ಶ್ರೀಗಳ ಅಗಲಿಕೆ ದೇಶಕ್ಕೆ ದೊಡ್ಡ ನಷ್ಟ- ಗೃಹ ಸಚಿವ ರಾಜನಾಥ್ ಸಿಂಗ್

ಶ್ರೀ ಶಿವಕುಮಾರ ಶ್ರೀಗಳು ದೈವಾಧೀನರಾಗಿದ್ದು ಅವರ ನಿಧನವು ದೇಶದ ಜನತೆಗೆ  ಅಪಾರ ನೋವು ತರಿಸಿದೆ.

Last Updated : Jan 21, 2019, 03:50 PM IST
ಶ್ರೀಗಳ ಅಗಲಿಕೆ ದೇಶಕ್ಕೆ ದೊಡ್ಡ ನಷ್ಟ- ಗೃಹ ಸಚಿವ ರಾಜನಾಥ್ ಸಿಂಗ್ title=

ನವದೆಹಲಿ: ಶ್ರೀ ಸಿದ್ದಗಂಗಾ ಮಠದ ಹಿರಿಯ ಯತಿಗಳಾದ ಶ್ರೀ ಶಿವಕುಮಾರ ಶ್ರೀಗಳು ದೈವಾಧೀನರಾಗಿದ್ದು ಅವರ ನಿಧನವು ದೇಶದ ಜನತೆಗೆ ಅಪಾರ ನೋವು ತರಿಸಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಟ್ವಿಟ್ಟರ್ ಮೂಲಕ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಶ್ರೀ ಸ್ವಾಮೀಜಿಯವರು ಸಾಮಾಜಿಕ, ಆಧ್ಯಾತ್ಮಿಕ,ಶೈಕ್ಷಣಿಕ  ಕ್ಷೇತ್ರದ ಒಳಿತಿಗಾಗಿ ಮಾಡಿದ ಸೇವೆ ಅತ್ಯಮೂಲ್ಯವಾದುದು . ಅವರ ಈ ಅಗಲಿಕೆ ದೇಶ ಮತ್ತು ಸಮಾಜಕ್ಕಾದ ದೊಡ್ಡ ನಷ್ಟ ಎಂದು ಅವರು ಟ್ವೀಟ್ ಮಾಡಿದ್ದಾರೆ.
 

Trending News