ಪ್ರತಿರೋಧ ಎನ್ನುವುದು ಪ್ರಜಾಪ್ರಭುತ್ವದ ರಕ್ಷಾ ಕವಚ- ಸುಪ್ರೀಂಕೋರ್ಟ್

ಐವರು ಮಾನವ ಹಕ್ಕು ಹೋರಾಟಗಾರ ಬಂಧನವನ್ನು ಪ್ರಶ್ನಿಸಿ ರೋಮಿಲಾ ಥಾಪರ್, ಪ್ರಭಾತ್ ಪಟ್ನಾಯಕ್, ಸತೀಶ್ ದೇಶಪಾಂಡೆ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ಪ್ರತಿರೋಧ ಎನ್ನುವುದು ಪ್ರಜಾಪ್ರಭುತ್ವದ ರಕ್ಷಾ ಕವಚ ಎಂದು ತಿಳಿಸಿದೆ.

Last Updated : Aug 29, 2018, 06:47 PM IST
ಪ್ರತಿರೋಧ ಎನ್ನುವುದು ಪ್ರಜಾಪ್ರಭುತ್ವದ ರಕ್ಷಾ ಕವಚ- ಸುಪ್ರೀಂಕೋರ್ಟ್ title=

ನವದೆಹಲಿ:ಐವರು ಮಾನವ ಹಕ್ಕು ಹೋರಾಟಗಾರ ಬಂಧನವನ್ನು ಪ್ರಶ್ನಿಸಿ ರೋಮಿಲಾ ಥಾಪರ್, ಪ್ರಭಾತ್ ಪಟ್ನಾಯಕ್, ಸತೀಶ್ ದೇಶಪಾಂಡೆ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ಪ್ರತಿರೋಧ ಎನ್ನುವುದು ಪ್ರಜಾಪ್ರಭುತ್ವದ ರಕ್ಷಾ ಕವಚ ಎಂದು ತಿಳಿಸಿದೆ.

ಅಲ್ಲದೆ ಮಹಾರಾಷ್ಟ್ರ ಸರ್ಕಾರಕ್ಕೆ ಸೆಪ್ಟಂಬರ್ 6ರ ಒಳಗಾಗಿ ಉತ್ತರಿಸುವಂತೆ ಸುಪ್ರಿಂ ಆದೇಶ ನೀಡಿದೆ. ಅಲ್ಲದೆ ಅಲ್ಲಿಯವರೆಗೆ ಎಲ್ಲ ಮಾನವ ಹಕ್ಕು ಹೋರಾಟಗಾರರನ್ನು ಗೃಹ ಬಂಧನದಲ್ಲಿರಿಸಲು ಸಲಹೆ ನೀಡಿದೆ. 

ವಿಚಾರಣೆ ವೇಳೆ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಚಂದ್ರಚೂಡ್" ಪ್ರತಿರೋಧ ಪ್ರಜಾಪ್ರಭುತ್ವದ ರಕ್ಷಣಾ ಕವಚ ಒಂದುವೇಳೆ ಅದಕ್ಕೆ ಅವಕಾಶ ನೀಡದೆ ಹೋದರೆ  ಪ್ರೆಸರ್ ಕೂಕರ್ ಕೂಡ ಒಡೆದುಹೋಗುತ್ತದೆ ಎಂದು ಪ್ರಕರಣದ ಕುರಿತಾಗಿ ವ್ಯಾಖ್ಯಾನಿಸಿದ್ದಾರೆ. 

ನಿನ್ನೆ ಸರ್ಕಾರ  ಮಾನವ ಹಕ್ಕು ಹೋರಾಟಗಾರರನ್ನು ಅರ್ಬನ್ ನಕ್ಸಲ್ ಮತ್ತು ಭೀಮಾ ಕೊರೆಗಾಂ ಹಿಂಸಾಚಾರದ ವಿಚಾರವಾಗಿ ಅವರ ಕೈವಾಡವಿದೆ ಎಂದು ದೇಶಾದ್ಯಂತ ಪೊಲೀಸರು ದಾಳಿ ಮಾಡಿ ಐವರು ಹೋರಾಟಗಾರರನ್ನು ಬಂಧಿಸಿದ್ದರು.

 

Trending News