Indian Driving Licence: ಈ 15 ದೇಶಗಳಲ್ಲಿ ಚಿಂತೆ ಬಿಟ್ಟು ವಾಹನ ಓಡಿಸಿ, ಆದ್ರೆ Indian DL ನಿಮ್ಹತ್ರ ಇರಲಿ

Indian Driving Licence: ಶಾಂದಾರ್ ಹೊಳಪುಳ್ಳ ರಸ್ತೆಗಳ ಮೇಲೆ ಲಾಂಗ್ ಡ್ರೈವ್ (Long Drive In Foreign) ಗೆ ಹೋಗುವ ಅನುಭವ ತುಂಬಾ ಥ್ರಿಲ್ ನೀಡುತ್ತದೆ. ಆದರೆ, ವಿದೇಶಗಳಲ್ಲಿರುವ ರಸ್ತೆಗಳ ಮೇಲೆ ಈ ಅನುಭವ ನಿಮಗಾದರೆ ಅದು ಮತ್ತಷ್ಟು ಖುಷಿ ನೀಡುತ್ತದೆ. 

Written by - Nitin Tabib | Last Updated : Mar 3, 2021, 04:13 PM IST
  • ಪ್ರಸ್ತುತ ನಮ್ಮ ದೇಶದಲ್ಲಿಯೂ ಕೂಡ ರಸ್ತೆ ಮೂಲಭೂತ ಸೌಕರ್ಯಗಳು ಅಭಿವೃದ್ಧಿಗೊಳ್ಳುತ್ತಿದೆ.
  • ಆದರೆ ವಿದೇಶಗಳಲ್ಲಿ ವಾಹನ ಚಲಾಯಿಸುವ ಥ್ರಿಲ್ ಬೇರೆಯೇ ಆಗಿದೆ.
  • ಯಾವ ದೇಶಗಳಲ್ಲಿ ಭಾರತೀಯ ಲೈಸನ್ಸ್ ಮೇಲೆ ವಾಹನ ಚಲಾಯಿಸಬಹುದು?
Indian Driving Licence: ಈ 15 ದೇಶಗಳಲ್ಲಿ ಚಿಂತೆ ಬಿಟ್ಟು ವಾಹನ ಓಡಿಸಿ, ಆದ್ರೆ Indian DL ನಿಮ್ಹತ್ರ ಇರಲಿ title=
Indian Driving Licence (File Photo)

Indian Driving Licence: ಶಾಂದಾರ್ ಹೊಳಪುಳ್ಳ ರಸ್ತೆಗಳ ಮೇಲೆ ಲಾಂಗ್ ಡ್ರೈವ್ (Long Drive In Foreign) ಗೆ ಹೋಗುವ ಅನುಭವ ತುಂಬಾ ಥ್ರಿಲ್ ನೀಡುತ್ತದೆ. ಆದರೆ, ವಿದೇಶಗಳಲ್ಲಿರುವ ರಸ್ತೆಗಳ ಮೇಲೆ ಈ ಅನುಭವ ನಿಮಗಾದರೆ ಅದು ಮತ್ತಷ್ಟು ಖುಷಿ ನೀಡುತ್ತದೆ. ಪ್ರಸ್ತುತ ನಮ್ಮ ದೇಶದಲ್ಲಿಯೂ ಕೂಡ ಮೂಲಭೂತ ಸೌಕರ್ಯಗಳು ಹಾಗೂ ರಸ್ತೆ ಸೌಲಭ್ಯಗಳು ವೇಗವಾಗಿ ಬದಲಾಗುತ್ತಿವೆ. ಆದರೆ, ವಿದೇಶಗಳಲ್ಲಿ ವಾಹನ ಚಲಾಯಿಸುವ ಮಜಾ ಬೇರೆಯೇ ಆಗಿರುತ್ತದೆ.

