ತೌಕ್ತೆ ಚಂಡಮಾರುತ ನಿಭಾಯಿಸಲು ಕೇಂದ್ರದಿಂದ 100 NDRF ತಂಡಗಳ ನಿಯೋಜನೆ!

ಹವಾಮಾನ ಇಲಾಖೆಯು ನೀಡಿರುವ ಹೊಸ ವರದಿಯ ಆಧಾರದಲ್ಲಿ ತಂಡಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ

Last Updated : May 15, 2021, 05:32 PM IST
  • ತೌಕ್ತೆ ಚಂಡಮಾರುತದ ಸಂದರ್ಭ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ನಿಯೋಜನೆ
  • ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (NDRF) 53 ರಿಂದ 100ಕ್ಕೆ ಹೆಚ್ಚಿಸಿದೆ
  • ಹವಾಮಾನ ಇಲಾಖೆಯು ನೀಡಿರುವ ಹೊಸ ವರದಿಯ ಆಧಾರದಲ್ಲಿ ತಂಡಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ
ತೌಕ್ತೆ ಚಂಡಮಾರುತ ನಿಭಾಯಿಸಲು ಕೇಂದ್ರದಿಂದ 100 NDRF ತಂಡಗಳ ನಿಯೋಜನೆ! title=

ನವದೆಹಲಿ : ತೌಕ್ತೆ ಚಂಡಮಾರುತದ ಸಂದರ್ಭ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿರುವ ತಂಡಗಳ ಸಂಖ್ಯೆಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (NDRF) 53 ರಿಂದ 100ಕ್ಕೆ ಹೆಚ್ಚಿಸಿದೆ.

ಕರ್ನಾಟಕ(Karnataka), ಕೇರಳ, ತಮಿಳುನಾಡು, ಗುಜರಾತ್, ಗೋವಾ ಮತ್ತು ಮಹಾರಾಷ್ಟ್ರಗಳ ಕರಾವಳಿ ಪ್ರದೇಶಗಳಲ್ಲಿ ತಂಡಗಳ ನಿಯೋಜನೆ ಮಾಡಲಾಗಿದೆ ಎಂದು ವಿಪತ್ತು ನಿರ್ವಹಣಾ ದಳದ ಪ್ರಧಾನ ನಿರ್ದೇಶಕ ಎಸ್. ಎನ್. ಪ್ರಧಾನ್ ತಿಳಿಸಿದ್ದಾರೆ.

ಇದನ್ನೂ ಓದಿ : West Bengal Lockdown : 15 ದಿನ ಸಂಪೂರ್ಣ 'ಲಾಕ್​ಡೌನ್ ಘೋಷಿಸಿದ'​ ಪಶ್ಚಿಮ ಬಂಗಾಳ ಸರ್ಕಾರ!

53 ತಂಡ(NDRF Team)ಗಳನ್ನು ನಿಯೋಜನೆ ಮಾಡಿರುವುದಾಗಿ ಈ ಹಿಂದೆ ಅವರು ತಿಳಿಸಿದ್ದರು.

ಹವಾಮಾನ ಇಲಾಖೆ(Indian Meteorological Department)ಯು ನೀಡಿರುವ ಹೊಸ ವರದಿಯ ಆಧಾರದಲ್ಲಿ ತಂಡಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಈ ನೂರು ತಂಡಗಳ ಪೈಕಿ 42 ಅನ್ನು ಆರು ರಾಜ್ಯಗಳಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಇನ್ನೂ 26 ತಂಡಗಳನ್ನು ಯಾವುದೇ ರಾಜ್ಯಗಳಿಗೆ ಕಳುಹಿಸಿಕೊಡಲು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.

ಇದನ್ನೂ ಓದಿ : West Bengal ಸಿಎಂ ಮಮತಾ ಬ್ಯಾನರ್ಜಿ ಸಹೋದರ ಕರೋನಾಗೆ ಬಲಿ

32 ತಂಡಗಳನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದ್ದು ಯಾವುದೇ ಕ್ಷಣದಲ್ಲಿ ಏರ್‌ಲಿಫ್ಟ್(Airlift) ಮಾಡಲು ಸಿದ್ಧವಾಗಿ ಇರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : PM Kisan: ನಿಮಗೂ ಪಿಎಂ ಕಿಸಾನ್ ಹಣ ಬಂದಿಲ್ಲವೇ? ತಕ್ಷಣವೇ ಈ ಕೆಲಸ ಮಾಡಿ

ಈ ತಂಡಗಳಲ್ಲಿ ಇರುವ ಸಿಬ್ಬಂದಿಗೆ ಈಗಾಗಲೇ ಕೋವಿಡ್ ಲಸಿಕೆ(Covid Vaccine) ನೀಡಲಾಗಿದೆ. ರಕ್ಷಣೆ, ಪರಿಹಾರ ಕಾರ್ಯಾಚರಣೆಗೆ ಅಗತ್ಯ ಉಪಕರಣಗಳನ್ನು ಒದಗಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : Corona ರೋಗಿಗಳಿಗೆ 'ಆಮ್ಲಜನಕ'ವಾಗಿ ಕಾರ್ಯನಿರ್ವಹಿಸಲಿದೆ DRDO ಡ್ರಗ್

ಎನ್‌ಡಿಆರ್‌ಎಫ್‌(NDRF)ನ ಒಂದು ತಂಡದಲ್ಲಿ 40 ಸಿಬ್ಬಂದಿ ಇದ್ದು, ಮರಕತ್ತರಿಸುವ ಉಪಕರಣ, ಬೋಟ್‌ಗಳು, ತುರ್ತು ವೈದ್ಯಕೀಯ ಸಾಮಗ್ರಿ, ಇತರ ರಕ್ಷಣೆ ಮತ್ತು ಪರಿಹಾರ ಸಾಮಗ್ರಿ ಒಳಗೊಂಡಿರುತ್ತದೆ.

ಇದನ್ನೂ ಓದಿ : Jio ಗ್ರಾಹಕರಿಗೆ ಗುಡ್ ನ್ಯೂಸ್, ಈ ಬಳಕೆದಾರರಿಗೆ ಸಿಗಲಿದೆ Free ಟಾಕ್ ಟೈಮ್

ಅರಬ್ಬಿ ಸಮುದ್ರದ ಲಕ್ಷದ್ವೀಪದಲ್ಲಿ ಕೇಂದ್ರಿಕೃತಗೊಂಡಿದ್ದ ತೌಕ್ತೆ ಚಂಡಮಾರುತ ಮತ್ತಷ್ಟು ತೀವ್ರಗೊಂಡಿದ್ದು ಗುಜರಾತ್‌ ಕರಾವಳಿಯತ್ತ ಸಾಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರ ಬೆಳಿಗ್ಗೆ ತಿಳಿಸಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News