ಡ್ರಗ್ಸ್ ಪ್ರಕರಣ: 4ನೇ ಬಾರಿಗೆ ಮುಂಬೈಗೆ ಬರುವ ಪ್ಲಾನ್ ಬದಲಾಯಿಸಿದ ದೀಪಿಕಾ ಪಡುಕೋಣೆ, ಇದು ಕಾರಣ

ಮೂಲಗಳ ಪ್ರಕಾರ ದೀಪಿಕಾ ಈಗ ರಾತ್ರಿ 8 ಗಂಟೆಗೆ ವಿಶೇಷ ಚಾರ್ಟರ್ಡ್ ವಿಮಾನದಿಂದ ಮುಂಬೈಗೆ ತೆರಳಲಿದ್ದಾರೆ. ನಿರಂತರವಾಗಿ ಬದಲಾಗುತ್ತಿರುವ ಈ ಯೋಜನೆಯ ಹಿಂದಿನ ಕಾರಣಗಳು ತಿಳಿದುಬಂದಿಲ್ಲ, ಆದರೆ ಮಾಧ್ಯಮಗಳನ್ನು ತಪ್ಪಿಸಲು ದೀಪಿಕಾ ತನ್ನ ಯೋಜನೆಯಲ್ಲಿ ಬದಲಾವಣೆಗಳನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ.

Updated: Sep 24, 2020 , 06:25 PM IST
ಡ್ರಗ್ಸ್ ಪ್ರಕರಣ: 4ನೇ ಬಾರಿಗೆ ಮುಂಬೈಗೆ ಬರುವ ಪ್ಲಾನ್ ಬದಲಾಯಿಸಿದ ದೀಪಿಕಾ ಪಡುಕೋಣೆ, ಇದು ಕಾರಣ
File Image

ನವದೆಹಲಿ: ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ  ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಅವರಿಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಸಮನ್ಸ್ ಜಾರಿಗೊಳಿಸಿದೆ. ಅವರನ್ನು ಎನ್‌ಸಿಬಿ ಶುಕ್ರವಾರ ವಿಚಾರಣೆಗೆ ಕರೆದಿದೆ. ದೀಪಿಕಾ ಪ್ರಸ್ತುತ ಗೋವಾದಲ್ಲಿದ್ದು, ಅವರು ಇಂದು ಮುಂಬೈ ತಲುಪಲಿದ್ದಾರೆ. ಆದಾಗ್ಯೂ ಮುಂಬೈ ತಲುಪುವ ಯೋಜನೆಯಲ್ಲಿ ಅವರು ನಿರಂತರವಾಗಿ ಬದಲಾವಣೆಗಳನ್ನು ಮಾಡುತ್ತಿದ್ದಾರೆ. ಇದೀಗ ದೀಪಿಕಾ ಪಡುಕೋಣೆ ಚಾರ್ಟರ್ಡ್ ವಿಮಾನದಲ್ಲಿ ಮುಂಬೈ ತಲುಪಲಿದ್ದಾಳೆ ಎಂಬ ಸುದ್ದಿ ಬಂದಿದ್ದು, ಅವರು ಹೋಟೆಲ್‌ನಿಂದ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಆದರೆ ದೀಪಿಕಾ ಪಡುಕೋಣೆ ಮತ್ತೆ ತಮ್ಮ ಯೋಜನೆಯನ್ನು ಬದಲಾಯಿಸಿಕೊಂಡಿದ್ದಾರೆ ಎಂಬ ಮಾಹಿತಿ ಈಗ ಲಭ್ಯವಾಗಿದೆ.