ಅದೇನೇ ಇರಲಿ ಯಾವುದೇ ಒಂದು ದೇಶದಲ್ಲಿ ವಾಹನ ಚಲಾಯಿಸಲು ಪ್ರಾಥಮಿಕ ಅವಶ್ಯಕತೆ ಎಂದರೆ ಅದು ಡ್ರೈವಿಂಗ್ ಲೈಸನ್ಸ್ (DL). ಆದರೆ, ಭಾರತೀಯ ಡ್ರೈವಿಂಗ್ ಲೈಸನ್ಸ್ ಬಳಸಿ ವಿಶ್ವದ ಕೆಲ ಅದ್ಭುತ ದೇಶಗಳಲ್ಲಿಯೂ ಕೂಡ ಡ್ರೈವಿಂಗ್ ಮಾಡಬಹುದು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಇಲ್ಲಿ ನಾವು ಅಂತಹ 21 ದೇಶಗಳ ಕುರಿತು ಮಾಹಿತಿ ನೀಡುತ್ತಿದ್ದು, ಅವುಗಳ ಕಾನೂನು ಭಾರತೀಯ ಡ್ರೈವಿಂಗ್ ಲೈಸನ್ಸ್ (Indian Driving Licence) ಮೇಲೆ ತಮ್ಮ ದೇಶದಲ್ಲಿ ವಾಹನ ಚಲಾಯಿಸಲು ಅನುಮತಿ ನೀಡುತ್ತವೆ. ಹಾಗಾದರೆ ಬನ್ನಿ ಯಾವ ಯಾವ ದೇಶಗಳಲ್ಲಿ ನೀವು ಭಾರತೀಯ ಡ್ರೈವಿಂಗ್ ಲೈಸನ್ಸ್ ಬಳಸಿ ವಾಹನ ಚಲಾಯಿಸಬಹುದು (Foreign Countries That Allow Indian DL) ಎಂಬುದನ್ನು ತಿಳಿದುಕೊಳ್ಳೋಣ.

ಇದನ್ನೂ ಓದಿ- ದೊಡ್ಡ ಬದಲಾವಣೆಯತ್ತ Transport Ministry, ಈ ಕೆಲಸ ಮಾಡಿದರಷ್ಟೇ ವಾಹನ ಚಲಾಯಿಸಲು ಸಾಧ್ಯ

1. ಆಸ್ಟ್ರೇಲಿಯಾ 
ದಕ್ಷಿಣ ಗೋಳಾರ್ಧದ ಮಹಾದ್ವೀಪದ ಅಡಿಯಲ್ಲಿ ಬರುವ ಈ ದೇಶದಲ್ಲಿ, ನೀವು ಭಾರತೀಯ ಚಾಲನಾ ಪರವಾನಗಿಯೊಂದಿಗೆ ವಾಹನವನ್ನು ಓಡಿಸಬಹುದು. ಆದರೆ ಇದಕ್ಕಾಗಿ  ನಿಮ್ಮ ಚಾಲನಾ  (Driving Licence) ಪರವಾನಗಿ ಇಂಗ್ಲಿಷ್ ಭಾಷೆಯಲ್ಲಿರಬೇಕು ಮತ್ತು ಆಸ್ಟ್ರೇಲಿಯಾದಲ್ಲಿ ಮೂರು ತಿಂಗಳು ವಾಹನ ಚಲಾಯಿಸಲು ನಿಮಗೆ ಕೆಲವು ವಿಶೇಷ ನಿಯಮಗಳಿವೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಇಲ್ಲಿ ನೀವು ಭಾರತೀಯ ರಸ್ತೆಗಳಂತೆ  ರಸ್ತೆಯ ಎಡಭಾಗದಲ್ಲಿ ವಾಹನ ಓಡಿಸಬಹುದು.

