ನವದೆಹಲಿ: ಮಾಜಿ ಮುಖ್ಯಮಂತ್ರಿಗಳು ಜೀವನ ಪೂರ್ತಿ ಸರ್ಕಾರಿ ಬಂಗಲೆಗಳಲ್ಲಿ ವಾಸಿಸುವಂತಿಲ್ಲ ಎಂದು ರಾಜಸ್ಥಾನ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ವಸುಂಧರಾ ರಾಜೆ ಮುಖ್ಯಮಂತ್ರಿಯಾಗಿದ್ದಾಗ ರಾಜಸ್ಥಾನ ಮಂತ್ರಿಗಳ ಸಂಬಳ ಮಸೂದೆ 2017 ಗೆ ತಿದ್ದುಪಡಿ ತಂದಿದ್ದರು. ಈ ಕಾಯ್ದೆ ಅನ್ವಯ ಮಾಜಿ ಮುಖ್ಯಮಂತ್ರಿಗಳು ಸರ್ಕಾರಿ ಬಂಗಲೆಗಳಲ್ಲಿ ವಾಸಿಸುವುದಲ್ಲದೆ ಅವರಿಗೆ ಫೋನ್ ಸೌಲಭ್ಯಗಳು, ಚಾಲಕರು, ವೈಯಕ್ತಿಕ ಕಾರ್ಯದರ್ಶಿಗಳು ಮತ್ತು 10 ಜನರ ಸಿಬ್ಬಂದಿಯನ್ನು ಸರ್ಕಾರದ ವೆಚ್ಚದಲ್ಲಿ ನೀಡಬೇಕಾಗಿತ್ತು. ಇದರಿಂದಾಗಿ ರಾಜ್ಯ ಬೊಕ್ಕಸಕ್ಕೆ ರೂ.ವಾರ್ಷಿಕವಾಗಿ 22 ಲಕ್ಷ ರೂ.ಹೊರೆಯಾಗಿತ್ತು.
ಇಂದು ಹಿಂದಿನ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದ ಹೈಕೋರ್ಟ್ ಇದನ್ನು ಕಾನೂನು ಬಾಹಿರ ಎಂದು ತೀರ್ಪು ನೀಡಿದೆ. ಮಾಜಿ ಮುಖ್ಯಮಂತ್ರಿಗಳಿಗೆ ಐದು ವರ್ಷಗಳ ಅಥವಾ ಅದಕ್ಕಿಂತ ಕಡಿಮೆ ಅವಧಿಯನ್ನು ಹೊಂದಿರಲಿ, ಈ ಸೌಲಭ್ಯಗಳನ್ನು ವಿಸ್ತರಿಸುವುದು ಸಮಾನತೆಯ ತತ್ವಕ್ಕೆ ಮಾಡಿದ ಅವಮಾನ ಎಂದು ಅದು ವ್ಯಾಖ್ಯಾನಿಸಿದೆ. ಬ್ರಿಟಿಷ್ ಕಾದಂಬರಿಕಾರ ಜಾರ್ಜ್ ಆರ್ವೆಲ್ ಅವರ ಮಾತನ್ನು ಉಲ್ಲೇಖಿಸಿ ನ್ಯಾಯಾಲಯವು, 'ಎಲ್ಲ ಪ್ರಾಣಿಗಳು ಸಮಾನವಾಗಿ ಜನಿಸಿವೆ ಆದರೆ ಅದರಲ್ಲಿ ಕೆಲವು ಇನ್ನು ಹೆಚ್ಚು ಸಮಾನ' ಎಂದು ಈ ಹಿಂದಿನ ಸರ್ಕಾರವನ್ನು ಜಾರಿಗೆ ತಂದಿದ್ದ ತಿದ್ದುಪಡಿಗೆ ಪೂರ್ಣ ವಿರಾಮ ನೀಡಿತು.
ಈಗ ವಸುಂಧರಾ ರಾಜೆ ಮುಖ್ಯಮಂತ್ರಿ ಹುದ್ದೆಯಿಂದ ಅವರು ಕೆಳಗಿಳಿದ ನಂತರವೂ ಅವರು ಅನಂತ್ ವಿಜೈ ಎಂಬ ಬಂಗಲೆಯಲ್ಲಿ ವಾಸಿಸುತ್ತಿದ್ದರು. ಈಗ ರಾಜಸ್ತಾನದ ಹೈಕೋರ್ಟ್ ಆದೇಶದಿಂದಾಗಿ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಲಾಗಿದೆ.