ನವದೆಹಲಿ: ಇಂದು ಮುಂಬೈ ಆವೃತ್ತಿಯ ಡಿಎನ್ಎ ಪತ್ರಿಕೆಯು ಜಾಹಿರಾತೊಂದನ್ನು ಬಿಡುಗಡೆಗೊಳಿಸಿದ್ದು, ಇದರಿಂದ ಇನ್ನು ಮುಂದೆ ಅಗಮೆಂಟೆಡ್ ರಿಯಾಲಿಟಿ ಮೂಲಕ ಇಮೇಜ್ ಗಳನ್ನು ಹೊಸ ರೀತಿಯ ಅನುಭವದೊಂದಿಗೆ ನೋಡುವ ಅವಕಾಶವನ್ನು ಹೊಂದಬಹುದು.ಈ ಹೊಸ ಪ್ರಿಂಟ್ ನ ಸಂಶೋದನೆಯು ಓದುಗರಿಗೆ ಅಗಮೆಂಟೆಡ್ ರಿಯಾಲಿಟಿ ಮೂಲಕ ಜಾಹಿರಾತನ್ನು ಸ್ಕಾನ್ ಮಾಡಬಹುದು.ಆ ಮೂಲಕ ವಿಷಯಗಳನ್ನು ಹೊಸ ಅವತಾರದ ಮೂಲಕ ನೋಡಬಹುದಾಗಿದೆ.
ಈ ತಂತ್ರಜ್ಞಾನದ ಮೂಲಕ ಮೂಲಕ ಜಾಹಿರಾತುದಾರರು ಇನ್ನು ಮುಂದೆ ಪ್ರಕಟಣೆಯ ಕುರಿತಾದ ವಿಷಯಕ್ಕೆ ಸಂಬಂಧಿಸಿದ ಹಾಗೆ ನಿಗದಿ ಪಡಿಸಿದ ಪ್ರೇಕ್ಷಕರನ್ನು ಅಥವಾ ಗ್ರಾಹಕರನ್ನು ಅತಿ ಪರಿಣಾಮಕಾರಿಯಾಗಿ ತಲುಪಬಹುದಾಗಿದೆ. ಈ ಹೊಸ ತಂತ್ರಜ್ಞಾನಕ್ಕೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ವರ್ಷ ವೈಬ್ರಂಟ್ ಮಿಡಿಯಾ ಸಮೀಕ್ಷೆಯಲ್ಲಿ ಶೇ 80 ಕ್ಕೂ ಅಧಿಕ ಜನರು ಇದಕ್ಕೆ ಒಳ್ಳೆಯ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.ಇತ್ತೀಚಿಗೆ AOL ಮತ್ತು Yahooಗಳನ್ನೂ ಒಳಗೊಂಡ ಮಿಡಿಯಾ ಕಂಪನಿ ವೆರಿಜಾನ್ ಕೂಡ ಇದೆ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದನ್ನು ಗಮನಿಸಬಹುದು.
ಈಗ ಈ ಹೊಸ ತಂತ್ರಜ್ಞಾನದ ಚಾಲನೆ ಕುರಿತಾಗಿ ಪ್ರತಿಕ್ರಿಯಿಸಿರುವ ಡಿಎನ್ಎ ದ ಸಿಇಓ ಸಂಜೀವ್ ಗಾರ್ಗ್ " ನಮ್ಮ ಸಂಸ್ಥೆಯು ಯಾವಾಗಲೂ ನೂತನ ತಂತ್ರಜ್ಞಾನವನ್ನು ಅಳವಡಿಕೊಳ್ಳುವ ಜೊತೆಗೆ ಓದುಗರಿಗೂ ಮತ್ತು ಜಾಹಿರಾತುದಾರರಿಗೂ ಕೂಡ ಅನುಕೂಲತೆಯನ್ನು ಒದಗಿಸುವ ಕಾರ್ಯ ಮಾಡಿದೆ. ಪ್ರಿಂಟ್ ಮತ್ತು ಡಿಜಿಟಲ್ ವಿಭಾಗವನ್ನು ಒಟ್ಟುಗೂಡಿಸುವುದು ಬಹುದಿನದ ಯೋಜನೆ,ಈಗ ಈ ತಂತ್ರಜ್ಞಾನದ ಮೂಲಕ ನವ ಗ್ರಾಹಕರಿಗೂ ಮತ್ತು ಪಾಳುದಾರಿಗೂ ನಡುವಿರುವ ಅಂತರವನ್ನು ಕಡಿಮೆ ಮಾಡುವುದಾಗಿದೆ. ಈಗ ಆ ನಿಟ್ಟಿನಲ್ಲಿ ಸಂಸ್ಥೆಯು ತನ್ನ ಹೆಜ್ಜೆಯನ್ನಿಟ್ಟಿದೆ" ಎಂದರು