ಚುನಾವಣಾ ಆಯೋಗ ಬಿಜೆಪಿ ಬ್ರ್ಯಾಂಚ್ ಆಫೀಸ್ ಆಗಿದೆ - ಚಂದ್ರಬಾಬು ನಾಯ್ಡು

ಮತಯಂತ್ರ ಬಳಕೆ ವಿಚಾರವಾಗಿ ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಚುನಾವಣಾ ಆಯೋಗ ಬಿಜೆಪಿ ಬ್ರ್ಯಾಂಚ್ ಆಫೀಸ್ ಆಗಿ ಪರಿವರ್ತನೆಯಾಗಿದೆ ಎಂದು ಕಿಡಿ ಕಾರಿದ್ದಾರೆ.

Last Updated : Apr 14, 2019, 04:13 PM IST
ಚುನಾವಣಾ ಆಯೋಗ ಬಿಜೆಪಿ ಬ್ರ್ಯಾಂಚ್ ಆಫೀಸ್ ಆಗಿದೆ - ಚಂದ್ರಬಾಬು ನಾಯ್ಡು title=

ನವದೆಹಲಿ: ಮತಯಂತ್ರ ಬಳಕೆ ವಿಚಾರವಾಗಿ ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಚುನಾವಣಾ ಆಯೋಗ ಬಿಜೆಪಿ ಬ್ರ್ಯಾಂಚ್ ಆಫೀಸ್ ಆಗಿ ಪರಿವರ್ತನೆಯಾಗಿದೆ ಎಂದು ಕಿಡಿ ಕಾರಿದ್ದಾರೆ.

ದೇಶದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ಮುಗಿದ ನಂತರ 20 ಕ್ಕೂಅಧಿಕ ಪಕ್ಷಗಳು ದೆಹಲಿಯಲ್ಲಿ ಸಭೆ ಸೇರಿ ಮತಯಂತ್ರದ ಬಗ್ಗೆ ಸಂಶಯ ವ್ಯಕ್ತಪಡಿಸಿವೆ.ಈ ವಿಚಾರವಾಗಿ ಎಲ್ಲ ಪ್ರತಿಪಕ್ಷಗಳನ್ನು ಒಗ್ಗೂಡಿಸಿರುವ ಚಂದ್ರಬಾಬು ನಾಯ್ಡು "ನಮಗೆ ಇವಿಎಮ್ಗಳ ಬಗ್ಗೆ ಅನುಮಾನ ಮೂಡುತ್ತಿದೆ.ಈಗ ಮತಪತ್ರದ ಮೂಲಕ ನಡೆಯುವ ಮತದಾನವನ್ನು ಮಾತ್ರ ನಂಬಬಹುದಾಗಿದೆ" ಎಂದರು.

ಇದೇ ವೇಳೆ ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದ ಅವರು "ಇಂತಹ ಒಂದು ಅಸೂಕ್ಷ್ಮ, ಅವಾಸ್ತವಿಕ, ಬೇಜವಾಬ್ದಾರಿಯುತ ಚುನಾವಣಾ ಆಯೋಗವನ್ನು ನಾನು ಎಂದಿಗೂ ನೋಡಿಲ್ಲ. ನೀವು ಪ್ರಜಾಪ್ರಭುತ್ವದ ಅಣಕ ಮಾಡುತ್ತಿದ್ದಿರಾ? ಚುನಾವಣಾ ಆಯೋಗವು ಬಿಜೆಪಿ ಬ್ರಾಂಚ್ ಆಫೀಸ್ ಆಗಿ ಮಾರ್ಪಟ್ಟಿದೆ" ಎಂದು ವಾಗ್ದಾಳಿ ನಡೆಸಿದರು.

" ಮುಂದುವರೆದ ದೇಶಗಳಾದ ಜರ್ಮನಿಯಂತಹ ದೇಶಗಳು 2005-09 ರ ಅವಧಿಯಲ್ಲಿ ಮತಯಂತ್ರವನ್ನು ಬಳಸಿದ್ದವು ಆದರೆ ಈಗ ಅದು ಮತಪತ್ರದ ಮೂಲಕ ಚುನಾವಣೆಯನ್ನು ನಡೆಸುತ್ತಿದೆ ಎಂದರು.

Trending News