2. ಜರ್ಮನಿ 
ವಾಹನಗಳ ದೇಶ ಎಂದು ಕರೆಯಲ್ಪಡುವ ಜರ್ಮನಿಯ ಬೀದಿಗಳಲ್ಲಿ ಕಾರನ್ನು ಓಡಿಸುವುದು ನಿಮ್ಮ ಜೀವನದ ಅತ್ಯುತ್ತಮ ಅನುಭವಗಳಲ್ಲಿ ಒಂದಾಗಿರಲಿದೆ. ಇಲ್ಲಿ ನೀವು ಭಾರತೀಯ ಚಾಲನಾ ಪರವಾನಗಿಯಲ್ಲಿ ಒಟ್ಟು 6 ತಿಂಗಳು ಚಾಲನೆ ಮಾಡಬಹುದು. ಆದರೆ ನಿಮ್ಮ ಚಾಲನಾ ಪರವಾನಗಿ ಯಾವುದೇ ಪ್ರಾದೇಶಿಕ ಭಾಷೆಯಲ್ಲಿರಬಾರದು ಮತ್ತು ಅದು ಇಂಗ್ಲಿಷ್‌ನಲ್ಲಿರಬೇಕು ಎಂಬುದನ್ನು ನೆನಪಿನಲ್ಲಿಡಿ. ಐಷಾರಾಮಿ ಕಾರು ಬ್ರಾಂಡ್  ವಿಭಾಗದಲ್ಲಿ ಜರ್ಮನಿ ಪ್ರಾಬಲ್ಯ ಹೊಂದಿದೆ. ಮರ್ಸಿಡಿಸ್ ಬೆಂಜ್, ಆಡಿ ಮತ್ತು ಬಿಎಂಡಬ್ಲ್ಯು ಗಳಂತಹ ವಾಹನಗಳಿಗೆ ತವರಾಗಿರುವ ಈ ದೇಶ ಅತ್ಯುತ್ತಮ ಚಾಲನಾ ಶೈಲಿಗೆ ಹೆಸರುವಾಸಿಯಾಗಿದೆ.

3. ನ್ಯೂಜಿಲ್ಯಾಂಡ್
ಕ್ರಿಕೆಟ್ ಆಟದಲ್ಲಿ ನೀವು ಕೀವಿಗಳ ಜೊತೆಗಿನ ಮುಖಾಮುಖಿಯನ್ನು ಹಲವು ಬಾರಿ ನೋಡಿರಬಹುದು, ಆದರೆ ಅವರ ನೆಲದಲ್ಲಿ ವಾಹನವನ್ನು ನೀವು ಓಡಿಸಿದರೆ ಆ ಅನುಭವ ಅವಿಸ್ಮರಣೀಯ. ನೈಋತ್ಯ ಪೆಸಿಫಿಕ್ ಮಹಾಸಾಗರದ ಎರಡು ದೊಡ್ಡ ದ್ವೀಪಗಳು ಮತ್ತು ಇತರ ಅನೇಕ ಸಣ್ಣ ದ್ವೀಪಗಳಿಂದ ಕೂಡಿದ ಈ ದೇಶ ನಿಮಗೆ ಭಾರತೀಯ ಚಾಲನಾ ಪರವಾನಗಿಯಲ್ಲಿ ಒಟ್ಟು ಒಂದು ವರ್ಷ ವಾಹನ ಓಡಿಸಲು ನಿಮಗೆ ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ-ಡಿಎಲ್, ಆರ್.ಸಿ ಮತ್ತಿತರ ವಾಹನಗಳಿಗೆ ಸಂಬಂಧಿಸಿದ ದಾಖಲೆಗಳ ಸಿಂಧುತ್ವ ಅವಧಿ ವಿಸ್ತರಣೆ

