ದೆಹಲಿಯ ಹಿರಿಯ ಮತದಾರ 111 ವರ್ಷದ ಬಚ್ಚನ್​ ಸಿಂಗ್​ರಿಂದ ಮತದಾನ

ದೆಹಲಿಯ ಹಿರಿಯ ಮತದಾರ 111 ವರ್ಷದ ಬಚ್ಚನ್​ ಸಿಂಗ್​ ಅವರು ಸಂತ ಘರ್​ನ ಮತಗಟ್ಟೆಯಲ್ಲಿ ಇಂದು ಮತದಾನ ಮಾಡಿದರು.  

Last Updated : May 12, 2019, 12:09 PM IST
ದೆಹಲಿಯ ಹಿರಿಯ ಮತದಾರ 111 ವರ್ಷದ ಬಚ್ಚನ್​ ಸಿಂಗ್​ರಿಂದ ಮತದಾನ title=
Pic Courtesy: ANI

ನವದೆಹಲಿ: ದೆಹಲಿಯ ಹಿರಿಯ ಮತದಾರ 111 ವರ್ಷದ ಬಚ್ಚನ್​ ಸಿಂಗ್​ ಅವರು ಸಂತ ಘರ್​ನ ಮತಗಟ್ಟೆಯಲ್ಲಿ ಇಂದು ಮತದಾನ ಮಾಡಿದರು.

ಒಂದೇ ಒಂದು ಮತ ಕೂಡ ವ್ಯರ್ಥವಾಗಬಾರದು ಎಂದು ನಂಬಿರುವ ಹಿರಿಯ ಮತದಾರ ಬಚ್ಚನ್ ಸಿಂಗ್ ಅವರಿಗಾಗಿ ಚುನಾವಣಾ ಆಯೋಗದ ಅಧಿಕಾರಿಗಳು ಪಿಕ್ ಮತ್ತು ಡ್ರಾಪ್ ಸೌಲಭ್ಯ ಒದಗಿಸುವ ಮೂಲಕ ಮತಚಲಾಯಿಸಲು ಸಹಾಯ ಮಾಡಿದರು. 

"ಈ ಹಿಂದೆ ತನ್ನ ಪತ್ನಿಯೊಂದಿಗೆ ಸೈಕಲ್ ನಲ್ಲಿ ಹೋಗಿ ಮತಚಲಾಯಿಸುತ್ತಿದ್ದ ಬಚ್ಚನ್ ಸಿಂಗ್ ಕಳೆದ 2-3 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಹೊರಗೆಲ್ಲೂ ಹೋಗುತ್ತಿಲ್ಲ" ಎಂದು
ಬಚ್ಚನ್ ಸಿಂಗ್ ಸೊಸೆ ಹೇಳಿದ್ದಾರೆ.

Trending News