ಕೊರೆಗಾಂವ್-ಭೀಮಾ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿಸಿರುವ ಐವರು ಮಾನವ ಹಕ್ಕು ಕಾರ್ಯಕರ್ತರು ಮತ್ತೆ ನಾಲ್ಕು ವಾರಗಳವರೆಗೆ ಗೃಹ ಬಂಧನದಲ್ಲಿಯೇ ಉಳಿಯುತ್ತಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದೇ ವೇಳೆ ವಿಶೇಷ ತನಿಖಾ ತಂಡ ಅಥವಾ ಸಿಐಟಿಯ ತನಿಖೆಗಾಗಿ ಸಲ್ಲಿಸಿದ್ದ ಮನವಿ ಸುಪ್ರೀಂ ಕೋರ್ಟ್ ತಿರಸ್ಕರಿಸಿತು.
ಐವರು ಮಾನವ ಹಕ್ಕು ಹೋರಾಟಗಾರ ಬಂಧನವನ್ನು ಪ್ರಶ್ನಿಸಿ ರೋಮಿಲಾ ಥಾಪರ್, ಪ್ರಭಾತ್ ಪಟ್ನಾಯಕ್, ಸತೀಶ್ ದೇಶಪಾಂಡೆ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ಪ್ರತಿರೋಧ ಎನ್ನುವುದು ಪ್ರಜಾಪ್ರಭುತ್ವದ ರಕ್ಷಾ ಕವಚ ಎಂದು ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.