4. ಯುನೈಟೆಡ್ ಕಿಂಗ್ಡಮ್
ಈ ದೇಶವನ್ನು ಯುಕೆ, ಬ್ರಿಟಾನಿಯಾ ಅಥವಾ ಯುಕೆ ಎಂದೂ ಕರೆಯುತ್ತಾರೆ. ಈ ದೇಶದಲ್ಲಿ ನೀವು ಭಾರತೀಯ ಡ್ರೈವಿಂಗ್ ಲೈಸನ್ಸ್ ಮೂಲಕ ಒಟ್ಟು 1 ವರ್ಷ ವಾಹನ ಚಾಲನೆ ಮಾಡಬಹುದು. ನೀವು ಭಾರತೀಯ ಚಾಲನಾ ಪರವಾನಗಿಯೊಂದಿಗೆ ಸ್ಕಾಟ್ಲೆಂಡ್, ಇಂಗ್ಲೆಂಡ್ ಮತ್ತು ವೇಲ್ಸ್ ರಸ್ತೆಗಳಲ್ಲಿ ಓಡಿಸಬಹುದು. ಎಡಗೈ ಚಾಲನೆಯ ಅಭ್ಯಾಸವೂ ಇಲ್ಲಿದೆ. ರೋಲ್ಸ್ ರಾಯ್ಸ್, ಆಯ್ಸ್ಟನ್ ಮಾರ್ಟಿನ್ ಮತ್ತು ಲ್ಯಾಂಡ್ ರೋವರ್ ಇತ್ಯಾದಿಗಳು ಬ್ರಿಟಿಷ್ ವಾಹನ ತಯಾರಕ ಕಂಪನಿಗಳಾಗಿವೆ.

5. ಸ್ವಿಟ್ಜರ್ಲ್ಯಾಂಡ್
ವಿಶ್ವದ ಸ್ವರ್ಗ ಎಂದು ಕರೆಯಲ್ಪಡುವ ಈ ದೇಶದಲ್ಲಿ ವಾಹನ ಚಾಲನೆ ಮಾಡಲು ಯಾರು ತಾನೇ ಇಷ್ಟಪಡುವುದಿಲ್ಲ. ಮಧ್ಯ ಯುರೋಪಿನಲ್ಲಿ ಈ ದೇಶದ ಸುಮಾರು 60% ಭೂಮಿ ಆಲ್ಪ್ಸ್ ಪರ್ವತ ಶ್ರೇಣಿಗಳಿಂದ ಆವೃತ್ತವಾಗಿದೆ. ಇಲ್ಲಿನ ನಿಯಮಗಳ ಪ್ರಕಾರ, ನೀವು ಭಾರತೀಯ ಚಾಲನಾ ಪರವಾನಗಿಯಲ್ಲಿ ದೇಶದ ಭಾಗದಲ್ಲಿ 1 ವರ್ಷದವರೆಗೆ ವಾಹನ ಚಲಾಯಿಸಬಹುದು. ನಿಮ್ಮ ಡಿಎಲ್ ಆಧರಿಸಿ ನೀವು ಇಲ್ಲಿ ವಾಹನವನ್ನು ಬಾಡಿಗೆಗೆ ಪಡೆಯಬಹುದು, ಆದರೆ ನಿಮ್ಮ ಪರವಾನಗಿ ಇಂಗ್ಲಿಷ್ ಭಾಷೆಯಲ್ಲಿರಬೇಕು.

