Cyclone Tauktae: 'ತೌಕ್ತೆ' ಚಂಡಮಾರುತ ಹಿನ್ನಲೆ ಮುಂಬಯಿಯಲ್ಲಿ ಇಂದೂ ಸ್ಥಗಿತಗೊಂಡ ವ್ಯಾಕ್ಸಿನೇಷನ್

Cyclone Tauktae: ಇತ್ತೀಚಿನ ಹವಾಮಾನ ಮುನ್ಸೂಚನೆ (ಐಎಂಡಿ ಮುನ್ಸೂಚನೆ) ಪ್ರಕಾರ, ಚಂಡಮಾರುತ ಸೋಮವಾರ ಮಧ್ಯಾಹ್ನ ಗುಜರಾತ್ ತೀರಕ್ಕೆ ಅಪ್ಪಳಿಸಬಹುದು. ಆ ಸಮಯದಲ್ಲಿ, ಚಂಡಮಾರುತದ ವೇಗ ಗಂಟೆಗೆ 180 ಕಿ.ಮೀ. ಇರಲಿದೆ ಎಂದು ತಿಳಿದುಬಂದಿದೆ.

Written by - Yashaswini V | Last Updated : May 17, 2021, 10:55 AM IST
  • ಮುಂಬೈನಲ್ಲಿ ಒಟ್ಟು 260 ವ್ಯಾಕ್ಸಿನೇಷನ್ ಕೇಂದ್ರಗಳಿವೆ
  • ಮುಂಬಯಿಯಲ್ಲಿ ವ್ಯಾಕ್ಸಿನೇಷನ್ ನಿಲ್ಲಿಸಿ ಇಂದಿಗೆ ಮೂರು ದಿನವಾಗಿದೆ
  • ಶುಕ್ರವಾರ ಮೇ 15 ಮತ್ತು 16 ಕ್ಕೆ ಮುಂಬೈನಲ್ಲಿ ವ್ಯಾಕ್ಸಿನೇಷನ್ ಅಭಿಯಾನ ಸ್ಥಗಿತಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದ ಬಿಎಂಸಿ
Cyclone Tauktae: 'ತೌಕ್ತೆ' ಚಂಡಮಾರುತ ಹಿನ್ನಲೆ ಮುಂಬಯಿಯಲ್ಲಿ ಇಂದೂ ಸ್ಥಗಿತಗೊಂಡ ವ್ಯಾಕ್ಸಿನೇಷನ್ title=
Cyclone Tauktae (Image courtesy: ANI)

ಮುಂಬೈ: ಮಹಾರಾಷ್ಟ್ರ ರಾಜಧಾನಿ ಮುಂಬಯಿಯಲ್ಲಿ ತೌಕ್ತೆ ಚಂಡಮಾರುತದ ಎಚ್ಚರಿಕೆಯಿಂದಾಗಿ, ಜನರಿಗೆ ಇಂದಿಗೂ ಕರೋನಾ ಲಸಿಕೆ (Corona Vaccine) ನೀಡಲಾಗುವುದಿಲ್ಲ. ಕಳೆದ ಎರಡು ದಿನಗಳಿಂದ ಬಲವಾದ ಗಾಳಿಯಿಂದ ಇಲ್ಲಿ ಮಳೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಶುಕ್ರವಾರ, ಬೃಹನ್ಮುಂಬೈ ಮಹಾನಗರ ಪಾಲಿಕೆಯ ಅಧಿಕಾರಿಗಳು ಕೋವಿಡ್ -19 ಲಸಿಕೆ ಅಭಿಯಾನವನ್ನು ಮುಂದೂಡಲು ನಿರ್ಧರಿಸಿದರು.  ಮುಂಬಯಿಯಲ್ಲಿ ವ್ಯಾಕ್ಸಿನೇಷನ್ ನಿಲ್ಲಿಸಿ ಇಂದಿಗೆ ಮೂರು ದಿನವಾಗಿದೆ. ನಾಳೆಯಿಂದ ಲಸಿಕೆ ಲಭ್ಯವಾಗುವ ಸಾಧ್ಯತೆ ಇದೇ ಎಂದು ನಿರೀಕ್ಷಿಸಲಾಗಿದೆ.

ಮೇ 15 ಮತ್ತು 16 ಕ್ಕೆ ಮುಂಬೈನಲ್ಲಿ ವ್ಯಾಕ್ಸಿನೇಷನ್ ಅಭಿಯಾನ ಸ್ಥಗಿತಗೊಳ್ಳಲಿದೆ:
ಪ್ರಸ್ತುತ ವಾತಾವರಣದ ಹಿನ್ನಲೆಯಲ್ಲಿ ಮೇ 15 ಮತ್ತು 16 ಕ್ಕೆ ಮುಂಬೈನಲ್ಲಿ ವ್ಯಾಕ್ಸಿನೇಷನ್ ಅಭಿಯಾನವನ್ನು ಮುಂದೂಡಲಾಗುವುದು ಎಂದು ಬೃಹನ್ಮುಂಬೈ ಮಹಾನಗರ ಪಾಲಿಕೆ ಶುಕ್ರವಾರ ಟ್ವೀಟ್ ಮಾಡಿತ್ತು. ಆದರೆ ಚಂಡಮಾರುತದ ಬೆದರಿಕೆಯಿಂದಾಗಿ ಸೋಮವಾರ ಕೂಡ ವ್ಯಾಕ್ಸಿನೇಷನ್ ಅಭಿಯಾನವನ್ನು ನಿಲ್ಲಿಸಲಾಗಿದೆ. ಮುಂಬೈನಲ್ಲಿ ಒಟ್ಟು 260 ವ್ಯಾಕ್ಸಿನೇಷನ್ ಕೇಂದ್ರಗಳಿವೆ. 'ತೌಕ್ತೆ' ಚಂಡಮಾರುತದ (Cyclone Tauktae) ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ಅಭಿಯಾನವನ್ನು ನಿಲ್ಲಿಸಲು ನಿರ್ಧರಿಸಲಾಗಿದೆ ಎಂದು ಮುಂಬೈನ ಹೆಚ್ಚುವರಿ ಮಹಾನಗರ ಪಾಲಿಕೆ ಆಯುಕ್ತ ಸುರೇಶ್ ಕಾಕಾನಿ ಹೇಳಿದ್ದಾರೆ.

