ನವದೆಹಲಿ: ಬಾಲಿವುಡ್ ನ ಹಿರಿಯ ನಟ ನಾನಾ ಪಾಟೇಕರ್ ಶುಕ್ರವಾರದಂದು ತಮ್ಮ ಎನ್ ಜಿ ಓ ನಾಮ್ ಫೌಂಡೆಶನ್ ನ ಕಾರ್ಯಕ್ರಮದಲ್ಲಿ ಸುದ್ದಿಗಾರೊಂದಿಗೆ ಮಾತನಾಡುತ್ತಾ ಸಧ್ಯ ದೇಶದಲ್ಲಿ ಪ್ರಜಾಪ್ರಭುತ್ವ ಉಳಿದಿರುವುದು ಕಾಂಗ್ರೆಸ್ ನಿಂದ ಎಂದು ಅಭಿಪ್ರಾಯಪಟ್ಟರು
ಬಿಜೆಪಿ ಪಕ್ಷವು ತನ್ನ 38 ಸಂಸ್ಥಾಪನಾ ದಿನದದಂದು ಕಾಂಗ್ರೆಸ್ ಮೇಲೆ ಮಾಡಿದ ಆರೋಪಗಳಿಗೆ ಪ್ರತಿಕ್ರಿಯಿಸಿದ ನಾನಾ ಪಟೇಕರ್ "ಹಲವು ವರ್ಷಗಳಿಂದ ಕಾಂಗ್ರೆಸ್ ಅಧಿಕಾರದಲ್ಲಿ ಏನೂ ಮಾಡಲಿಲ್ಲ ಎಂದು ಹೇಳಬೇಡಿ. "ರಾಜಕಾರಣಿಗಳು ಯಾವಾಗಲೂ ಮೋಜು ನೋಡುತ್ತಾರೆ, ಆದರೆ ನಮಗೆ ಈಗ ದೇಶವು ಎದುರಿಸುತ್ತಿರುವ ಪರಿಸ್ಥಿತಿಯನ್ನು ಬಲ್ಲೆವು, ನಮ್ಮ ಪ್ರಜಾಪ್ರಭುತ್ವವು ಹಲವು ವರ್ಷಗಳಿಂದ ಭಾರತದಲ್ಲಿ ಜೀವಂತವಾಗಿದ್ದರೆ ಅದರ ಶ್ರೇಯ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸಲ್ಲಬೇಕು, ಇದು ಪ್ರಮುಖ ಸಾಧನೆಯಲ್ಲವೇ? ಎಂದು ಅವರು ಪ್ರಶ್ನಿಸಿದರು.
ಇದೇ ಸಂದರ್ಭದಲ್ಲಿ ಮರಾಠಿಯ ವ್ಯಕ್ತಿಯೊಬ್ಬ ಈ ದೇಶದ ಪ್ರಧಾನಮಂತ್ರಿ ಹುದ್ದೆಗೆ ಏರಿದರೆ ತಮಗೆ ಖಂಡಿತ ಸಂತಸವಾಗುತ್ತದೆ ಎಂದು ತಿಳಿಸಿದರು.1996 ರಲ್ಲಿ ಶರದ್ ಪವಾರ್ ಗೆ ಪ್ರಧಾನಿಯಾಗುವ ಅವಕಾಶ ಬಂದಿದ್ದರ ಬಗ್ಗೆ ತಿಳಿಸಿದರು.