ದೇಶದ ಪ್ರಥಮ ಪ್ರಜೆಯ ಸಂಬಳ ಎಷ್ಟು ಗೊತ್ತಾ? ಅವರಿಗೆ ಸಿಗೋ ಸೌಲಭ್ಯಗಳ ಬಗ್ಗೆ ಕೇಳಿದ್ರೆ ದಂಗಾಗುತ್ತೀರ!

ರಾಷ್ಟ್ರಪತಿಯನ್ನು ದೇಶದ ಪ್ರಥಮ ಪ್ರಜೆ ಎಂದು ಪರಿಗಣಿಸಲಾಗುತ್ತದೆ. ಭಾರತದ ರಾಷ್ಟ್ರಪತಿಗಳು ಮೂರು ಸೇವೆಗಳ (ಸೇನೆ, ವಾಯುಪಡೆ, ನೌಕಾಪಡೆ) ಸುಪ್ರೀಂ ಕಮಾಂಡರ್ ಆಗಿದ್ದಾರೆ. ಜೊತೆಗೆ ದೇಶದ ಸರ್ಕಾರವನ್ನು ಪ್ರತಿನಿಧಿಸುತ್ತಾರೆ. ಅಂತಹ ಮಹತ್ವದ ವ್ಯಕ್ತಿತ್ವದ ರಾಷ್ಟ್ರಪತಿಗಳಿಗೆ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತದೆ. ದೇಶದ ರಾಷ್ಟ್ರಪತಿ ಪಡೆಯುವ ಸಂಬಳ ಎಷ್ಟು ಗೊತ್ತಾ? ಇದನ್ನು ಹೊರತುಪಡಿಸಿ, ಅವರು ಇತರ ಯಾವ ಸೌಲಭ್ಯಗಳು ಮತ್ತು ಸವಲತ್ತುಗಳನ್ನು ಪಡೆಯುತ್ತಾರೆ. ಇದರ ಬಗ್ಗೆ ನಿಮಗೆ ತಿಳಿದಿಲ್ಲದಿದ್ದರೆ ಇಲ್ಲಿ ಮಾಹಿತಿ ನೀಡಲಿದ್ದೇವೆ. 

Written by - Bhavishya Shetty | Last Updated : Jul 17, 2022, 12:02 PM IST
  • ಭಾರತದ ಮೊದಲ ಪ್ರಜೆ ಬಗ್ಗೆ ಒಂದಿಷ್ಟು ಮಾಹಿತಿ
  • ರಾಷ್ಟ್ರಪತಿಯನ್ನು ದೇಶದ ಪ್ರಥಮ ಪ್ರಜೆ ಎಂದು ಪರಿಗಣಿಸಲಾಗುತ್ತದೆ
  • ದೇಶದ ರಾಷ್ಟ್ರಪತಿ ಪಡೆಯುವ ಸಂಬಳ ಎಷ್ಟು ಗೊತ್ತಾ?
ದೇಶದ ಪ್ರಥಮ ಪ್ರಜೆಯ ಸಂಬಳ ಎಷ್ಟು ಗೊತ್ತಾ? ಅವರಿಗೆ ಸಿಗೋ ಸೌಲಭ್ಯಗಳ ಬಗ್ಗೆ ಕೇಳಿದ್ರೆ ದಂಗಾಗುತ್ತೀರ!  title=
President Election

ಭಾರತದ ರಾಷ್ಟ್ರಪತಿ ಚುನಾವಣೆಗೆ ಕೇವಲ 24 ಗಂಟೆಗಳು ಉಳಿದಿವೆ. ಜುಲೈ 18 ರಂದು ಮತದಾನ ನಡೆದ ನಂತರ ನಮ್ಮ ದೇಶದ ಮುಂದಿನ ರಾಷ್ಟ್ರಪತಿ ಯಾರು ಎಂದು ಜುಲೈ 21 ರಂದು ತಿಳಿಯಲಿದೆ. ಜುಲೈ 25 ರಂದು ನೂತನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ನಾವು ಭಾರತದ ಮೊದಲ ಪ್ರಜೆ ಅಂದರೆ ರಾಷ್ಟ್ರಪತಿ ಹುದ್ದೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡಲಿದ್ದೇವೆ.  