ಮೂಲಗಳ ಪ್ರಕಾರ, ದೀಪಿಕಾ ಮತ್ತೆ ಹೋಟೆಲ್ ತಲುಪಿದ್ದಾರೆ. ಈಗ ರಾತ್ರಿ 8 ಗಂಟೆಗೆ ಅವರು ವಿಶೇಷ ಚಾರ್ಟರ್ಡ್ ವಿಮಾನದಿಂದ ಮುಂಬೈಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ. ನಿರಂತರವಾಗಿ ಬದಲಾಗುತ್ತಿರುವ ಈ ಯೋಜನೆಯ ಹಿಂದಿನ ಕಾರಣಗಳು ತಿಳಿದುಬಂದಿಲ್ಲ, ಆದರೆ ಮಾಧ್ಯಮಗಳನ್ನು ತಪ್ಪಿಸಲು ದೀಪಿಕಾ ತನ್ನ ಯೋಜನೆಯಲ್ಲಿ ಬದಲಾವಣೆಗಳನ್ನು ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ದೀಪಿಕಾ ಪಡುಕೋಣೆ ಅವರು ಗೋವಾದ ಹೋಟೆಲ್‌ನಿಂದ 12 ಗಂಟೆಗೆ ಮೊದಲು ಹೊರಟರು. ಅದರ ನಂತರ ಒಂದೂವರೆ ಗಂಟೆಗಳ ಸಮಯವನ್ನು ನಿಗದಿಪಡಿಸಲಾಯಿತು, ನಂತರ ದೀಪಿಕಾ ಗೋವಾ ವಿಮಾನ ನಿಲ್ದಾಣವನ್ನು ಅರ್ಧ ಘಂಟೆಗೆ ತಲುಪಿದ ಸುದ್ದಿ ಲಭ್ಯವಾಗಿತ್ತು. ಆದರೆ ವಿಮಾನ ನಿಲ್ದಾಣಕ್ಕೆ ಹೋಗುವ ಬದಲು ದೀಪಿಕಾ ಹೆದ್ದಾರಿ ಮಾರ್ಗವನ್ನು ತೆಗೆದುಕೊಂಡರು. ಇದೀಗ ಇಂದು ರಾತ್ರಿ 8 ಗಂಟೆಗೆ ಅವರು ಚಾರ್ಟರ್ಡ್ ವಿಮಾನದಲ್ಲಿ ಮುಂಬೈಗೆ ತೆರಳಲಿದ್ದಾರೆ ಎಂಬ ಮಾಹಿತಿ ಬರುತ್ತಿದೆ.

ಈ ಜನರು ದೀಪಿಕಾ ಅವರೊಂದಿಗೆ ಮುಂಬೈ ತಲುಪಲಿದ್ದಾರೆ :
ಆರ್ಬಿಟ್ ಏವಿಯೇಷನ್‌ನ ಚಾರ್ಟರ್ಡ್ ವಿಮಾನವು ಬೆಂಗಳೂರಿನಿಂದ ರಾತ್ರಿ 7.30 ಕ್ಕೆ ಗೋವಾದ ದಬೋಲಿಮ್ ವಿಮಾನ ನಿಲ್ದಾಣವನ್ನು ತಲುಪಲಿದೆ ಎಂದು ಮೂಲಗಳು ತಿಳಿಸಿವೆ. ರಾತ್ರಿ 8 ಗಂಟೆಯೊಳಗೆ ವಿಮಾನ ಮುಂಬೈಗೆ ತೆರಳಲಿದೆ. ಈ ವಿಮಾನದಿಂದ ದೀಪಿಕಾ, ರಣವೀರ್ ಸಿಂಗ್ (Ranveer Singh) ಸೇರಿದಂತೆ ಒಟ್ಟು 6 ಪ್ರಯಾಣಿಕರು ಮುಂಬೈಗೆ ಬರಲಿದ್ದಾರೆಎಂದು ತಿಳಿದುಬಂದಿದೆ.

'ನಶಾ ಲೋಕ'ದಲ್ಲಿರುವ ತಾರೆಯರೆಷ್ಟು? ಪ್ರಕಾಶ್ ಮುಂದೆ ಮಸುಕಾದ ದೀಪಿಕಾ!

