ಪತಿ ಕುರ್ಕುರೆ ತಂದಿಲ್ಲ ಎಂದು ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ ಪತ್ನಿ !

Divorce For Kurkure: ಪತಿ ಕುರ್ಕುರೆ ತರಲು ಮರೆತು ಹೋದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಭಯಂಕರ ವಾಗ್ವಾದ ನಡೆದಿದೆ. ತನ್ನ ಐದು ರೂಪಾಯಿಯ ಬೇಡಿಕೆ ಈಡೇರಿಸುವುದು ಕೂಡಾ ಸಾಧ್ಯವಾಗಿಲ್ಲ ಎಂದು ಪತ್ನಿ ಕೋಪಗೊಂಡು ಹೆತ್ತವರ ಮನೆಗೆ ತೆರಳಿದ್ದಾಳೆ.

Written by - Ranjitha R K | Last Updated : May 14, 2024, 04:55 PM IST
  • 5 ರೂಪಾಯಿ ಮೌಲ್ಯದ ಕುರ್ಕುರೆ ಪ್ಯಾಕೆಟ್‌ಗಾಗಿ ವಿಚ್ಛೇದನ
  • ನಿತ್ಯ 5 ರೂಪಾಯಿ ಮೌಲ್ಯದ ಕುರ್ಕುರೆ ತಿನ್ನುವ ಅಭ್ಯಾಸ
  • ಕೋಪಗೊಂಡು ಮನೆ ಬಿಟ್ಟು ಹೊರಟ ಪತ್ನಿ
ಪತಿ ಕುರ್ಕುರೆ ತಂದಿಲ್ಲ ಎಂದು ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ ಪತ್ನಿ ! title=

Divorce For Kurkure: ಉತ್ತರ ಪ್ರದೇಶದ ಆಗ್ರಾದ ಮಹಿಳೆಯೊಬ್ಬರು ಕೇವಲ 5 ರೂಪಾಯಿ ಮೌಲ್ಯದ ಕುರ್ಕುರೆ ಪ್ಯಾಕೆಟ್‌ಗಾಗಿ ಪತಿಯಿಂದ ವಿಚ್ಛೇದನ ಕೋರಿದ್ದಾರೆ.ವರದಿಗಳ ಪ್ರಕಾರ,ಮಹಿಳೆಗೆ ನಿತ್ಯ 5 ರೂಪಾಯಿ ಮೌಲ್ಯದ ಕುರ್ಕುರೆ ತಿನ್ನುವ ಅಭ್ಯಾಸವಿತ್ತು.ಇದರಿಂದಾಗಿ ನಿತ್ಯ ಮಹಿಳೆ ಪತಿಯ ಬಳಿ ಕುರ್ಕುರೆಗಾಗಿ ಬೇಡಿಕೆ ಇಡುತ್ತಿದ್ದಳು.ಆದರೆ ಒಂದು ದಿನ ಪತಿ ಕುರ್ಕುರೆ ತರಲು ಮರೆತು ಹೋದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಭಯಂಕರ ವಾಗ್ವಾದ ನಡೆದಿದೆ. ತನ್ನ ಐದು ರೂಪಾಯಿಯ ಬೇಡಿಕೆ ಈಡೇರಿಸುವುದು ಕೂಡಾ ಸಾಧ್ಯವಾಗಿಲ್ಲ ಎಂದು ಪತ್ನಿ ಕೋಪಗೊಂಡು ಹೆತ್ತವರ ಮನೆಗೆ ತೆರಳಿದ್ದಾಳೆ.

ನಿತ್ಯ ಕುರ್ಕುರೆ ತಿನ್ನುವ ಅಭ್ಯಾಸ : 
ಇಬ್ಬರ ನಡುವೆ ಜಗಳ ತಾರಕಕ್ಕೇರಿ ಪತ್ನಿ ತನಗೆ ವಿಚ್ಛೇದನ ಬೇಕು ಎಂದು ಕೋರಿದ್ದಾಳೆ. ವರದಿಯ ಪ್ರಕಾರ, ಕಳೆದ ವರ್ಷ ವಿವಾಹವಾದ ಈ ಜೋಡಿಯನ್ನು ಆಗ್ರಾದ ಶಹಗಂಜ್ ಪೊಲೀಸರು ಕುಟುಂಬ ಸಮಾಲೋಚನೆಗಾಗಿ ಕಳುಹಿಸಿದ್ದಾರೆ.ಪತ್ನಿಯ ಕುರ್ಕುರೆ ತಿನ್ನುವ ಅಭ್ಯಾಸವೇ ಇವರಿಬ್ಬರ ನಡುವಿನ ಜಗಳಕ್ಕೆ ಕಾರಣವಾಗಿತ್ತು. ಆದರೆ ಪತಿ ತನ್ನ ಮೇಲೆ ನಡೆಸಿರುವ ಹಲ್ಲೆಯಿಂದಾಗಿ ಮನೆ ಬಿಟ್ಟು ಹೋಗಬೇಕಾಯಿತು ಎಂದು ಪತ್ನಿ ಆರೋಪಿಸಿದ್ದಾರೆ.ಇಲ್ಲಿ ನಿಜಾಂಶ ಏನು ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಇದನ್ನೂ ಓದಿ : ಪುಷ್ಯ ನಕ್ಷತ್ರ ಗಳಿಗೆಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಧಾನಿ ಮೋದಿಗೆ ಗೆಲುವಿನ ಸಾಧ್ಯತೆ ಎಷ್ಟಿದೆ ಗೊತ್ತಾ?

ಮತ್ತೊಂದು ಪ್ರಕರಣದಲ್ಲಿ ಪತ್ನಿ ಪ್ರಸಿದ್ಧಳಾಗಿರುವುದೇ ವಿಚ್ಛೇದನಕ್ಕೆ ಕಾರಣವಾಗಿದೆ.ಪತ್ನಿಯ ಜನಪ್ರಿಯತೆ ಪತಿಗೆ ಇಷ್ಟವಾಗಲಿಲ್ಲ.ಆದರೆ ಪತ್ನಿ  ಅನೇಕ ಅಪರಿಚಿತರನ್ನು ಭೇಟಿಯಾಗುವುದು ತನಗೆ ಇಷ್ಟವಿಲ್ಲ ಎಂದು ಪತಿ ಹೇಳಿದ್ದಾನೆ.ಈ ಕಾರಣಕ್ಕಾಗಿ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಜೋಡಿ ಮದುವೆಯಾಗಿ ಎರಡು ವರ್ಷವಾಗಿತ್ತು.ಪತಿ ಸಿಕಂದರಾ ನಿವಾಸಿಯಾಗಿದ್ದು, ಪತ್ನಿ ನ್ಯೂ ಆಗ್ರಾ ನಿವಾಸಿಯಾಗಿದ್ದರು.ಪತ್ನಿ ರಾಜಕೀಯದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಬಯಸಿದ್ದರು.ಆದರೆ ಪತಿಗೆ ಇದು ಇಷ್ಟವಿರಲಿಲ್ಲ. 

ಇದನ್ನೂ ಓದಿ : ಶಸ್ತ್ರ ಚಿಕಿತ್ಸೆ ಮಾಡಿ ಹೊಟ್ಟೆಯಲ್ಲಿ ಹತ್ತಿ ಮರೆತ ವೈದ್ಯ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News