ಚುನಾವಣೆಯಲ್ಲಿ ಕಾಸಿಗಾಗಿ ಸುದ್ದಿ, ಸುಪ್ರಿಂಗೆ ಚುನಾವಣಾ ಆಯೋಗದ ಮೊರೆ

    

Last Updated : Aug 23, 2018, 05:46 PM IST
ಚುನಾವಣೆಯಲ್ಲಿ ಕಾಸಿಗಾಗಿ ಸುದ್ದಿ, ಸುಪ್ರಿಂಗೆ ಚುನಾವಣಾ ಆಯೋಗದ ಮೊರೆ title=

ನವದೆಹಲಿ: ಚುನಾವಣೆ ಸಂದರ್ಭದಲ್ಲಿ ಕಾಸಿಗಾಗಿ ಸುದ್ದಿ ಸುದ್ದಿ ಪ್ರಕಟಣೆ ವಿಚಾರವಾಗಿ ಚುನಾವಣಾ ಆಯೋಗ ಈಗ ಸುಪ್ರಿಂಕೋರ್ಟ್ ಮೆಟ್ಟಿಲೇರಿದೆ.

ಈ ಹಿಂದೆ ಮೇ 2018 ರಲ್ಲಿ ದೆಹಲಿ ಹೈಕೋರ್ಟ್ ಕಾಸಿಗಾಗಿ ಸುದ್ದಿ ಪ್ರಕರಣದ ಆಧಾರದ ಮೇಲೆ ಅನರ್ಹತೆಗೊಂಡಿದ್ದ ಬಿಜೆಪಿಯ ನಾರೋತ್ತಮ್ ಮಿಶ್ರಾ ಅನರ್ಹತೆಯನ್ನು ವಜಾಗೊಳಿಸಿತ್ತು.  ಆದ್ದರಿಂದ ಇದನ್ನು ಈಗ ಚುನಾವಣಾ ಆಯೋಗ ಈ ಹೈಕೋರ್ಟ್ ನ ತೀರ್ಪನ್ನು ಪ್ರಶ್ನಿಸಿ ಸುಪ್ರಿಂಗೆ ಅರ್ಜಿಯನ್ನು ಸಲ್ಲಿಸಿದೆ.

ಚುನಾವಣಾ ಆಯೋಗದ ಮೂಲಗಳ ಪ್ರಕಾರ ಮೇಲ್ಮನವಿ ಅರ್ಜಿಯನ್ನು ಕಳೆದ ವಾರ ಸುಪ್ರಿಂ ನಲ್ಲಿ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ. ಚುನಾವಣಾ ಆಯೋಗ  ತನ್ನ ಅರ್ಜಿಯಲ್ಲಿ ದೆಹಲಿ ಹೈಕೋರ್ಟ್ ಮಿಶ್ರಾ ಅವರ ಅನರ್ಹತೆ ವಿಚಾರದಲ್ಲಿ ಚುನಾವಣಾ ಆಯೋಗದ ಆದೇಶವನ್ನು ಉಲ್ಲಂಘಿಸಿದೆ. ಅಲ್ಲದೆ ಕಾಸಿಗಾಗಿ ಸುದ್ದಿ ವಿಚಾರದಲ್ಲಿ ದೆಹಲಿ ಹೈಕೋರ್ಟ್ ನೀಡಿರುವ ತೀರ್ಪು ಕಾಸಿಗಾಗಿ ಸುದ್ದಿ ವಿರುದ್ದದ ಹೋರಾಟವನ್ನು ದುರ್ಬಲಗೊಳಿಸುವಂತೆ ಮಾಡಿದೆ.ಚುನಾವಣೆಯ ಸಂದರ್ಭದಲ್ಲಿ ಕಾಸಿಗಾಗಿ ಸುದ್ದಿ ಪ್ರಕರಣಗಳ ವಿಚಾರಣೆಯಲ್ಲಿ ಚುನಾವಣಾ ಆಯೋಗದ ಅಧಿಕಾರವನ್ನು ಸಹ ಅದು ದುರ್ಬಲಗೊಳಿಸಿದೆ ಎಂದು ಚುನಾವಣಾ ಆಯೋಗ ಅಭಿಪ್ರಾಯಪಟ್ಟಿದೆ.

Trending News