ಮಧ್ಯರಾತ್ರಿ ಭೂಕಂಪದಿಂದ ನಲುಗಿದ ನಿಕೋಬಾರ್ ದ್ವೀಪ; 4.5 ತೀವ್ರತೆ ದಾಖಲು

ನಿಕೋಬಾರ್ ದ್ವೀಪದಲ್ಲಿ ಮಧ್ಯರಾತ್ರಿ ಸುಮಾರು 2:04 ಕ್ಕೆ ಭೂಕಂಪದ ಅನುಭವವಾಗಿದ್ದು, ಭೂಕಂಪದ ತೀವ್ರತೆಯು ರಿಕ್ಟರ್ ಸ್ಕೇಲ್ನಲ್ಲಿ 4.5 ದಾಖಲಾಗಿತ್ತು.   

Last Updated : May 21, 2019, 09:15 AM IST
ಮಧ್ಯರಾತ್ರಿ ಭೂಕಂಪದಿಂದ ನಲುಗಿದ ನಿಕೋಬಾರ್ ದ್ವೀಪ; 4.5 ತೀವ್ರತೆ ದಾಖಲು title=

ನವದೆಹಲಿ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಸೋಮವಾರ ರಾತ್ರಿ ಭೂಕಂಪನ ಭೂಕಂಪಗಳು ಕಂಡುಬಂದವು. ನಿಕೋಬಾರ್ ದ್ವೀಪದಲ್ಲಿ ಮಧ್ಯರಾತ್ರಿ ಸುಮಾರು 2:04 ಕ್ಕೆ ಭೂಕಂಪದ ಅನುಭವವಾಗಿದ್ದು, ಭೂಕಂಪದ ತೀವ್ರತೆಯು ರಿಕ್ಟರ್ ಸ್ಕೇಲ್ನಲ್ಲಿ 4.5 ದಾಖಲಾಗಿತ್ತು. ಆದಾಗ್ಯೂ, ಯಾವುದೇ ಜೀವಹಾನಿಯ ಬಗ್ಗೆ ವರದಿಯಾಗಿಲ್ಲ.

ಇತ್ತೀಚಿಗೆ,  ನಿಕೋಬಾರ್ ದ್ವೀಪ ಮತ್ತು ಉತ್ತರಾಖಂಡ್ನಲ್ಲಿ ಶುಕ್ರವಾರ (ಮೇ 17) ಭೂಕಂಪದ ಬಗ್ಗೆ ವರದಿಯಾಗಿತ್ತು. ನಿಕೋಬಾರ್ ದ್ವೀಪದಲ್ಲಿ ಎರಡು ಬಾರಿ ಭೂಕಂಪದ ಅನುಭವವಾಗಿತ್ತು. ನಿಕೋಬಾರ್ ದ್ವೀಪದಲ್ಲಿ ಬೆಳಿಗ್ಗೆ 11:59 ಕ್ಕೆ ಮೊದಲ ಭೂಕಂಪನವು ಬಂದಿತು, ಅದರ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 4.5 ಕ್ಕೆ ಇತ್ತು. ಅರ್ಧ ಘಂಟೆಯ ನಂತರ ಮಧ್ಯಾಹ್ನ 12:30 ರ ಹೊತ್ತಿಗೆ ಎರಡನೆಯ ಬಾರಿಗೆ ಭೂಕಂಪದ ಅನುಭವವಾಗಿತ್ತು. ಆ ಸಮಯದಲ್ಲಿ ಅದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.9 ಆಗಿತ್ತು.

Trending News