6. .ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ
ವಿಶ್ವದ ಅತ್ಯಂತ ಶಕ್ತಿಶಾಲಿ ದೇಶ ಎಂದೇ ಖ್ಯಾತ ಯುನೈಟೆಡ್ ಸ್ಟೇಟ್ಸ್‌ನಲ್ಲಿ, ವಾಹನ ಚಾಲನೆಯ ಅನುಭವ ವಿಭಿನ್ನವಾಗಿದೆ. ರಸ್ತೆ ಪರಿಶೋಧನೆಗೆ ಇದು ಅತ್ಯಂತ ಸೂಕ್ತವಾದ ದೇಶ. ಇಲ್ಲಿನ ಕಾನೂನಿನ ಪ್ರಕಾರ, ನೀವು ಭಾರತೀಯ ಚಾಲನಾ ಪರವಾನಗಿಯಲ್ಲಿ 1 ವರ್ಷದವರೆಗೆ ವಾಹನ ಚಲಾಯಿಸಬಹುದು. ಆದರೆ ಇಲ್ಲಿಯೂ ಸಹ, ನಿಮ್ಮ ಪರವಾನಗಿ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಇರಬೇಕು ಎಂಬ ಷರತ್ತು ಇದೆ.  ಭಾರತೀಯ ಮಾರುಕಟ್ಟೆಯಲ್ಲಿ ಛಾಪು ಮೂಡಿಸಿರುವ ಜೀಪ್, ಫೋರ್ಡ್ ಮತ್ತು ಶೆವ್ರೋಲೆ ಇತ್ಯಾದಿಗಳು ಅಮೆರಿಕಾದ ಕಂಪನಿಗಳಾಗಿವೆ ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-ವಿದೇಶದಲ್ಲಿರುವ ಭಾರತೀಯರಿಗೆ ದೊಡ್ಡ ಪರಿಹಾರ, ಎಲ್ಲೇ ಇದ್ದರೂ ಡ್ರೈವಿಂಗ್ ಲೈಸನ್ಸ್ ನವೀಕರಿಸಲು ಸಾಧ್ಯ

7.ದಕ್ಷಿಣ ಆಫ್ರಿಕಾ
ಆಫ್ರಿಕಾ ಖಂಡದ ದಕ್ಷಿಣ ತುದಿಯಲ್ಲಿರುವ ಈ ದೇಶವು ನೈಸರ್ಗಿಕ ಸೌಂದರ್ಯ ಮತ್ತು ವಿಸ್ತಾರಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ನೀವು ಭಾರತೀಯ ಚಾಲನಾ ಪರವಾನಗಿಯೊಂದಿಗೆ ಸುಲಭವಾಗಿ ವಾಹನ  ಓಡಿಸಬಹುದು. ಆದರೆ ಇಂಗ್ಲಿಷ್ ಭಾಷೆಯಲ್ಲಿ ನಿಮ್ಮ ಪರವಾನಗಿಯ ಜೊತೆಗೆ, ಅದರಲ್ಲಿ ನಿಮ್ಮ ಫೋಟೋ ಮತ್ತು ಸಹಿಯೂ ಇರಬೇಕು.

8. ಫ್ರಾನ್ಸ್ 
ನೀವು ಅನೇಕ ಬಾರಿ ಫ್ರೆಂಚ್ ಎಂಜಿನ್ ಗಳ ಅನುಭವ ಪಡೆದಿರಬಹುದು. ಆದರೆ ಭಾರತೀಯ ಚಾಲನಾ ಪರವಾನಗಿಯೊಂದಿಗೆ ಫ್ರಾನ್ಸ್ ರಸ್ತೆಗಳಲ್ಲಿ ಎಂದಾದರೂ ವಾಹನ ಓಡಿಸಿದ್ದೀರಾ? ಹೌದು, ಈ ದೇಶವು ತನ್ನ ಪ್ರವಾಸಿಗರಿಗೆ ತಮ್ಮ ಸ್ಥಳೀಯ ಚಾಲನಾ ಪರವಾನಗಿಯಲ್ಲಿ 1 ವರ್ಷದವರೆಗೆ ವಾಹನ ಚಲಾಯಿಸಲು ಅನುವು ಮಾಡಿಕೊಡುತ್ತದೆ. ಆದರೆ ಇದರೊಂದಿಗೆ ಒಂದು ಷರತ್ತು ಎಂದರೆ ಪರವಾನಗಿಯನ್ನು ಫ್ರೆಂಚ್ ಭಾಷೆಗೆ ಅನುವಾದಿಸಬೇಕು. ಪ್ರಸ್ತುತ, ರೆನಾಲ್ಟ್ ಮತ್ತು ಪಿಯಾಜಿಯೋ ಇತ್ಯಾದಿಗಳು ಭಾರತದಲ್ಲಿ ಓಡಾಡುವ ಫ್ರಾನ್ಸ್‌ನ ಪ್ರಮುಖ ವಾಹನಗಳಾಗಿವೆ.

