ಬೆಂಗಳೂರು : ಹಿಜಾಬ್ ವಿವಾದಕ್ಕೆ (Hijab) ಸಂಬಂಧಿಸಿದಂತೆ ರಾಜ್ಯ ಹೈ ಕೋರ್ಟ್ ತೀರ್ಪು (Karnataka High Court) ಪ್ರಕಟಿಸಿದೆ. ಈ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai), ಇದು ನಮ್ಮ ಮಕ್ಕಳ ಭವಿಷ್ಯ ಮತ್ತು ಶಿಕ್ಷಣದ ಪ್ರಶ್ನೆ. ಎಲ್ಲರೂ ನ್ಯಾಯಾಲಯದ ತೀರ್ಪನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.
ಸಮವಸ್ತ್ರ ವಿಚಾರದಲ್ಲಿ ಕೋರ್ಟ್ ತೀರ್ಪು ನೀಡಿದೆ (Court Verdict On hijab). ಸಮವಸ್ತ್ರ ಆದೇಶವನ್ನು ಕೋರ್ಟ್ ಎತ್ತಿ ಹಿಡಿದಿದೆ. ಮಕ್ಕಳಿಗೆ ವಿದ್ಯೆಗಿಂತ ಹೆಚ್ಚು ಬೇರೆ ಯಾವುದೂ ಇಲ್ಲ. ತೀರ್ಪು ಜಾರಿ ವೇಳೆ ಎಲ್ಲರೂ ಸಹಕರಿಸಬೇಕು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಮನವಿ (Basavaraj Bommai) ಮಾಡಿದ್ದಾರೆ.
ಇದನ್ನೂ ಓದಿ : Electric Vehicle Charging: ಬೆಂಗಳೂರು ಹೃದಯ ಭಾಗದಲ್ಲಿ ಹೆಚ್ಚುವರಿ ಚಾರ್ಜಿಂಗ್ ಸ್ಟೇಷನ್ಗಳ ಅಳವಡಿಕೆಗೆ ಬೆಸ್ಕಾಂ ಸಿದ್ಧತೆ
ಎಲ್ಲಾರು ಶಾಂತಿ ಕಾಪಾಡಬೇಕು ಎಂದು ಎಲ್ಲಾ ಪಾಲಕರು, ಶಿಕ್ಷಕರು, ವಿದ್ಯಾರ್ಥಿಗಳ ಮತ್ತು ಸಮುದಾಯಗಳಿಗೆ ಕರೆ ನೀಡಿದ್ದಾರೆ. ಈ ತೀರ್ಪು ಒಪ್ಪಿಕೊಂಡು ಶಾಂತಿ ಕಾಪಾಡುವಂತೆ ಸಿಎಂ ಮನವಿ ಮಾಡಿದ್ದಾರೆ.
ವಿದ್ಯಾರ್ಥಿಗಳಿಗೆ ಶಿಕ್ಷಣ ಮುಖ್ಯ. ಹಾಗಾಗಿ ಹೈಕೋರ್ಟ್ (Karnataka High Court) ಆದೇಶವನ್ನು ವಿದ್ಯಾರ್ಥಿಗಳು ಪಾಲಿಸಬೇಕು. ತೀರ್ಪು ಬಂದ ನಂತರವೂ ತರಗತಿ ಬಹಿಷ್ಕರಿಸಬೇಡಿ. ಕಾನೂನು ಸುವ್ಯವಸ್ಥೆ ಪಾಲಿಸಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಯಾರೂ ಕಾನೂನು ಕೈಗೆತ್ತಿಕೊಳ್ಳೇಡಿ ಎಂದು ಸಮುದಾಯದ ಮುಖಂಡರಿಗೂ ಮನವಿ ಮಾಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ : HD Kumaraswamy : 'ತಾಜ್ ವೆಸ್ಟೆಂಡ್‌ನಲ್ಲಿ ರಾಸಲೀಲೆ ಮಾಡಲು ನಾನು ಹೋಗುತ್ತಿರಲಿಲ್ಲ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