ಇದನ್ನೂ ಓದಿ: ಉಪರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಖಚಿತ! ಇಲ್ಲಿದೆ ನೋಡಿ ಲೆಕ್ಕಾಚಾರ

ದೇಶದ ಪ್ರಥಮ ಪ್ರಜೆಯ ಅಧಿಕಾರಗಳು: 
ರಾಷ್ಟ್ರಪತಿಯನ್ನು ದೇಶದ ಪ್ರಥಮ ಪ್ರಜೆ ಎಂದು ಪರಿಗಣಿಸಲಾಗುತ್ತದೆ. ಭಾರತದ ರಾಷ್ಟ್ರಪತಿಗಳು ಮೂರು ಸೇನೆಗಳ (ಸೇನೆ, ವಾಯುಪಡೆ, ನೌಕಾಪಡೆ) ಸುಪ್ರೀಂ ಕಮಾಂಡರ್ ಆಗಿದ್ದಾರೆ. ಜೊತೆಗೆ ದೇಶದ ಸರ್ಕಾರವನ್ನು ಪ್ರತಿನಿಧಿಸುತ್ತಾರೆ. ಅಂತಹ ಮಹತ್ವದ ವ್ಯಕ್ತಿತ್ವದ ರಾಷ್ಟ್ರಪತಿಗಳಿಗೆ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತದೆ. ದೇಶದ ರಾಷ್ಟ್ರಪತಿ ಪಡೆಯುವ ಸಂಬಳ ಎಷ್ಟು ಗೊತ್ತಾ? ಇದನ್ನು ಹೊರತುಪಡಿಸಿ, ಅವರು ಇತರ ಯಾವ ಸೌಲಭ್ಯಗಳು ಮತ್ತು ಸವಲತ್ತುಗಳನ್ನು ಪಡೆಯುತ್ತಾರೆ. ಇದರ ಬಗ್ಗೆ ನಿಮಗೆ ತಿಳಿದಿಲ್ಲದಿದ್ದರೆ ಇಲ್ಲಿ ಮಾಹಿತಿ ನೀಡಲಿದ್ದೇವೆ. 

ಭಾರತದ ರಾಷ್ಟ್ರಪತಿಗಳು ಎಲ್ಲಿ ವಾಸಿಸುತ್ತಾರೆ? 
ಭಾರತದ ರಾಷ್ಟ್ರಪತಿಗಳು ರೈಸಿನಾ ಹಿಲ್ಸ್‌ನಲ್ಲಿ ನಿರ್ಮಿಸಲಾದ ವಿಶ್ವದ ಅತಿದೊಡ್ಡ ರಾಷ್ಟ್ರಪತಿ ಭವನದಲ್ಲಿ ವಾಸಿಸುತ್ತಾರೆ. ರಾಷ್ಟ್ರಪತಿ ಭವನದ 4 ಅಂತಸ್ತಿನ ಕಟ್ಟಡದಲ್ಲಿ ಒಟ್ಟು 340 ಕೊಠಡಿಗಳಿವೆ. ಸುಮಾರು 2.5 ಕಿ.ಮೀ ಉದ್ದದ ಕಾರಿಡಾರ್ ಮತ್ತು 190 ಎಕರೆಗಳಷ್ಟು ವಿಶಾಲವಾದ ಉದ್ಯಾನವನವಿದೆ. ಈ ವಿಶೇಷ ಮತ್ತು ಐತಿಹಾಸಿಕ ಕಟ್ಟಡದಲ್ಲಿ ಅನೇಕ ದೊಡ್ಡ ಸಭಾಂಗಣಗಳು, ಅತಿಥಿ ಕೊಠಡಿಗಳು ಮತ್ತು ಕಚೇರಿಗಳಿವೆ.