ಕಾನೂನು ತಂಡದಿಂದ ಅಭಿಪ್ರಾಯ ಪಡೆದಿರುವ ದೀಪಿಕಾ :
ದೀಪಿಕಾ ತಮ್ಮ ಮುಂಬರುವ ಚಿತ್ರದ ಚಿತ್ರೀಕರಣಕ್ಕಾಗಿ ಗೋವಾದಲ್ಲಿದ್ದಾರೆ. ಸಿದ್ಧಾಂತ್ ಚತುರ್ವೇದಿ ಮತ್ತು ಅನನ್ಯಾ ಪಾಂಡೆ ಕೂಡ ಗೋವಾದಲ್ಲಿ ಇದ್ದಾರೆ. ಗುರುವಾರ ದೀಪಿಕಾ ರೆಸಾರ್ಟ್‌ನಲ್ಲಿ ತಮ್ಮ ಕಾನೂನು ತಂಡದ ಜನರೊಂದಿಗೆ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಾಟ್ಸಾಪ್ ಚಾಟ್ ಮೂಲಕ ಸಿಕ್ಕಿಬಿದ್ದ ದೀಪಿಕಾ:
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ತನಿಖೆಯು ನಟಿ ಮತ್ತು ಅವರ ಟ್ಯಾಲೆಂಟ್ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ನಡುವಿನ 2017ರ ವಾಟ್ಸಾಪ್ ಚಾಟ್ ಪ್ರಕರಣವೊಂದನ್ನು ಬಹಿರಂಗಪಡಿಸಿದೆ, ಇದರಲ್ಲಿ ಇಬ್ಬರೂ ನಿಷೇಧಿತ ವಸ್ತುಗಳ ಬಗ್ಗೆ ಚರ್ಚಿಸುತ್ತಿದ್ದಾರೆ.

ಎನ್‌ಬಿಸಿಯ ವಿಚಾರಣೆಗೆ ಹಾಜರಾಗದ Deepika Padukone ಮ್ಯಾನೇಜರ್ ಕರಿಷ್ಮಾ ಪ್ರಕಾಶ್

ಶುಕ್ರವಾರ ಎನ್‌ಸಿಬಿ ಮುಂದೆ ಹಾಜರಾಗಲಿದ್ದಾರೆ ದೀಪಿಕಾ :
ಮುಂಬೈನಲ್ಲಿ ಎನ್‌ಸಿಬಿ ಅಧಿಕಾರಿಗಳ ಮುಂದೆ ಹಾಜರಾಗಲು ದೀಪಿಕಾ ಪಡುಕೋಣೆ ಅವರನ್ನು ಕರೆಸಲಾಗಿದೆ. ಅದೇ ಸಮಯದಲ್ಲಿ ನಟಿ ಸಾರಾ ಅಲಿ ಖಾನ್ ಅವರಿಗೂ ಕೂಡ ಎನ್‌ಸಿಬಿ ಸಮನ್ಸ್ ಜಾರಿಮಾಡಿದೆ.  ಆಕೆ ಕೂಡ ಗೋವಾದಲ್ಲಿ ರಜಾದಿನಗಳಲ್ಲಿ ಇದ್ದು ಗುರುವಾರ ಮುಂಬೈಗೆ ತೆರಳಿದ್ದರು. ಸಾರಾ ಮತ್ತು ಶ್ರದ್ಧಾ ಕಪೂರ್ ಶನಿವಾರ ಎನ್‌ಸಿಬಿ ಕಚೇರಿಯಲ್ಲಿ ಹಾಜರಾಗಲಿದ್ದಾರೆ. ಈ ಎಲ್ಲ ವಿಚಾರಣೆಗಳು ಜೂನ್ 14 ರಂದು ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರ ಸಾವಿನ ಪ್ರಕರಣದಲ್ಲಿ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿವೆ, ಇದರಲ್ಲಿ ಡ್ರಗ್ ಆಂಗಲ್ ಕೂಡ ಸೇರಿಸಲಾಗಿದೆ.