡ  ಅಪರಾಧ ಎಂದು ಪರಿಗಣಿಸಲಾಗಿತ್ತು. ಪ್ರತಿಷ್ಟಿತ ಗುರುಕುಲ ಮಹಿಳೆಯೊಬ್ಬಳ ಪ್ರೇಮದ ವಿಷಯವನ್ನು ಸಮಾಜಕ್ಕೆ ಅಂಟಿದ ಕಳಂಕ ಎನ್ನುವ ರೀತಿಯಲ್ಲಿ ಭಾವಿಸಲಾಗಿತ್ತು. ಅಲ್ಲದೆ ಸಮಾಜ ನೀಡುವ ಶಿಕ್ಷೆಯನ್ನು ಊಹಿಸಿಕೊಳ್ಳುವುದು ಕೂಡ ಕಷ್ಟಕರವಾಗಿತ್ತು ಎನ್ನಬಹುದು. 

ಈ ಮಹಿಳೆಯ ಪ್ರೇಮದ ಸಂಗತಿಯನ್ನು ಸಮಾಜದ ಹಿರಿಯರ ಮುಂದಿಡಲಾಯಿತು. ಇದೇ ಸಂದರ್ಭದಲ್ಲಿ  ಆ ಮಹಿಳೆಯ ಜೊತೆ ಯುವಕನ್ನು ಕೂಡ ಕರೆಯಲಾಯಿತು. ಆಗ ಆ ಮಹಿಳೆಯು  ತನ್ನ ಗುರುಕುಲದ ಸ್ನೇಹಿತರನ್ನು ಸ್ಮರಿಸಿಕೊಂಡು ಅವರನ್ನು ಕರೆತರಲು ಹೇಳಿದಳು.ಆಗ ಹಿರಿಯರ ಸಭೆ ನಡೆಯಿತು ಆ ಸಂದರ್ಭದಲ್ಲಿ ಆ ಮಹಿಳೆ ಮತ್ತು ಯುವಕನ್ನು ಈ ವಿಷಯವಾಗಿ ತಿರಸ್ಕರಿಸಲಾಯಿತು.  ಆದರೆ ಆಗ ಶಿಕ್ಷಕನಾಗಿದ್ದ ಸ್ನೇಹಿತ ಈ ಚರ್ಚೆಯಲ್ಲಿ ಇವರಿಬ್ಬರಿಗೆ ಸಾಕಷ್ಟು ಸಹಾಯ ಮಾಡಿದನು. ಅವನ ಸಹಾಯದಿಂದಾಗಿ ಆ ಮಹಿಳೆ ನಿರಪಾರಾಧಿ ಎನ್ನುವುದು ಸಾಬೀತಾಯಿತು. ಆದರೆ ಈ ವೇಳೆಯಲ್ಲಿ ಇನ್ನೊಬ್ಬ ವ್ಯಾಪಾರಿ ಮಿತ್ರ ಮೌನಕ್ಕೆ ಶರಣಾಗಿದ್ದನು. ಅಷ್ಟೇ ಅಲ್ಲದೆ ಈ ಮಹಿಳೆಯ ಜೊತೆ ಯಾವುದೇ ರೀತಿಯ ಸಂಪರ್ಕವು ಸಹಿತ ಇಲ್ಲ ಎನ್ನುವಂತೆ ಇದ್ದನು. 

ಆದರೆ ಹಿರಿಯರ ಈ ಅಂತಿಮ ತಿರ್ಮಾನದ ನಂತರವೂ ಸಹಿತ ಆ ಮಹಿಳೆಯ ಚಾರಿತ್ರ್ಯದ ವಿಷಯವಾಗಿ ಹಲವು ಮಾತುಗಳು ಬಂದವು. ಅಲ್ಲದೆ ಇನ್ನು ಆ ಮಹಿಳೆ ಮತ್ತು ಯುವಕನ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಲಾಗುತ್ತಿತ್ತು, ಈ ಸನ್ನಿವೇಶದಲ್ಲಿ ಆ ಶಿಕ್ಷಕ ಸ್ನೇಹಿತ ಸಾಕಷ್ಟು ಸಹಾಯ ಮಾಡಿದನು. ಆದರೆ ಆ ವ್ಯಾಪಾರಿ ಸ್ನೇಹಿತ ಮೌನದ ಕುರಿತಾಗಿ ಈ ಮಹಿಳೆಯು ಸಾಕಷ್ಟು ದುಃಖಿತಳಾದಳು.

ಇದಾದ ಕೆಲವು ದಿನಗಳ ನಂತರ ಆ ಮಹಿಳೆಯು ಅನಾರೋಗ್ಯಕ್ಕೆ ತುತ್ತಾದಳು.ಈ ಸಂದರ್ಭದಲ್ಲಿ ತನ್ನ ಪ್ರೀತಿ ಪಾತ್ರರಿಗೆ ಪತ್ರ ಬರೆದು ತನಗೆ ಸ್ವಲ್ಪ ಸಮಯದವರೆಗೆ ಏಕಾಂತದಲ್ಲಿ ಕಾಲ ಕಳೆಯಲು ಜಾಗಬೇಕೆಂದು ವಿನಂತಿಸಿಕೊಂಡಳು. ಆಗ ತಕ್ಷಣ ಅವಳಿಗೆ ಇಬ್ಬರು ಸ್ನೇಹಿತರು ಆಹ್ವಾನ ನೀಡಿದರು. ಈ ಸಂದರ್ಭದಲ್ಲಿ ಶಿಕ್ಷಕ ಮಿತ್ರನಿಂದ ಸಂಪೂರ್ಣ ಸಹಾಯದ ನಿರೀಕ್ಷೆ ಇತ್ತು, ಆದರೆ ವ್ಯಾಪಾರಿ ಸ್ನೇಹಿತ ಈ ಕುರಿತಾಗಿ ವ್ಯವಸ್ಥೆ ಮಾಡುವುದರ ಬಗ್ಗೆ ತಿಳಿಸಿದ.   

