ತಿರುವನಂತಪುರಂ : 33 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ತಮ್ಮ ಕೆಲಸವನ್ನು ತೊರೆದು ಶ್ರೀನಗರದಿಂದ ತಿರುವನಂತಪುರದಿಂದ 6,000 ಕಿ.ಮೀ.ವರೆಗೆ ರಕ್ತದಾನದ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸಲು ಬರಿಗಾಲಿನಲ್ಲಿ ಪ್ರಯಾಣಿಸಿದ್ದಾರೆ.
ಸಿಂಪಲ್ ಬ್ಲಡ್ ಸಂಸ್ಥಾಪಕರಾಗಿರುವ ಕಿರಣ್ ವರ್ಮಾ ಶ್ರೀನಗರದಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿ ಉದಯಪುರ, ವಡೋದರಾ, ಚೆನ್ನೈ ಮತ್ತು ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಪ್ರಪಂಚದ ಮೊದಲ ವರ್ಚುವಲ್ ರಕ್ತದಾನದ ವೇದಿಕೆಯು ಮೂಲಕ ರಕ್ತದಾನದ ಅರಿವನ್ನು ಮೂಡಿಸುತ್ತಿದ್ದಾರೆ. ತಮ್ಮ ತಾಯಿಯನ್ನು ಕ್ಯಾನ್ಸರ್ ನಿಂದ ಕಳೆದುಕೊಂಡ ನಂತರ ಅವರು ಈ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ. 2020 ರ ವೇಳೆಗೆ, ರಕ್ತದಾನದಿಂದ ಕನಿಷ್ಟ ಒಂದು ಮಿಲಿಯನ್ ಜೀವಗಳನ್ನು ರಕ್ತದಾನದ ಮೂಲಕ ಉಳಿಸುವುದು ಅವರ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ತಮ್ಮ ಪ್ರಯಾಣದ ಕುರಿತಾಗಿ ಮಾತನಾಡಿದ ಕಿರಣ್ ವರ್ಮಾ ಅವರು" ಜನವರಿ 26, 2018 ರಂದು ಲಾಲ್ ಚೌಕ್ ನ ಶ್ರೀನಗರದಿಂದ ನನ್ನ ಪ್ರಾರಂಭಿಸಿ, ಎರಡು ತಿಂಗಳುಗಳಲ್ಲಿ ತಿರುವನಂತಪುರಂವರೆಗೆ 6500 ಕಿ.ಮೀ ಹೆಚ್ಚು ಪ್ರಯಾಣಿಸಿದ್ದೇನೆ ನಾನು ದೇಶಾದ್ಯಂತ 600,000 ಕ್ಕಿಂತಲೂ ಹೆಚ್ಚು ಜನರನ್ನು ಭೇಟಿ ಮಾಡಿದ್ದೇನೆ. ಕಾಲೇಜುಗಳು, ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳ ಜೊತೆ ನನ್ನ ಉದ್ದೇಶವನ್ನು ಹಂಚಿಕೊಂಡಿದ್ದೇನೆ. ಇದಲ್ಲದೆ ಮಾಲ್ ಗಳು ,ರೆಸ್ಟೋರೆಂಟ್, ರೈಲ್ವೇ ನಿಲ್ದಾಣಗಳು, ಬಸ್ ಸ್ಟ್ಯಾಂಡ್ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿಯೂ ಸಹಿತ ರಕ್ತದಾನ ಪ್ರಾಮುಖ್ಯತೆ ಕುರಿತಾಗಿ ಮಾತನಾಡಿದ್ದೇನೆ ಎಂದು ತಿಳಿಸಿದರು.
ರಕ್ತದಾನದ ಮಹತ್ವದ ಬಗ್ಗೆ ಪ್ರಸ್ತಾಪಿಸುತ್ತಾ "ರಕ್ತದಾನದ ಕೊರತೆಯಿಂದಾಗಿ ಪ್ರತಿದಿನವೂ 12,000 ಕ್ಕಿಂತಲೂ ಹೆಚ್ಚಿನ ಜನರು ಸತ್ತಿದ್ದಾರೆ. ಆದ್ದರಿಂದ ನಮ್ಮ ಜೀವಿತಾವಧಿಯಲ್ಲಿ ಕನಿಷ್ಠ 1 ಕಿಲೋಮೀಟರ್ ನಲ್ಲಿ 10 ಜನರನ್ನು ರಕ್ತದಾನ ದಾನ ಮಾಡಲು ಪ್ರತಿಜ್ಞೆ ಮಾಡುವಂತೆ ಪ್ರೋತ್ಸಾಹಿಸುವುದು" ಎಂದು ಅವರು ತಿಳಿಸಿದ್ದಾರೆ.