ಮೋದಿ ಸರ್ಕಾರದ ವಿರುದ್ಧ ಸಿಡಿದೆದ್ದ ರೈತರು! ಯಾಕಿಷ್ಟು ಸಿಟ್ಟು?

ಕೇಂದ್ರ ಸರ್ಕಾರ ತಂದಿರುವ ಮೂರು ರೈತ ಕಾಯ್ದೆಗಳ ವಿರುದ್ಧ ರೈತರ ಸಿಟ್ಟು

Last Updated : Nov 30, 2020, 06:13 PM IST
  • ಕೇಂದ್ರ ಸರ್ಕಾರ ತಂದಿರುವ ಮೂರು ರೈತ ಕಾಯ್ದೆಗಳ ವಿರುದ್ಧ ರೈತರ ಸಿಟ್ಟು
  • ಕೇಂದ್ರ ಸರ್ಕಾರದ ವಿರುದ್ಧ 'ದೆಹಲಿ ಚಲೋ' ಆಂದೋಲನ
  • ಪಂಜಾಬ್‌, ಹರಿಯಾಣ, ರಾಜಸ್ಥಾನ ಮತ್ತು ಉತ್ತರಪ್ರದೇಶಗಳ ರೈತರು ಈ ಆಂದೋಲನದಲ್ಲಿ
ಮೋದಿ ಸರ್ಕಾರದ ವಿರುದ್ಧ ಸಿಡಿದೆದ್ದ ರೈತರು! ಯಾಕಿಷ್ಟು ಸಿಟ್ಟು?

ಕೇಂದ್ರ ಸರ್ಕಾರ ತಂದಿರುವ ಮೂರು ರೈತ ಕಾಯ್ದೆಗಳ ವಿರುದ್ಧ ರೈತರ ಸಿಟ್ಟು ಬಿಗಡಾಯಿಸುತ್ತಿದೆ. ಸೆಪ್ಟೆಂಬರ್‌ನಿಂದಲೇ ರೈತ ಸಂಘಟನೆಗಳು ಇವುಗಳ ವಿರುದ್ಧ ಧ್ವನಿಯೆತ್ತಲು ಆರಂಭಿಸಿದ್ದವು. ನಾಲ್ಕಾರು ದಿನಗಳಿಂದ ಇವರೆಲ್ಲ ಕೇಂದ್ರ ಸರ್ಕಾರದ ವಿರುದ್ಧ 'ದೆಹಲಿ ಚಲೋ' ಆಂದೋಲನ ಆರಂಭಿಸಿದ್ದಾರೆ.

ಪಂಜಾಬ್‌, ಹರಿಯಾಣ, ರಾಜಸ್ಥಾನ ಮತ್ತು ಉತ್ತರಪ್ರದೇಶಗಳ ರೈತರು(Farmers) ಈ ಆಂದೋಲನದಲ್ಲಿದ್ದಾರೆ. ಹರಿಯಾಣ ಸರ್ಕಾರ ಇವರನ್ನು ದಿಲ್ಲಿ ತಲುಪದಂತೆ ಗಡಿಯಲ್ಲಿ ತಡೆದಿತ್ತು. ಬಳಿಕ ಎಲ್ಲೆಡೆಯಿಂದ ಪ್ರತಿರೋಧ ವ್ಯಕ್ತವಾದ ಬಳಿಕ, ದಿಲ್ಲಿಯತ್ತ ತೆರಳಲು ಬಿಟ್ಟಿದೆ. ಆದರೆ, ರೈತರೇ ದಿಲ್ಲಿಯತ್ತ ತೆರಳುವ ಬದಲು, ದಿಲ್ಲಿಯ ಕಡೆಗೆ ಹೋಗುವ ರಸ್ತೆಗಳನ್ನು ತಡೆದು ಪ್ರತಿಭಟಿಸಲು ಆರಂಭಿಸಿದ್ದಾರೆ. ಉತ್ತರಪ್ರದೇಶ ಹಾಗೂ ಹರಿಯಾಣ ಸರ್ಕಾರಗಳು ರೈತರನ್ನು ಸಮಾಧಾನಿಸಲು ವಿಫಲ ಪ್ರಯತ್ನ ನಡೆಸಿಸದ್ದರೆ, ಪಂಜಾಬ್‌ ಹಾಗೂ ರಾಜಸ್ಥಾನ ಸರ್ಕಾರಗಳು ಪ್ರತಿಭಟನೆಗೆ ಸಹಕಾರ ಒದಗಿಸಿಕೊಟ್ಟಿವೆ.

ಈ 4 ರಾಜ್ಯಗಳಲ್ಲಿ ಭಾರಿ ಮಳೆ ಎಚ್ಚರಿಕೆ, ಹಲವೆಡೆ Red, Orange ಅಲರ್ಟ್ ನೀಡಿದ IMD

ರೈತರ ಬೇಡಿಕೆಗಳೇನು?

-ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳು ರೈತರ ವಿರೋಧಿಯಾಗಿವೆ. ಅವುಗಳನ್ನು ಹಿಂದೆಗೆದುಕೊಳ್ಳಬೇಕು.

-ಅಥವಾ ಕನಿಷ್ಠ ಬೆಂಬಲ ಬೆಲೆಯ ಖಾತರಿ ನೀಡಬೇಕು. ಅದಕ್ಕಾಗಿ ಹೊಸ ಕಾಯ್ದೆ ರಚಿಸಬೇಕು.

Modi Govt ವಿದ್ಯಾರ್ಥಿಗಳಿಗೆ Free Laptop & Smartphone ಗಳನ್ನು ವಿತರಿಸುತ್ತಿದೆಯಂತೆ ! ನಿಜಾನಾ?

ಯಾರ ನೇತೃತ್ವ? 'ಸಂಯುಕ್ತ ಕಿಸಾನ್‌ ಮೋರ್ಚಾ' ಎಂಬ ಹೆಸರಿನಲ್ಲಿ ಹಲವಾರು ರೈತ ಸಂಘಟನೆಗಳು ಒಟ್ಟುಗೂಡಿಕೊಂಡು ಈ ಪ್ರತಿಭಟನೆ ನಡೆಸುತ್ತಿವೆ. ಕರ್ನಾಟಕದಿಂದ ಬಂದಿರುವ ಕರ್ನಾಟಕ ರಾಜ್ಯ ರೈತ ಸಂಘದ ಪ್ರತಿಭಟನಕಾರರ ನೇತೃತ್ವವನ್ನು ಕೋಡಿಹಳ್ಳಿ ಚಂದ್ರಶೇಖರ್‌ ವಹಿಸಿದ್ದಾರೆ.

ಗುಜರಾತ್‌ ಮುಂತಾದ ಕಡೆ ಭಾರಿ ಅಣೆಕಟ್ಟುಗಳ ವಿರುದ್ಧ ಹೋರಾಟವನ್ನು ಸಂಘಟಿಸಿದ್ದ ನ್ಯಾಷನಲ್‌ ಲಯನ್ಸ್‌ ಫಾರ್‌ ಪೀಪಲ್ಸ್‌ ಮೂವ್‌ಮೆಂಟ್‌ನ ನಾಯಕಿ ಮೇಧಾ ಪಾಟ್ಕರ್‌ ಜೊತೆ ಸೇರಿದ್ದಾರೆ. ಯೋಗೇಂದ್ರ ಯಾದವ್‌ ನಾಯಕತ್ವದ ಜೈಕಿಸಾನ್‌ ಆಂದೋಲನ್‌ ಇದನ್ನು ಸೇರಿಕೊಂಡಿದೆ. ಹರಿಯಾಣದ ರೈತ ಸಂಘಟನೆಗಳ ನೇತೃತ್ವವನ್ನು ಗುರ್ನಾಮ್‌ ಸಿಂಗ್‌ ಚದೂನಿ ಎಂಬವರು ವಹಿಸಿದ್ದಾರೆ.

Aadhaar ಹಾಗೂ PAN Card ನಲ್ಲಿ Name Correction ಇದೀಗ ಮತ್ತಷ್ಟು ಸುಲಭವಾಗಿದೆ

ಇವರಲ್ಲದೆ ವಿಎಂ ಸಿಂಗ್‌ ನೇತೃತ್ವದ ರಾಷ್ಟ್ರೀಯ ಕಿಸಾನ್‌ ಮಜ್ದೂರ್‌ ಸಂಘಟನ್‌, ಅವಿಕ್‌ ಸಹಾ ಮತ್ತು ಆಶಿಸ್‌ ಮಿತಾಲ್‌ ಅವರ ನೇತೃತ್ವದ ಜೈಕಿಸಾನ್‌ ಆಂದೋಲನ್‌, ವಿ ವೆಂಕಟರಾಮಯ್ಯ ನೇತೃತ್ವದ ಆಲ್‌ ಇಂಡಿಯಾ ಕಿಸಾನ್‌ ಮಜ್ದೂರ್‌ ಸಭಾ, ಅಶೋಕ್‌ ಧಾವಲ್‌ ನಾಯಕತ್ವದ ಆಲ್‌ ಇಂಡಿಯಾ ಕಿಸಾನ್‌ ಸಭಾ ಮುಂತಾದ ನೂರಾರು ಸಂಘಟನೆಗಳು ಪ್ರತಿಭಟನೆಯಲ್ಲಿವೆ.