9.ಕೆನೆಡಾ
ಉತ್ತರ ಅಮೆರಿಕದಲ್ಲಿರುವ  ಈ ದೇಶದಲ್ಲಿ ಒಟ್ಟು 10 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ.  99.8 ಲಕ್ಷ ಚದರ ಕಿಲೋಮೀಟರ್ ವಿಸ್ತೀರ್ಣದಲ್ಲಿ ಹರಡಿರುವ ಈ ದೇಶದ ವಿಶಾಲ ರಸ್ತೆಗಳಲ್ಲಿ ವಾಹನ ಚಲಾಯಿಸುವ ಮೋಜು ದ್ವಿಗುಣವಾಗಿರುತ್ತದೆ. ಇಲ್ಲಿ ನೀವು ನಿಮ್ಮ ಚಾಲನಾ ಪರವಾನಗಿಯೊಂದಿಗೆ ಸಹ ಚಾಲನೆ ಮಾಡಬಹುದು, ಆದರೆ ಇಲ್ಲಿ ನೀವು ರಸ್ತೆಯ ಬಲಬದಿಯಲ್ಲಿ ವಾಹನ ಚಾಲನೆ ಮಾಡಬೇಕು.

ಇದನ್ನೂ ಓದಿ-ಇನ್ಮುಂದೆ DL-RCಗಾಗಿ RTO ಕಚೇರಿಯ ಚಕ್ಕರ್ ಹೊಡೆಯಬೇಕಾಗಿಲ್ಲ... ಕಾರಣ ಇಲ್ಲಿದೆ

10. ಸಿಂಗಾಪುರ್ 
ವಿಶ್ವದ ಪ್ರಮುಖ ಬಂದರುಗಳು ಮತ್ತು ವ್ಯಾಪಾರ ಕೇಂದ್ರಗಳನ್ನು ಹೊಂದಿರುವ ಈ ದೇಶವು ದಕ್ಷಿಣ ಏಷ್ಯಾದ ಮಲೇಷ್ಯಾ ಮತ್ತು ಇಂಡೋನೇಷ್ಯಾ ನಡುವೆ ಇದೆ. ಇಲ್ಲಿನ ಸರ್ಕಾರವು ವಿದೇಶಿ ಅತಿಥಿಗಳಿಗೆ ತಮ್ಮ ಅಂತರರಾಷ್ಟ್ರೀಯ ಚಾಲನಾ ಪರವಾನಗಿಯಲ್ಲಿ 1 ವರ್ಷದವರೆಗೆ ವಾಹನ ಚಲಾಯಿಸಲು ಅವಕಾಶ ನೀಡುತ್ತದೆ. ಈ ದೇಶವು ಪ್ರಪಂಚದಾದ್ಯಂತದ ಪ್ರವಾಸಿಗರಲ್ಲಿ ಬಹಳ ಪ್ರಸಿದ್ಧ ಪಡೆದಿದೆ. ಇದಲ್ಲದೆ ನೀವು ಹಾಂಗ್ ಕಾಂಗ್ ಮತ್ತು ಮಲೇಷ್ಯಾಗಳಲ್ಲಿಯೂ ಕೂಡ ವಾಹನ ಓಡಿಸಬಹುದು.

