Dynasty Politics ವಿರುದ್ಧ PM Modi ವಾಗ್ದಾಳಿ, 'BJP ಸಂಸದರ ಮಕ್ಕಳಿಗೆ ಟಿಕೆಟ್ ಸಿಗದಿರುವುದಕ್ಕೆ ನಾನೇ ಹೊಣೆ'

PM Modi On Dynasty Politics - ಪಕ್ಷದ ಎಲ್ಲಾ ಸಂಸದರು (BJP MPs) ತಮ್ಮ ತಮ್ಮ ಸಂಸದೀಯ ಕ್ಷೇತ್ರಗಳಲ್ಲಿ ಬಿಜೆಪಿಗೆ ಅಪೇಕ್ಷೆಗಿಂತ ಕಡಿಮೆ ಮತಗಳು ಚಲಾವಣೆಯಾಗಿರುವ 100 ಮತಗಟ್ಟೆಗಳನ್ನು ಗುರುತಿಸಿ ಕಾರಣಗಳನ್ನು ಕಂಡುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಸೂಚಿಸಿದ್ದಾರೆ ಎಂದು BJP ಪಕ್ಷದ ಸಂಸದೀಯ ಸಭೆಯಲ್ಲಿ ಉಪಸ್ಥಿತರಿದ್ದ ಬಿಜೆಪಿ ಸಂಸದ ಮನೋಜ್ ತಿವಾರಿ (Manoj Tiwari) ಹೇಳಿದ್ದಾರೆ.  

Written by - Nitin Tabib | Last Updated : Mar 15, 2022, 02:21 PM IST
  • ವಂಶಾವಳಿ ರಾಜಕೀಯದ ವಿರುದ್ಧ ಗರಂ ಆದ ಪ್ರಧಾನಿ ಮೋದಿ
  • ಸಂಸದರಿಗೆ ಮೂಲಮಂತ್ರ ನೀಡಿದ ಪ್ರಧಾನಿ ಮೋದಿ
  • ಟಿಕೆಟ್ ಸಿಗದೇ ಇರುವುದಕ್ಕೆ ನಾನೇ ಕಾರಣ ಎಂದ ಪ್ರಧಾನಿ
Dynasty Politics ವಿರುದ್ಧ PM Modi ವಾಗ್ದಾಳಿ, 'BJP ಸಂಸದರ ಮಕ್ಕಳಿಗೆ ಟಿಕೆಟ್ ಸಿಗದಿರುವುದಕ್ಕೆ ನಾನೇ ಹೊಣೆ' title=
PM Modi On Dynasty Politics (File Photo)

ನವದೆಹಲಿ: Dynasty Politics - ಭಾರತೀಯ ಜನತಾ ಪಕ್ಷವು (BJP) ವಂಶಾಡಳಿತ ರಾಜಕೀಯಕ್ಕೆ ವಿರುದ್ಧವಾಗಿದೆ ಮತ್ತು ಇದೇ ಕಾರಣದಿಂದ ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅನೇಕ ಸಂಸದರ ಪುತ್ರರು ಮತ್ತು ಪುತ್ರಿಯರಿಗೆ ಟಿಕೆಟ್ ಸಿಕ್ಕಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಂಗಳವಾರ ಹೇಳಿದ್ದಾರೆ. ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ಮಾತನಾಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

'ಸಂಸದರ ಪುತ್ರ, ಪುತ್ರಿಯರಿಗೆ ಟಿಕೆಟ್ ಸಿಗದಿರಲು ನಾನೇ ಕಾರಣ'
'ವಂಶಾಡಳಿತದ ರಾಜಕಾರಣದಿಂದ ಪ್ರಜಾಪ್ರಭುತ್ವಕ್ಕೆ ಅಪಾಯವಿದೆ, ಅದರ ವಿರುದ್ಧ ಹೋರಾಟ ನಡೆಸಬೇಕು' ಎಂದು ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 'ಪ್ರಜಾಪ್ರಭುತ್ವದ ರಕ್ಷಣೆಗಾಗಿ ಆರಂಭವಾಗಿರುವ ಈ ಸಮರದಲ್ಲಿ, ವಂಶಾಡಳಿತ ರಾಜಕೀಯದ ವಿರುದ್ಧ ಪಕ್ಷಾತೀತವಾಗಿ ಹೋರಾಟ ನಡೆಸಬೇಕಾಗಿದೆ. ಸಂಸದರ ಮಕ್ಕಳಿಗೆ  ಟಿಕೆಟ್ ಸಿಕ್ಕಿಲ್ಲ ಎಂದರೆ ಅದಕ್ಕೆ ನಾನೇ ಹೊಣೆ ಅಥವಾ ಹೀಗಾಗಿದ್ದರೆ ಅದಕ್ಕೆ ನಾನೇ ಜವಾಬ್ದಾರ ಎಂದು ಭಾವಿಸಬೇಕು. ಒಂದು ವೇಳೆ ಅದು ಪಾಪದ ಕೆಲಸವಾಗಿದ್ದರೆ, ಆ ಪಾಪದ ಕೆಲಸವನ್ನು ನಾನೇ ಮಾಡಿದ್ದೇನೆ ಮತ್ತು ಆದರ ಹೊರತಾಗಿಯೂ ಕೂಡ ನೀವೆಲ್ಲರೂ ನಮ್ಮೊಂದಿಗೆ ಇರಲು ನಿರ್ಧರಿಸಿರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ' ಎಂದು ಪ್ರಧಾನಿ ಹೇಳಿದ್ದಾರೆ.