10ನೇ ತರಗತಿ ಪಾಸ್ ಆದವರಿಗೆ ಭಾರತೀಯ ರೈಲ್ವೆಯಲ್ಲಿ ಬಂಪರ್ ಉದ್ಯೋಗಾವಕಾಶ

ಹರಿಯಾಣ ಆಡಳಿತ ಪಕ್ಷ ಬಿಜೆಪಿ, ಮಿತ್ರಪಕ್ಷ ಜೆಜೆಪಿ ಹೊರತುಪಡಿಸಿ ಉಳಿದೆಲ್ಲಾ ಪಕ್ಷಗಳೂ ರೈತರ ಪ್ರತಿಭಟನೆಯನ್ನು ಬೆಂಬಲಿಸಿವೆ. ಭೂಪಿಂದರ್‌ ಹೂಡಾ ನೇತೃತ್ವದಲ್ಲಿಕಾಂಗ್ರೆಸ್‌ ಹಾಗೂ ಅಭಯ್‌ ಚೌತಾಲ ನೇತೃತ್ವದಲ್ಲಿಐಎನ್‌ಎಲ್‌ಡಿಗಳು ರೈತರ ಹಿಂದೆ ನಿಂತಿವೆ. ಪಂಜಾಬ್‌ನಲ್ಲಿಆಳುವ ಕಾಂಗ್ರೆಸ್‌ ರೈತರನ್ನು ಬೆಂಬಲಿಸಿದೆ. ಇಲ್ಲಿನ ಪ್ರತಿಪಕ್ಷ ಶಿರೋಮಣಿ ಅಕಾಲಿ ದಳ(ಎಸ್‌ಎಡಿ)ವೂ ರೈತರ ಹಿಂದೆ ನಿಂತಿದ್ದು, ಕೃಷಿ ಕಾಯ್ದೆ ವಿರೋಧಿಸಿ ಎಸ್‌ಎಡಿಯ ನಾಯಕಿ ಹರಸಿಮ್ರತ್‌ ಬಾದಲ್‌ ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು.

ಡಿಸೆಂಬರ್‌ನಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ

ರೈತರು ಈ ಕಾಯ್ದೆಗಳನ್ನು ತಮ್ಮ ಸಾವು- ಬದುಕಿನ ಪ್ರಶ್ನೆಯಾಗಿ ಪರಿಗಣಿಸಿರುವಂತೆ ತೋರುತ್ತದೆ. ಕೇಂದ್ರ ಅಥವಾ ರಾಜ್ಯದ ಯಾವುದೇ ಮನವೊಲಿಕೆಗೂ ಇವರು ಬಗ್ಗುತ್ತಿಲ್ಲ. ರೈತರು ತಿಂಗಳುಗಟ್ಟಲೆ ಸಾಕಾಗುವಷ್ಟು ದಿನಸಿ ಮತ್ತು ಇತ್ಯಾದಿ ಸಾಮಗ್ರಿಗಳನ್ನು ಜೊತೆಯಲ್ಲಿತಂದಿದ್ದು, ಅಷ್ಟು ಕಾಲ ಡೇರೆ ಹೂಡಿ ಪ್ರತಿಭಟಿಸಲು ಸಜ್ಜಾಗಿಯೇ ಬಂದಿದ್ದಾರೆ. ಇವರ ಮೇಲೆ ನಡೆಸಬಹುದಾದ ಯಾವುದೇ ಬಗೆಯ ಬಲಪ್ರಯೋಗವೂ ಆಳುವ ಪಕ್ಷಕ್ಕೆ ಮುಜುಗರದ ಸನ್ನಿವೇಶವನ್ನು ಸೃಷ್ಟಿಸಲಿದೆ. ದೇಶದುದ್ದಗಲಕ್ಕೂ 'ಬಿಜೆಪಿ ರೈತವಿರೋಧಿ' ಎಂಬ ಸಂದೇವನ್ನೂ ತಲುಪಿಸಬಹುದು. ಈಗಾಗಲೇ ಜಲಫಿರಂಗಿ, ಅಶ್ರುವಾಯು ಪ್ರಯೋಗಗಳು ವಿಫಲವಾಗಿವೆ. ಹೀಗಾಗಿ ಹರಿಯಾಣ ಸರ್ಕಾರ, ದಿಲ್ಲಿಪ್ರವೇಶಕ್ಕೆ ರೈತರಿಗೆ ಅನುವು ಮಾಡಿಕೊಟ್ಟಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಸಹ ದಿಲ್ಲಿಗೆ ಬಂದರೆ ಮಾತುಕತೆ ನಡೆಸುವುದಾಗಿ ಸಂದೇಶ ರವಾನಿಸಿದ್ದಾರೆ. ಡಿಸೆಂಬರ್ 3 ನಿರ್ಣಯಕ ನಿರ್ಣಾಯಕ ದಿನವಾಗಿದೆ. ಮೋದಿ ಸರ್ಕಾರ ರೈತರ ಬೇಡಿಕೆಗಳನ್ನ ಈಡೇರಿಸುತ್ತ  ಅಥವಾ ಅದಕ್ಕೆ ಬೇರೆ ಮಾರ್ಗ ಹುಡುಕುತ್ತಾ ಎಂಬುವದನ್ನ ಕಾಡು ನೋಡಬೇಕಾಗಿದೆ.

ಈ ರಾಜ್ಯದಲ್ಲಿ ಕರೋನಾ RT-PCR ಟೆಸ್ಟ್ ಆಗಲಿದೆ ಅಗ್ಗ

More Stories

Trending News