11. ಭೂತಾನ್ 
ನೆರೆ ರಾಷ್ಟ್ರ ಭೂತಾನ್‌ನಲ್ಲಿಯೂ ಕೂಡ ನೀವು ವಾಹನ ಚಾಲನೆಯ ಮೋಜು ಆನಂದಿಸಬಹುದು. ಹಿಮಾಲಯನ್ ಬೆಟ್ಟಗಳಿಂದ ಸುತ್ತುವರೆದಿರುವ ದಕ್ಷಿಣ ಏಷ್ಯಾದ ಈ ಸಣ್ಣ ದೇಶವು ಸಾಕಷ್ಟು ನೈಸರ್ಗಿಕ ಸೌಂದರ್ಯವನ್ನು ಹೊಂದಿದೆ. ಇಲ್ಲಿ ನೀವು ದ್ವಿಚಕ್ರ ಮತ್ತು ನಾಲ್ಕು ಚಕ್ರಗಳೆರಡನ್ನೂ ಓಡಿಸಬಹುದು.

12. ಫಿನ್ಲ್ಯಾಂಡ್ 
ಉತ್ತರ ಯುರೋಪಿನಲ್ಲಿರುವ ಈ ದೇಶ ವಿಶ್ವದ ಅತ್ಯಂತ ಖುಷಿಯಾಗಿರುವ ದೇಶವೆಂದು ಪರಿಗಣಿಸಲಾಗುತ್ತದೆ. ಇಲ್ಲಿನ ನಿಯಮಗಳ ಪ್ರಕಾರ, ನೀವು ಭಾರತೀಯ ಚಾಲನಾ ಪರವಾನಗಿಯೊಂದಿಗೆ ಸಂಪೂರ್ಣ 1 ವರ್ಷ ವಾಹನ ಚಾಲನೆಯನ್ನು ಆನಂದಿಸಬಹುದು. ಆದರೆ ಇದಕ್ಕಾಗಿ ನೀವು ನಿಮ್ಮೊಂದಿಗೆ ಆರೋಗ್ಯ ವಿಮೆ ಹೊಂದಿರುವುದು ಕಡ್ಡಾಯ. ಈ ನಿಯಮವು ಭಾರತದಲ್ಲಿಯೂ ಕೂಡ ಅನ್ವಯವಾದರೆ ರಸ್ತೆ ಅಪಘಾತಗಳಲ್ಲಿನ  ಸಾವಿನ ಸಂಖ್ಯೆಯನ್ನು ನಾವು ನಿಯಂತ್ರಿಸಬಹುದು.

ಇದನ್ನೂ ಓದಿ-ವಾಹನ ಸವಾರರಿಗೆ ಗುಡ್ ನ್ಯೂಸ್: DL, RC ಇಲ್ಲವೆಂದು ಟ್ರಾಫಿಕ್ ಪೊಲೀಸರು ಚಲನ್ ನೀಡುವಂತಿಲ್ಲ!

13. ಮಾರಿಷಸ್
ಆಫ್ರಿಕಾದ ಖಂಡದ ಆಗ್ನೇಯ ದಿಕ್ಕಿನಲ್ಲಿರುವ ಈ ದೇಶ ವಾಹನ ಚಾಲನೆಯ ವಿಷಯದಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಹೊಂದಿದೆ. ಅದರಲ್ಲೂ  ವಿಶೇಷವಾಗಿ ವಿದೇಶಿಯರಿಗೆ. ಇಲ್ಲಿರುವ ನಿಯಮಗಳ ಪ್ರಕಾರ, ನೀವು ಭಾರತೀಯ ಚಾಲನಾ ಪರವಾನಗಿಯಲ್ಲಿ 1 ದಿನ ಮಾತ್ರ ಓಡಿಸಬಹುದು. ಮಾರಿಷಸ್ ಸಂಪೂರ್ಣವಾಗಿ ನೈಸರ್ಗಿಕ ಸೌಂದರ್ಯದಿಂದ ತುಂಬಿದೆ, ಇಲ್ಲಿ ಆಶ್ಚರ್ಯದ ಸಂಗತಿ ಎಂದರೆ ಇಲ್ಲಿನ ಜನಸಂಖ್ಯೆಯ ಸುಮಾರು ಶೇ.51ರಷ್ಟು ಜನ ಹಿಂದೂಗಳು.