ಇದನ್ನೂ ಓದಿ - ತೌಕ್ತೆ ಚಂಡಮಾರುತ ನಿಭಾಯಿಸಲು ಕೇಂದ್ರದಿಂದ 100 NDRF ತಂಡಗಳ ನಿಯೋಜನೆ!

580 ರೋಗಿಗಳನ್ನು ಶಿಫ್ಟ್ ಮಾಡಲಾಗಿದೆ:
ಚಂಡಮಾರುತಕ್ಕೆ ಸಂಬಂಧಿಸಿದಂತೆ ಭಾರತದ ಹವಾಮಾನ ಇಲಾಖೆಯ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು 580 ರೋಗಿಗಳನ್ನು ಕೋವಿಡ್ -19 ಆರೈಕೆ ಕೇಂದ್ರಗಳಿಂದ (Covid Care Center) ಸ್ಥಳಾಂತರಿಸಲಾಗಿದೆ. ನಗರ ನಿಗಮ ಕೋವಿಡ್ ಆರೈಕೆ ಕೇಂದ್ರಗಳಿಂದ 580 ರೋಗಿಗಳನ್ನು - ಬಿಕೆಸಿಯಿಂದ 243, ದಹಿಸಾರ್‌ನಿಂದ 183 ಮತ್ತು ಮುಲುಂಡ್‌ನಿಂದ 154 ರೋಗಿಗಳನ್ನು ರಾಜ್ಯ ಸರ್ಕಾರ ನಡೆಸುತ್ತಿರುವ ಆಸ್ಪತ್ರೆಗಳಿಗೆ ಮತ್ತು ಮುಂಬೈನ ನಗರ ನಿಗಮದ ವತಿಯಿಂದ ನಿರ್ಮಿಸಿರುವ ಆಸ್ಪತ್ರೆಗಳಿಗೆ ಶನಿವಾರ ರಾತ್ರಿ ಸ್ಥಳಾಂತರಿಸಿದೆ ಎಂದು ಬಿಎಂಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಈ ಸಂದರ್ಭದಲ್ಲಿ ಕೊರೊನಾ ರೋಗಿಗಳಿಗೆ ಹಾಸಿಗೆಗಳು ಮತ್ತು ಆಮ್ಲಜನಕದ ಸಲಕರಣೆಗಳ ಲಭ್ಯತೆಯ ಬಗ್ಗೆ ಕೊನೆಯ ನಿಮಿಷದ ಗೊಂದಲ ಉಂಟಾಗಬಾರದು ಎಂದು ಬಿಎಂಸಿ ಶುಕ್ರವಾರ ನಗರದ ಆಸ್ಪತ್ರೆಗಳನ್ನು ಎಚ್ಚರಿಸಿದೆ.

ಇದನ್ನೂ ಓದಿ - Tauktae Cyclone : ತೌಕ್ತೆ ಚಂಡಮಾರುತಕ್ಕೆ ತತ್ತರಿಸಿದ ರಾಜ್ಯ ಕರಾವಳಿ ಪ್ರದೇಶ..!

ಮಳೆ ಮತ್ತು ಬಿರುಗಾಳಿ:
ಪುಣೆಯ ಐಎಮ್‌ಡಿಯ ಪರಿಸರ ಸಂಶೋಧನೆ ಮತ್ತು ಸೇವೆಗಳ ವಿಭಾಗದ ಹಿರಿಯ ಅಧಿಕಾರಿ ಕೆ.ಎಸ್.ಹೊಸಾಲಿಲ್ಲರ್ ಅವರು, 'ಇತ್ತೀಚಿನ ಹವಾಮಾನ ಮುನ್ಸೂಚನೆಯ ಪ್ರಕಾರ, ಸೋಮವಾರ ಮಧ್ಯಾಹ್ನದ ಹೊತ್ತಿಗೆ ಚಂಡಮಾರುತವು ಗುಜರಾತ್ ಅನ್ನು ಅಪ್ಪಳಿಸಬಹುದು. ಚಂಡಮಾರುತದ ಹಿನ್ನಲೆಯಲ್ಲಿ ಉತ್ತರ ಕೊಂಕಣ, ಮುಂಬೈ, ಥಾಣೆ, ರಾಯಗಡ ಮತ್ತು ಪಾಲ್ಘರ್‌ನ ಭಾಗಗಳಲ್ಲಿ ಭಾರಿ ಮಳೆಯಾಗಬಹುದು ಎಂದು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News