ಸಂಘಟನೆಯ ಒಳಗೆ ನಡೆಯುತ್ತಿದೆ ಪ್ರಯತ್ನ
ಈ ರೀತಿಯ ರಾಜಕೀಯಕ್ಕೆ ಕಡಿವಾಣ ಹಾಕಲು ಬಿಜೆಪಿ ಪಕ್ಷ ತನ್ನ ಸಂಘಟನೆಯ ಒಳಗೆ ಒಂದು ಪ್ರಯತ್ನ ಆರಂಭಿಸಿದೆ. ಮೂಲಗಳ ಪ್ರಕಾರ, ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಯಾವುದೇ ದೊಡ್ಡ ಹುದ್ದೆಯಲ್ಲಿರುವ ಅಥವಾ ಸಂಸದರ ಪುತ್ರರು ಅಥವಾ ಪುತ್ರಿಯರಿಗೆ ಟಿಕೆಟ್ ಸಿಕ್ಕಿಲ್ಲ ಎಂದಾದರೆ ಅದಕ್ಕೆ ಅವರೇ (PM ) ಕಾರಣ ಎಂದು ಪ್ರಧಾನಿ ಪ್ರತಿಪಾದಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ-Karnataka Hijab Controversy: ಹಿಜಾಬ್ ವಿವಾದದಲ್ಲಿ HC ತೀರ್ಪಿನ ಕುರಿತು AIMIM ಮುಖ್ಯಸ್ಥ Asaduddin Owaisi ಹೇಳಿದ್ದೇನು?

ಈ ರೀತಿಯ ಮತಗಟ್ಟೆಗಳ ಮೇಲೆ ವಿಶೇಷ ಗಮನಹರಿಸಿ
ಇನ್ನೊಂದೆಡೆ, ಪಕ್ಷದ ಎಲ್ಲಾ ಸಂಸದರು ತಮ್ಮ ತಮ್ಮ ಸಂಸದೀಯ ಕ್ಷೇತ್ರಗಳಲ್ಲಿ ಬಿಜೆಪಿಗೆ ಅಪೇಕ್ಷೆಗಿಂತ ಕಡಿಮೆ ಮತಗಳು ಚಲಾವಣೆಯಾಗಿರುವ 100 ಮತಗಟ್ಟೆಗಳನ್ನು ಗುರುತಿಸಿ,  ಕಾರಣಗಳನ್ನು ಕಂಡುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ ಎಂದು BJP ಪಕ್ಷದ ಸಂಸದೀಯ ಸಭೆಯಲ್ಲಿ ಉಪಸ್ಥಿತರಿದ್ದ ಬಿಜೆಪಿ ಸಂಸದ ಮನೋಜ್ ತಿವಾರಿ ಹೇಳಿದ್ದಾರೆ. ಈ ಸಭೆಯಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವರಾಗಿರುವ ಎಸ್ ಜೈಶಂಕರ್ ಅವರು ಯುದ್ಧ ಪೀಡಿತ ಉಕ್ರೇನ್‌ನಿಂದ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ನಡೆಸಲಾದ 'ಆಪರೇಷನ್ ಗಂಗಾ' ಕುರಿತು ಪ್ರಸ್ತುತಿಯನ್ನು ನೀಡಿದ್ದಾರೆ. ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ, ಇತ್ತೀಚೆಗೆ ಬಿಡುಗಡೆಯಾದ 'ದಿ ಕಾಶ್ಮೀರ್ ಫೈಲ್ಸ್' ಚಲನಚಿತ್ರದ ಕುರಿತು ಶ್ಲಾಘನೆ ವ್ಯಕ್ತಪಡಿಸಿದ್ದಾರೆ ಮತ್ತು ಇಂತಹ ಚಲನಚಿತ್ರಗಳ ನಿರ್ಮಾಣ ಮುಂದುವರೆಯಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ-Hijab verdict: ‘ಹಿಜಾಬ್ ಒಳಗಿರುವ ಮತ ಗಟ್ಟಿಗೊಳಿಸಲು ಯತ್ನಿಸಿದ ಸಿದ್ದರಾಮಯ್ಯಗೆ ಹಿನ್ನಡೆ’

ಸಂಸದೀಯ ಪಕ್ಷದ ಸಭೆಯ ಆರಂಭದಲ್ಲಿ ಶ್ರೇಷ್ಠ ಗಾಯಕಿ ಲತಾ ಮಂಗೇಶ್ಕರ್ ಅವರ ಗೌರವಾರ್ಥ ಎರಡು ನಿಮಿಷಗಳ ಮೌನವನ್ನು ಆಚರಿಸಲಾಗಿದೆ ಎಂದು ಮೂಲಗಳು ವರದಿ ಮಾಡಿವೆ. ಫೆಬ್ರವರಿ 6 ರಂದು ಮಂಗೇಶ್ಕರ್ ನಿಧನರಾಗಿರುವುದು ಇಲ್ಲಿ ಉಲ್ಲೇಖನೀಯ.

ಇದನ್ನೂ ಓದಿ-ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸಬೇಕು, ವಿದ್ಯೆಗಿಂತ ಯಾವುದು ಹೆಚ್ಚಲ್ಲ : ಸಿಎಂ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News