ರಾಷ್ಟ್ರಪತಿಗಳ ಸಂಬಳ: 
ನಮ್ಮ ಅಂಗಸಂಸ್ಥೆ ವೆಬ್‌ಸೈಟ್ ಇಂಡಿಯಾ.ಕಾಮ್‌ನಲ್ಲಿ ಪ್ರಕಟವಾದ ಸುದ್ದಿ ಪ್ರಕಾರ, ದೇಶದ ಅಧ್ಯಕ್ಷರು ಐದು ಜನ ಕಾರ್ಯದರ್ಶಿ ಸಿಬ್ಬಂದಿಯನ್ನು ಹೊಂದಿದ್ದಾರೆ. ಇದಲ್ಲದೆ, ರಾಷ್ಟ್ರಪತಿ ಭವನದ ಮೇಲ್ವಿಚಾರಣೆಯಲ್ಲಿ 200 ಜನರು ತಮ್ಮ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಾರೆ. ಭಾರತದ ರಾಷ್ಟ್ರಪತಿಗಳು ಮತ್ತು ಅವರ ಧರ್ಮಪತ್ನಿ ಪ್ರಪಂಚದ ಯಾವುದೇ ಭಾಗಕ್ಕೆ ಉಚಿತವಾಗಿ ಪ್ರಯಾಣಿಸಬಹುದು. ರಾಷ್ಟ್ರಪತಿಗಳು, ಅವರ ಸಿಬ್ಬಂದಿ ಮತ್ತು ಅತಿಥಿಗಳ ಸ್ವಾಗತಕ್ಕಾಗಿ ಭಾರತ ಸರ್ಕಾರವು ಪ್ರತಿ ವರ್ಷ ಸುಮಾರು 2.25 ಕೋಟಿ ರೂ. ಮೀಸಲಿರಿಸುತ್ತದೆ. ಅಧ್ಯಕ್ಷರು ತಿಂಗಳಿಗೆ ಸುಮಾರು ಐದು ಲಕ್ಷ ರೂಪಾಯಿ ಸಂಬಳ ಪಡೆಯುತ್ತಾರೆ. ಗೌರವಾನ್ವಿತ ರಾಷ್ಟ್ರಪತಿಗಳು ಇನ್ನೂ ಅನೇಕ ಸೌಲಭ್ಯಗಳನ್ನು ಪಡೆಯುತ್ತಾರೆ. ಅದರಲ್ಲಿ ಅವರು ಜೀವನಕ್ಕಾಗಿ ಉಚಿತ ವೈದ್ಯಕೀಯ ಸೌಲಭ್ಯ, ಮನೆ ಮತ್ತು ಚಿಕಿತ್ಸಾ ಸೌಲಭ್ಯಗಳನ್ನು ಪಡೆಯುತ್ತಾರೆ.

ಇದನ್ನೂ ಓದಿ: Petrol-Diesel Price: ಮತ್ತಷ್ಟು ಅಗ್ಗವಾಗಲಿದೆ ಪೆಟ್ರೋಲ್-ಡೀಸೆಲ್! ಇಂದಿನ ಅಪ್‌ಡೇಟ್ ತಿಳಿಯಿರಿ

ಭಾರತದ ರಾಷ್ಟ್ರಪತಿಗಳು ಬ್ಲ್ಯಾಕ್‌ ಮರ್ಸಿಡಿಸ್ ಬೆಂಜ್ S600 (W221) ಪುಲ್‌ಮನ್ ಗಾರ್ಡ್‌ನಲ್ಲಿ ಪ್ರಯಾಣ ಮಾಡುತ್ತಾರೆ. ಇದಲ್ಲದೆ, ಅವರು ಅಧಿಕೃತ ಪ್ರವಾಸಗಳಿಗಾಗಿ ಸುದೀರ್ಘ ಶಸ್ತ್ರಸಜ್ಜಿತ ಲಿಮೋಸಿನ್ ಅನ್ನು ಸಹ ತೆಗೆದುಕೊಂಡು ಹೋಗುತ್ತಾರೆ. ಜೊತೆಗೆ ಹಾಲಿಡೇ ರಿಟ್ರೀಟ್‌ಗಳು ಸಹ ಇವೆ. ಅದರಲ್ಲಿ ಒಂದು ಹೈದರಾಬಾದಿನ ರಾಷ್ಟ್ರಪತಿ ನಿಲಯಂ ಮತ್ತು ಇನ್ನೊಂದು ಶಿಮ್ಲಾದಲ್ಲಿರುವ ರಿಟ್ರೀಟ್ ಕಟ್ಟಡ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News