Video: ನಮ್ಮ ಪ್ರಧಾನಿಯನ್ನು ನಿಂದಿಸಬೇಡಿ- ಪಾಕ್ ಬೆಂಬಲಿಗರಲ್ಲಿ ಶಾಜಿಯಾ ಇಲ್ಮಿ ಮನವಿ

ದಕ್ಷಿಣ ಕೊರಿಯಾದಲ್ಲಿ ಮೋದಿ ವಿರೋಧಿ ಮತ್ತು ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದ  ಪಾಕಿಸ್ತಾನ ಬೆಂಬಲಿಗರಿಗೆ ತಡೆಯೋಡ್ಡಿ ಬಿಜೆಪಿ ನಾಯಕಿ ಶಾಜಿಯಾ ಇಲ್ಮಿ, ಪ್ರಧಾನಿ ಮೋದಿ ಹಾಗೂ ಭಾರತದ ವಿರುದ್ಧ ಘೋಷಣೆ ಕೂಗಬೇಡಿ ಎಂದು ಮನವಿ ಮಾಡಿಕೊಂಡ ವೀಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

Last Updated : Aug 18, 2019, 12:52 PM IST
Video: ನಮ್ಮ ಪ್ರಧಾನಿಯನ್ನು ನಿಂದಿಸಬೇಡಿ- ಪಾಕ್ ಬೆಂಬಲಿಗರಲ್ಲಿ ಶಾಜಿಯಾ ಇಲ್ಮಿ ಮನವಿ  title=
video grab(ANI)

ನವದೆಹಲಿ: ದಕ್ಷಿಣ ಕೊರಿಯಾದಲ್ಲಿ ಮೋದಿ ವಿರೋಧಿ ಮತ್ತು ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದ  ಪಾಕಿಸ್ತಾನ ಬೆಂಬಲಿಗರಿಗೆ ತಡೆಯೋಡ್ಡಿ ಬಿಜೆಪಿ ನಾಯಕಿ ಶಾಜಿಯಾ ಇಲ್ಮಿ, ಪ್ರಧಾನಿ ಮೋದಿ ಹಾಗೂ ಭಾರತದ ವಿರುದ್ಧ ಘೋಷಣೆ ಕೂಗಬೇಡಿ ಎಂದು ಮನವಿ ಮಾಡಿಕೊಂಡ ವೀಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಇದಾದ ನಂತರ ಎಎನ್ಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿರುವ ಶಾಜಿಯಾ ಇಲ್ಮಿ "ನಾನು ಮತ್ತು ಇನ್ನಿಬ್ಬರು ಗ್ಲೋಬಲ್ ಸಿಟಿಜನ್ ಫೋರಂನ ನಿಯೋಗವಾಗಿ ಯುನೈಟೆಡ್ ಪೀಸ್ ಫೆಡರೇಶನ್ ಸಮ್ಮೇಳನಕ್ಕಾಗಿ ಸಿಯೋಲ್‌ನಲ್ಲಿದ್ದೆವು. ಸಮ್ಮೇಳನದ ನಂತರ ನಾವು ನಮ್ಮ ರಾಯಭಾರಿಯನ್ನು ಭೇಟಿಯಾಗಲು ಭಾರತೀಯ ರಾಯಭಾರ ಕಚೇರಿಗೆ ಹೋದೆವು. ನಾವು ಹೋಟೆಲ್‌ಗೆ ಹಿಂದಿರುಗುವಾಗ, ಅಶಿಸ್ತಿನ ಜನಸಮೂಹವು ಪಾಕಿಸ್ತಾನದ ಧ್ವಜಗಳೊಂದಿಗೆ ಭಾರತ ಮತ್ತು ನಮ್ಮ ಪ್ರಧಾನ ಮಂತ್ರಿಗೆ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ಮಾಡುತ್ತಿರುವುದನ್ನು ನಾವು ನೋಡಿದ್ದೇವೆ. ಅವರು ಮೋದಿ ಟೆರರಿಸ್ಟ್, ಭಾರತ ಟೆರರಿಸ್ಟ್ ಎಂದು ಹೇಳುತ್ತಲೇ ಇದ್ದರು. ಬಹಳಷ್ಟು ಜನರು ಅವರನ್ನು ನೋಡುತ್ತಿದ್ದರು. ಆಗ ನಮ್ಮ ದೇಶವನ್ನು ಅಥವಾ ನಮ್ಮ ಪ್ರಧಾನಿಯನ್ನು ನಿಂದಿಸಬೇಡಿ ಎಂದು ಹೇಳುವುದು ನಮ್ಮ ಕರ್ತವ್ಯ ಎಂದು ನಾವು ಭಾವಿಸಿದೆವು. 370 ನೇ ವಿಧಿಯನ್ನು ರದ್ದುಪಡಿಸುವಲ್ಲಿ ನಿಮಗೆ ಸಮಸ್ಯೆ ಇದೆ, ಇದು ಸಂಪೂರ್ಣವಾಗಿ ಆಂತರಿಕ ವಿಷಯವಾಗಿದೆ, ಮತ್ತು ನಿಮ್ಮೆಲ್ಲರಿಗೂ ಯಾವುದೇ ಸಂಬಂಧವಿಲ್ಲ" ಎಂದು ಅವರು ಹೇಳಿದರು. ಪ್ರತಿಭಟನೆಯು ಅತಿಯಾದಾಗ ದಕ್ಷಿಣ ಕೊರಿಯಾದ ಅಧಿಕಾರಿಗಳು ಬಂದು ನಮ್ಮನ್ನು ಕರೆದೊಯ್ದರು ಎಂದು ಶಾಜಿಯಾ ಇಲ್ಮಿ ಹೇಳಿದ್ದಾರೆ.