14. ಇಟಲಿ
ಚಾಲನೆ ಮತ್ತು ಕಾರುಗಳ ವಿಷಯಕ್ಕೆ ಬಂದಾಗ, ಇಟಲಿಯ ಹೆಸರು ಉಲ್ಲೇಖವಾಗದಿರಲು ಸಾಧ್ಯವೇ ಇಲ್ಲ. ಈ ದೇಶದಲ್ಲಿ ನೀವು ಭಾರತೀಯ ಚಾಲನಾ ಪರವಾನಗಿಯೊಂದಿಗೆ ವಾಹನ ಚಾಲನೆ ಮಾಡಬಹುದು, ಈ ದೇಶ ಜಗತ್ತಿಗೆ ಒಂದಕ್ಕಿಂತ ಒಂದು ಉತ್ತಮ ಸ್ಪೋರ್ಟ್ಸ್ ಕಾರ್ ಗಳನ್ನೂ ನೀಡಿದೆ, ಆದರೆ ಇದರ ಏಕೈಕ ಷರತ್ತು ನಿಮ್ಮ ಪರವಾನಗಿ ಅಂತರರಾಷ್ಟ್ರೀಯ ಚಾಲನಾ ಪರವಾನಗಿಯೊಂದಿಗೆ ಇರಬೇಕು. ಫೆರಾರಿ, ಲಂಬೋರ್ಘಿನಿ ಮತ್ತು ಫಿಯೆಟ್‌ನಂತಹ ಕಂಪನಿಗಳು ಇಟಲಿ ಕಾರು ಉತ್ಪಾದಕ ಕಂಪನಿಗಳಾಗಿವೆ ಎಂದರೆ ನಿಮಗೂ ಆಶ್ಚರ್ಯವಾಗಬಹುದು.

15. ನಾರ್ವೆ
ಸೂರ್ಯೋದಯದ ನಾಡು ಎಂದೇ ಖ್ಯಾತ ಯುರೋಪಿಯನ್ ಖಂಡದ ಈ ದೇಶ ವಿಶ್ವದ ಅತ್ಯಂತ ಅದ್ಭುತ ಸೌಂದರ್ಯ ತಾಣಗಳಲ್ಲಿ ಒಂದು. ಈ ದೇಶದಲ್ಲಿ ನೀವು ಭಾರತೀಯ ಚಾಲನಾ ಪರವಾನಗಿಯೊಂದಿಗೆ ಒಟ್ಟು 3 ತಿಂಗಳು ಚಾಲನೆಯನ್ನು ಆನಂದಿಸಬಹುದು. ಈ ದೇಶವು ವಿಶೇಷ ಮಧ್ಯರಾತ್ರಿಯ ಸೂರ್ಯೋದಯಕ್ಕೆ ಹೆಸರುವಾಸಿಯಾಗಿದೆ, ಅಲ್ಲಿ ಸೂರ್ಯನು ರಾತ್ರಿಯಲ್ಲಿ ಇದ್ದಕ್ಕಿದ್ದಂತೆ ಹೊರಬರುತ್ತಾನೆ. ಉತ್ತರ ನಾರ್ವೆಯಲ್ಲಿ, ಬೇಸಿಗೆಯಲ್ಲಿ ಮಧ್ಯರಾತ್ರಿಯ ವೇಳೆ ಸೂರ್ಯೋದಯ ತೀರಾ ಸಾಮಾನ್ಯವಾಗಿದೆ.

ಇದನ್ನೂ ಓದಿ- ಆನ್ಲೈನ್'ನಲ್ಲಿ ಡ್ರೈವಿಂಗ್ ಲೈಸೆನ್ಸ್-Aadhaar ಲಿಂಕ್ ಮಾಡಲು ಹೀಗೆ ಮಾಡಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News