ಈ ಇಬ್ಬರು ಸ್ನೇಹಿತರಿಗೆ ಆ ಮಹಿಳೆಯು ಪ್ರತ್ಯೇಕವಾಗಿ ಪತ್ರವನ್ನು ಬರೆದು ಸೂಕ್ತ ಸ್ಥಳದಲ್ಲಿ ಸರಿಯಾದ ಸಮಯಕ್ಕೆ ಬಂದು ಭೇಟಿಯಾಗಲು ತಿಳಿಸಿದಳು.ಆಗ ಆ ಸ್ಥಳ ತಲುಪಿದಾಗ ಇಬ್ಬರು ಸ್ನೇಹಿತರು ಹಾಜರಿದ್ದರು, ಅದರಲ್ಲಿ ಶಿಕ್ಷಕ ಮಿತ್ರ ಕುದುರೆಯೊಂದಿಗೆ ಆಗಮಿಸಿದರೆ, ವ್ಯಾಪಾರಿಮಿತ್ರ ರಥದೊಂದಿಗೆ ಆಗಮಿಸಿದ್ದನು. ಆಗ ವ್ಯಾಪಾರಿ ಮಿತ್ರನು ಶಿಕ್ಷಕ ಮಿತ್ರನಿಗೆ ಅವಳಿಗೆ ಎಲ್ಲಿ ತನ್ನ ಏಕಾಂತತೆ ಸರಿ ಎನ್ನಿಸುತ್ತದೆಯೋ ಅಲ್ಲಿ ಅವಳು ಉಳಿದುಕೊಳ್ಳುತ್ತಾಳೆ ಎನ್ನುವನು  

ಆಗ ವ್ಯಾಪಾರಿ ಮಿತ್ರ ಅವಳನ್ನು ನಗರಿಂದ ಸ್ವಲ ದೂರದಲ್ಲಿರುವ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಾನೆ. ಆ ಸ್ಥಳವು ಬರುತ್ತಿದ್ದಂತೆಯೇ ಅವನು ಅವಳಿಗೆ " ನಾನು ಈ ಜಾಗವನ್ನು ನಿನಗಾಗಿ ಬಾಡಿಗೆಗೆ ತೆಗೆದುಕೊಂಡಿದ್ದೇನೆ, ಇಲ್ಲಿ ನಿನಗೆ ವ್ಯಕ್ತಿಯ ಜೊತೆಗೆ ನವಜಾತು ಶಿಶುವಿನ ಸ್ವಾಗತವಿದೆ, ಅಲ್ಲದೆ ಎಲ್ಲ ರೀತಿಯ ಸೌಕರ್ಯವಿದೆ ಎಂದು ಹೇಳುತ್ತಾನೆ. ಆಗ ಇದನ್ನು ಕೇಳುತ್ತಲೇ ಆನಂದಭಾಷ್ಪಳಾದ ಆ ಮಹಿಳೆಯು " ಗೆಳೆಯ ನೀನು ನನಗೆ ಸಂಕಟದ ಸಮಯದಲ್ಲಿ ಬಂದಿರುವೆ ನಿನ್ನ ಅವಶ್ಯಕತೆ ನನಗೆ ತುಂಬಾ ಇತ್ತು " ಎಂದು ಹೇಳುತ್ತಾಳೆ.

ಈ ಕಥೆ ಮುಗಿಯಿತು ಇದರ ಸಾರವಿಷ್ಟೇ  ಹಿತಚಿಂತಕರು ಮತ್ತು ಸ್ನೇಹಿತರು ಇಬ್ಬರು ಒಂದೇ ಎನ್ನುವಂತೆ ಹೇಳುತ್ತೇವೆ. ಆದರೆ, ಇಲ್ಲಿನ ಇಬ್ಬರು ಸ್ನೇಹಿತರನ್ನು ನೋಡಿದಾಗ ಇಬ್ಬರದು ಭಿನ್ನ ನಡೆಗಳು. ಹಿತ ಚಿಂತಕ ನಮಗೆ ಒಳ್ಳೆಯದನ್ನು ಬಯಸಿದರೆ, ಉತ್ತಮ ಸ್ನೇಹಿತ ನಮಗೆ ಎಲ್ಲ ಕಾಲದಲ್ಲೂ ನೆರವಾಗುತ್ತಾನೆ ಅವನು ಒಂದು ರೀತಿ ನಿತ್ಯ ಹಸಿರು ಇದ್ದ ಹಾಗೆ.

Trending News