Viral News: ಪ್ರೀತಿಯ ಶ್ವಾನಕ್ಕಾಗಿ ಇಡೀ ವಿಮಾನದ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಬುಕ್..!

ಮೆಲ್ಟೆಸಾ ಹೆಸರಿನ ಶ್ವಾನದ ಕಥೆ ಕೇಳಿದ್ರೆ ನೀವು ಸ್ಟನ್ ಆಗೋದು ಗ್ಯಾರಂಟಿ, ಈ ಶ್ವಾನವು ಬ್ಯುಸಿನೆಸ್ ಕ್ಲಾಸ್ ಟಿಕೆಟ್​ನಲ್ಲಿ ವಿಮಾನಯಾನ ಮಾಡಿದೆ.   

Written by - Puttaraj K Alur | Last Updated : Sep 20, 2021, 06:53 PM IST
  • ಬ್ಯುಸಿನೆಸ್ ಕ್ಲಾಸ್ ಟಿಕೆಟ್ ನಲ್ಲಿ ಮುಂಬೈನಿಂದ ಚೆನ್ನೈಗೆ ಶ್ವಾನದ ಐಷಾರಾಮಿ ವಿಮಾನ ಯಾನ
  • ಶ್ವಾನದ ವಿಮಾನಯಾನಕ್ಕಾಗಿ ಇಡೀ ಏರ್ ಇಂಡಿಯಾ ವಿಮಾನದ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಬುಕ್ ಮಾಡಿದ ಒಡತಿ.
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ ವಿಮಾನಯಾನ ಮಾಡಿದ ಶ್ವಾನದ ಫೋಟೋಗಳು
Viral News: ಪ್ರೀತಿಯ ಶ್ವಾನಕ್ಕಾಗಿ ಇಡೀ ವಿಮಾನದ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಬುಕ್..! title=
ಐಷಾರಾಮಿ ವಿಮಾನಯಾನ ಮಾಡಿದ ಶ್ವಾನ (Photo Courtesy:@India.com)

ಮುಂಬೈ: ಸಾಮಾಜಿಕ ಜಾಲತಾಣ(Social Media)ದಲ್ಲಿ ವೈರಲ್ ಆಗುತ್ತಿರುವ ಸುದ್ದಿಯೊಂದು ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಈ ಸುದ್ದಿ ಕೇಳಿದವರೆಲ್ಲಾ ಹೀಗೂ ಉಂಟೆ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಗಿದೆ. ಪ್ರೀತಿಯ ಶ್ವಾನ(Dog)ವೊಂದರ ಪ್ರಯಾಣಕ್ಕೆ ಇಡೀ ವಿಮಾನವನ್ನೇ ಮಹಿಳೆಯೊಬ್ಬರು ಬುಕ್ ಮಾಡಿದ ಘಟನೆ ನಡೆದಿದೆ.

ಹೌದು, ಅಚ್ಚರಿಯಾದರೂ ಇದು ನಿಜವಾಗಿಯೂ ನಡೆದಿರುವ ಘಟನೆ. ಮೆಲ್ಟೆಸಾ ಹೆಸರಿನ ಶ್ವಾನದ ಕಥೆ ಕೇಳಿದ್ರೆ ನೀವು ಸ್ಟನ್ ಆಗೋದು ಗ್ಯಾರಂಟಿ. ಬ್ಯುಸಿನೆಸ್ ಕ್ಲಾಸ್(Business Class) ಟಿಕೆಟ್​ನಲ್ಲಿ ಈ ಶ್ವಾನವು ಯಶಸ್ವಿಯಾಗಿ ವಿಮಾನಯಾನ ಮಾಡಿದೆ. ಮಹಿಳೆಯೊಬ್ಬರು ತಮ್ಮ ಪ್ರೀತಿಯ ಶ್ವಾನದ ಐಷಾರಾಮಿ ಪ್ರಯಾಣಕ್ಕೆ ಏರ್ ಇಂಡಿಯಾ(Air India) ವಿಮಾನದ ಸಂಪೂರ್ಣ ಬ್ಯುಸಿನೆಸ್ ಕ್ಲಾಸ್ ಕ್ಯಾಬಿನ್ ಅನ್ನೇ ಬುಕ್ ಮಾಡಿದ್ದಾರೆ. ಈ ಶ್ವಾನವು ಬುಧವಾರ ಬೆಳಗ್ಗೆ ಏರ್ ಇಂಡಿಯಾ ವಿಮಾನ AI-671 ಹತ್ತಿ ಸುಖಕರ ಪ್ರಯಾಣ ಮಾಡಿದೆ.  

ಇದನ್ನೂ ಓದಿ: ನವೆಂಬರ್ 4 ರವರೆಗೆ ಡೆಬಿಟ್ ಕಾರ್ಡ್ ವಹಿವಾಟಿನ ಮೇಲೆ ಪಡೆಯಿರಿ 10,000 ರೂ. ವರೆಗೆ ಕ್ಯಾಶ್‌ಬ್ಯಾಕ್

ಮುಂಬೈನಿಂದ ಚೆನ್ನೈಗೆ 2 ಗಂಟೆಗಳ ಅವಧಿಯ ವಿಮಾನಕ್ಕಾಗಿ ಶ್ವಾನ(Dog)ದ ಒಡತಿ 2.5 ಲಕ್ಷ ರೂ.ಗೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ. ಏರ್ ಇಂಡಿಯಾ ಮುಂಬೈ-ಚೆನ್ನೈ ವಿಮಾನದಲ್ಲಿ ಪ್ರತಿ ಬ್ಯುಸಿನೆಸ್ ಕ್ಲಾಸ್ ಸೀಟಿನ ದರವು ಸುಮಾರು 20,000 ರೂ. ಇದೆ.

‘ಏರ್ ಇಂಡಿಯಾ A320 ವಿಮಾನದಲ್ಲಿ ಜೆ-ಕ್ಲಾಸ್ ಕ್ಯಾಬಿನ್(Business Cabin) 12 ಆಸನಗಳನ್ನು ಹೊಂದಿದ್ದು, ಇದರಲ್ಲಿ ಕುಳಿತುಕೊಂಡು ಮುದ್ದಾದ ಶ್ವಾನದ ಮರಿ ಐಷಾರಾಮಿ ವಿಮಾನ ಯಾನ ಮಾಡಿದೆ. ಈ ಮೊದಲು ಕೂಡ ಶ್ವಾನಗಳು ಏರ್ ಇಂಡಿಯಾ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸಿದ್ದವು. ಆದಾಗ್ಯೂ ಸಾಕುಪ್ರಾಣಿಗಳಿಗಾಗಿ ಇಡೀ ಬಿಸಿನೆಸ್ ಕ್ಯಾಬಿನ್ ಅನ್ನು ಬುಕ್ ಮಾಡಿರುವುದು ಬಹುಶಃ ಇದೇ ಮೊದಲು ಅಂತಾ ತಿಳಿದುಬಂದಿದೆ.

ಇದನ್ನೂ ಓದಿ: ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ವೈರಸ್-ಮುಕ್ತವಾಗಿಸಲು ಬಳಸಿ ಗೂಗಲ್‌ನ ಈ ಫೀಚರ್

ಪ್ರಯಾಣಿಕರ ಕ್ಯಾಬಿನ್‌ನಲ್ಲಿ ದೇಶೀಯ ಸಾಕುಪ್ರಾಣಿಗಳಿಗೆ ಪ್ರಯಾಣ ಮಾಡಲು ಅನುಮತಿ ನೀಡುವ ಏಕೈಕ ಭಾರತೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ(Air India) ಆಗಿದೆ. ವಿಮಾನದಲ್ಲಿ ಗರಿಷ್ಠ 2 ಸಾಕುಪ್ರಾಣಿಗಳ ಪ್ರಯಾಣಕ್ಕೆ ಅನುಮತಿಸಲಾಗುತ್ತದೆ. ಮುಂಗಡವನ್ನು ಬುಕ್ ಮಾಡಿದ ವರ್ಗದ ಕೊನೆಯ ಸಾಲಿನಲ್ಲಿ ಪ್ರಾಣಿಗಳನ್ನು ಕೂರಿಸಲಾಗುತ್ತದೆ.

 ಕಳೆದ ವರ್ಷದ ಜೂನ್ ಮತ್ತು ಸೆಪ್ಟೆಂಬರ್ ನಡುವೆ ಏರ್ ಇಂಡಿಯಾ ತನ್ನ ದೇಶೀಯ ವಿಮಾನಗಳಲ್ಲಿಸುಮಾರು 2,000 ಸಾಕುಪ್ರಾಣಿಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ರವಾನಿಸಿದೆ. ಸದ್ಯ ಮೆಲ್ಟೆಸಾ ಶ್ವಾನ ವಿಮಾನಯಾನ ಮಾಡಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟಿಜನ್ ಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News