ಎಎನ್‌ಐ ಪೋಸ್ಟ್ ಮಾಡಿರುವ ವೀಡಿಯೊವೊಂದರಲ್ಲಿ ಪಾಕಿಸ್ತಾನ ಧ್ವಜಗಳನ್ನು ಹಿಡಿದಿರುವ ಜನರ ಗುಂಪು ಭಾರತ ವಿರೋಧಿ ಮತ್ತು ಮೋದಿ ವಿರೋಧಿ ಘೋಷಣೆಗಳನ್ನು ಕೂಗುತ್ತಿದೆ. 3 ನಿಮಿಷ 25 ಸೆಕೆಂಡುಗಳ ವೀಡಿಯೊದಲ್ಲಿ ಶಾಜಿಯಾ ಇಲ್ಮಿ ಅವರೊಂದಿಗೆ ಟ್ಯಾಕ್ಸಿಯಿಂದ ಕೆಳಗಿಳಿದು ಗುಂಪಿನ ಕಡೆಗೆ ಹೋಗುತ್ತಿದ್ದಾರೆ, ಅವರ ಸದಸ್ಯರು "ಹಕ್ ಹೈ ಹುಮಾರಾ ಆಜಾದಿ" (ಸ್ವಾತಂತ್ರ್ಯ ನಮ್ಮ ಹಕ್ಕು) ಮತ್ತು "ಹಮ್ ಲೆ ಕೆ ರೆಹೆಂಗೆ ಅಜಾದಿ' ಎಂಬ ಘೋಷಣೆಗಳನ್ನು ಕೂಗುತ್ತಲೇ ಇದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಜಿಯಾ ಇಲ್ಮಿ ಪ್ರಧಾನಿ ಮತ್ತು ಭಾರತದ ವಿರುದ್ಧ ಘೋಷಣೆ ಕೂಗಬೇಡಿ ಎಂದು ವಿನಂತಿಸಿಕೊಂಡು ನಂತರ ಭಾರತ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ. 

Trending News