ನವದೆಹಲಿ: ಎರಡನೇ ಅವಧಿಗೆ ಎನ್‍ಡಿಎ ಅಧಿಕಾರಕ್ಕೆ ಬರಲಿದೆ ಎಂದು ಎಲ್ಲಾ ಎಕ್ಸಿಟ್ ಪೋಲ್ ಸಮೀಕ್ಷೆಗಳು ಭವಿಷ್ಯ ನುಡಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಶಶಿ ತರೂರ್ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಎಕ್ಸಿಟ್ ಪೋಲ್ ಗಳ ಸಮೀಕ್ಷೆಗಳು ತಪ್ಪಾಗಿವೆ. ಕಳೆದ ವಾರ ಆಸ್ಟ್ರೇಲಿಯಾದಲ್ಲಿ ಕಳೆದ ವಾರ ಪ್ರಕಟವಾದ 56 ವಿವಿಧ ಎಕ್ಸಿಟ್ ಪೋಲ್ ಸಮೀಕ್ಷೆಗಳು ತಪ್ಪಾಗಿವೆ ಎಂಬುದು ಸಾಬೀತಾಗಿದೆ. ಅದರಂತೆ ಭಾರತದಲ್ಲಿಯೂ ಸಹ ಸಾಕಷ್ಟು ಸಮೀಕ್ಷೆಗಳು ಸತ್ಯವನ್ನು ಬಿಂಬಿಸುವುದಿಲ್ಲ. ಏಕೆಂದರೆ ಅವುಗಳಿಗೆ ಸರ್ಕಾರದ ಬಗ್ಗೆ ಭಯವಿದೆ. ಹಾಗಾಗಿ ಮೇ 23ರಂದು ಪ್ರಕಟವಾಗುವ ಲೋಕಸಭಾ ಚುನಾವಣೆ 2019ರ ಫಲಿತಾಂಶದವರೆಗೂ ಕಾಯೋಣ" ಎಂದಿದ್ದಾರೆ.
I believe the exit polls are all wrong. In Australia last weekend, 56 different exit polls proved wrong. In India many people don’t tell pollsters the truth fearing they might be from the Government. Will wait till 23rd for the real results.
— Shashi Tharoor (@ShashiTharoor) May 19, 2019
ಲೋಕಸಭಾ ಚುನಾವಣೆಯ ಕಡೆಯ ಹಂತದ ಮತದಾನ ಭಾನುವಾರ ಪೂರ್ಣಗೊಂಡ ಬೆನ್ನಲ್ಲೇ ಎಲ್ಲಾ ಎಕ್ಸಿಟ್ ಪೋಲ್ ಸಮೀಕ್ಷೆಗಳೂ ಎನ್ಡಿಎ ಸರ್ಕಾರ ಸ್ಪಷ್ಟ ಬಹುಮತ ಗಳಿಸಿ ಮತ್ತೊಂದು ಅವಧಿಗೆ ಸರ್ಕಾರ ರಚಿಸಲಿದೆ ಎಂದು ಹೇಳಿದ್ದವು. ಹೀಗಾಗಿ ವಿರೋಧ ಪಕ್ಷಗಳು ಈ ಸಮೀಕ್ಷೆಗಳಿಗೆ ವಿರೋಧ ವ್ಯಕ್ತಪಡಿಸಿದ್ದು, ಮೇ 23ರ ಫಲಿತಾಂಶ ಯಾವುದು ಸತ್ಯ ಎಂಬುದನ್ನು ಸಾಬೀತುಮಾಡುತ್ತವೆ ಎಂದು ಹೇಳಿವೆ.